ವಿಶ್ವ ಸ್ಕ್ವಾಷ್ ಚಾಂಪಿಯನ್ಶಿಪ್ ಜೋಶ್ನಾ ಚಿನ್ನಪ್ಪ ಹೊರಕ್ಕೆ
Team Udayavani, Oct 29, 2019, 11:03 PM IST
ಹೊಸದಿಲ್ಲಿ: ವಿಶ್ವದ 12ನೇ ರ್ಯಾಂಕಿನ ಭಾರತದ ಜೋಶ್ನಾ ಚಿನ್ನಪ್ಪ ಅವರು ಸದ್ಯ ಸಾಗುತ್ತಿರುವ ಪಿಎಸ್ಎ ವನಿತಾ ವಿಶ್ವ ಸ್ಕ್ವಾಷ್ ಚಾಂಪಿಯನ್ಶಿಪ್ನ ಪ್ರಿ-ಕ್ವಾರ್ಟರ್ಫೈನಲ್ಸ್ನಲ್ಲಿ ಸೋತು ಹೊರಬಿದ್ದಿದ್ದಾರೆ.
ಪ್ರಿ-ಕ್ವಾರ್ಟರ್ಫೈನಲ್ಸ್ನಲ್ಲಿ ಅವರು ವಿಶ್ವದ ಎರಡನೇ ರ್ಯಾಂಕಿನ ಈಜಿಪ್ಟ್ನ ಎಲ್ ನೂರ್ ಎಲ್ ಶೆರ್ಬಿನಿ ಕೈಯಲ್ಲಿ 0-3 ಅಂತರದಿಂದ ಶರಣಾದರು. ದ್ವಿತೀಯ ಸುತ್ತಿನಲ್ಲಿ ಅವರ ಎದುರಾಳಿ ಹಾಂಕಾಂಗ್ನ ಹೊ ತಿಝಿ ಲಾಕ್ ಅವರು ಗಾಯದಿಂದಾಗಿ ಪಂದ್ಯ ತ್ಯಜಿಸಿದ್ದರಿಂದ ಜೋಶ್ನಾ ಮುನ್ನಡೆದಿದ್ದರು.
ಹಾಲಿ ವಿಶ್ವ ಚಾಂಪಿಯನ್ ಆಗಿರುವ ಶೆರ್ಬಿನಿ ತನ್ನ ಅಮೋಘ ಆಟವನ್ನು ಮುಂದುವರಿಸಿದರು. 11-5, 11-3, 11-6 ಅಂತರದಿಂದ ಜಯ ಸಾಧಿಸುವ ಮೂಲಕ ಶೆರ್ಬಿನಿ ಕ್ವಾರ್ಟರ್ಫೈನಲ್ ತಲುಪಿದರು. ಶರ್ಬಿನಿ ಸತತ ಎರಡನೇ ಬಾರಿಗೆ ಜೋಶ್ನಾ ವಿರುದ್ಧ ಜಯ ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್