ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ
Team Udayavani, Nov 29, 2021, 5:12 AM IST
ಹ್ಯೂಸ್ಟನ್ (ಯುಎಸ್ಎ): ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಮಣಿಕಾ ಬಾತ್ರಾ ಪದಕ ಗೆದ್ದು ಇತಿಹಾಸ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಎರಡೂ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅವರು ಸೋಲನುಭವಿಸಿ ನಿರಾಸೆ ಮೂಡಿಸಿದರು.
ಮಿಶ್ರ ಡಬಲ್ಸ್ನಲ್ಲಿ ಮಣಿಕಾ ಬಾತ್ರಾ-ಜಿ. ಸಥಿಯನ್ ಜಪಾನಿನ ಟೊಮಕಾಜು ಹರಿಮೊಟೊ-ಹಿನಾ ಹಯಾತಾ ವಿರುದ್ಧ 1-3 ಅಂತರದಿಂದ ಎಡವಿದರು (5-11, 2-11, 11-7, 9-11).
ಅನಂತರದ ವನಿತಾ ಡಬಲ್ಸ್ನಲ್ಲಿ ಮಣಿಕಾ ಬಾತ್ರಾಗೆ ಕ್ವಾರ್ಟರ್ ಫೈನಲ್ ದಾಟಲಾಗಲಿಲ್ಲ. ಇಲ್ಲಿ ಅವರು ಅರ್ಚನಾ ಕಾಮತ್ ಜತೆಗೂಡಿ ಸ್ಪರ್ಧೆಗಿಳಿದಿದ್ದರು.
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಲಕ್ಸೆಂಬರ್ಗ್ನ ಸಾರಾ ಡೆ ನುಟ್-ನಿ ಕ್ಸಿಯಾ ಲಿಯಾನ್ ಭಾರತದ ಜೋಡಿಯನ್ನು 3-0 ಅಂತರದಿಂದ ಪರಾಭವಗೊಳಿಸಿತು (11-1, 11-6, 11-8).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಯರಡಾಲ ಗ್ರಾಮ; ಇಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ