ಅಂಡರ್ 23 ವಿಶ್ವ ಕುಸ್ತಿ: ಬೆಳ್ಳಿಗೆ ಕೊರಳೊಡ್ಡಿದ ಪೂಜಾ ಗೆಹ್ಲೋಟ್
Team Udayavani, Nov 2, 2019, 1:27 PM IST
ಬುಡಾಪೆಸ್ಟ್( ಹಂಗೇರಿ) : ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪೂಜಾ ಗೆಹ್ಲೋಟ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಜಪಾನಿನ ಹರುನೊ ಒಕುನೊ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು.
2017ರ ಪೋಲ್ಯಾಂಡ್ ಕೂಟದಲ್ಲೂ ಭಾರತದ ಕುಸ್ತಿ ಪಟು ರಿತು ಪೋಗಟ್ ಬೆಳ್ಳಿ ಪದಕ ಪಡೆದಿದ್ದರು.
53 ಕೆಜಿ ವಿಭಾಗದಲ್ಲಿಕಣಕ್ಕಿಳಿದಿರುವ ಪೂಜಾ ಗುರುವಾರ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯ ಜೆಯ್ನೆಪ್ ವಿರುದ್ಧ 8-4 ಅಂತರದಿಂದ ಗೆದ್ದು ಫೈನಲ್ ಪ್ರವೇಶ ಮಾಡಿದ್ದರು.