ವಿಶ್ವ ಕುಸ್ತಿ: ದೀಪಕ್‌ ಪೂನಿಯಾ ನಂ.1

65 ಕೆಜಿ: ನಂ.1 ಸ್ಥಾನ ಕಳಕೊಂಡ ಭಜರಂಗ್‌ ಪೂನಿಯಾ

Team Udayavani, Sep 28, 2019, 9:51 AM IST

DEEPAK-PUNIA

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಕ್‌ ಪೂನಿಯಾ ನೂತನ ವಿಶ್ವ ಕುಸ್ತಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಗೌರವ ಪಡೆದಿದ್ದಾರೆ. ಅವರು 86 ಕೆಜಿ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಕುಸ್ತಿಪಟು ಎನಿಸಿದ್ದಾರೆ.

ಆದರೆ 65 ಕೆಜಿ ವಿಭಾಗದಲ್ಲಿ ಅಗ್ರ ರ್‍ಯಾಂಕಿಂಗ್‌ ಹೊಂದಿದ್ದ ಭಜರಂಗ್‌ ಪೂನಿಯಾ ಈ ಸ್ಥಾನ ಕಳೆದುಕೊಂಡಿದ್ದಾರೆ. ವನಿತಾ ವಿಭಾಗದಲ್ಲಿ ವಿನೇಶ್‌ ಪೋಗಟ್‌ ನಂ.2 ಆಗಿದ್ದಾರೆ.

20ರ ಹರೆಯದ, ಇದೇ ಮೊದಲ ಸಲ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಅಖಾಡಕ್ಕಿಳಿದಿದ್ದ ದೀಪಕ್‌ ಪೂನಿಯಾ ಕಾಲಿನ ನೋವಿನಿಂದಾಗಿ ಫೈನಲ್‌ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಇರಾನಿನ ಹಸನ್‌ ಯದಾನಿ ಚಾಂಪಿಯನ್‌ ಆಗಿ ಮೂಡಿಬಂದರು. ಆದರೆ ಈ ಚಾಂಪಿಯನ್‌ ಕುಸ್ತಿಪಟುವಿಗಿಂತ ದೀಪಕ್‌ ಪೂನಿಯಾ 4 ಹೆಚ್ಚು ಅಂಕಗಳನ್ನು ಹೊಂದಿದ್ದಾರೆ (82).

ಈ ವರ್ಷ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದದ್ದು ದೀಪಕ್‌ ಪೂನಿಯಾ ಅವರ ರ್‍ಯಾಂಕಿಂಗ್‌ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಯಾಸರ್‌ ಡೊಗು ಕೂಟದಲ್ಲಿ ಬೆಳ್ಳಿ, ಏಶ್ಯನ್‌ ಚಾಂಪಿಯನ್‌ಶಿಪ್‌ ಮತ್ತು ಸಸಾರಿ ಟೂರ್ನಮೆಂಟ್‌ನಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.

2ನೇ ಸ್ಥಾನಕ್ಕೆ ಇಳಿದ ಭಜರಂಗ್‌
ಭಜರಂಗ್‌ ಪೂನಿಯಾ ನಂಬರ್‌ ವನ್‌ ಎಂಬ ಹಿರಿಮೆಯೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ಇಳಿದಿದ್ದರು. ಆದರೆ 65 ಕೆಜಿ ವಿಭಾಗದಲ್ಲಿ ಕಂಚಿಗೆ ತೃಪ್ತರಾದ ಅವರೀಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ (63 ಅಂಕ). ಚಿನ್ನ ಗೆದ್ದ ರಶ್ಯದ ಗಾಜಿಮುರಾದ್‌ ರಶಿದೋವ್‌ ನೂತನ ನಂ.1 ಕುಸ್ತಿಪಟು ಎನಿಸಿದ್ದಾರೆ.
57 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ರವಿ ದಹಿಯಾ ಮೊದಲ ಸಲ ಟಾಪ್‌-5 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು 5ನೇ ರ್‍ಯಾಂಕಿಂಗ್‌. ರಾಹುಲ್‌ ಅವಾರೆ ನಂ.2 ಆಗಿದ್ದಾರೆ.

ವಿನೇಶ್‌ 4 ಸ್ಥಾನ ಜಿಗಿತ
ವಿಶ್ವ ಕೂಟದಲ್ಲಿ ಕಂಚು ಗೆದ್ದು ಟೋಕಿಯೊ ಒಲಿಂಪಿಕ್‌ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾದ ವಿನೇಶ್‌ ಪೋಗಟ್‌ ಅವರದು 4 ಸ್ಥಾನಗಳ ನೆಗೆತ. 53 ಕೆಜಿ ವಿಭಾಗದಲ್ಲಿ ಅವರೀಗ ವಿಶ್ವದ ನಂ.2 ಕುಸ್ತಿಪಟು.

ಟಾಪ್ ನ್ಯೂಸ್

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಡ್ರಗ್ಸ್‌ ದಂಧೆ- ನೈಜೀರಿಯಾ ಪ್ರಜೆ ಬಂಧನ

ಡ್ರಗ್ಸ್‌ ದಂಧೆ: ನೈಜೀರಿಯಾ ಪ್ರಜೆ ಬಂಧನ

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

3kannada

ಕನ್ನಡ ಬೆಳವಣಿಗೆ ಮಾಧ್ಯಮದಲ್ಲಿ ಅಡಕ

ನಾಲ್ವರು ವಕೀಲರು ಸೇರಿ ಐವರ ಸೆರೆ

ನಾಲ್ವರು ವಕೀಲರು ಸೇರಿ ಐವರ ಸೆರೆ

2wine

ಮದ್ಯ ಅಂಗಡಿ ತೆರವಿಗೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.