“ಮಲ್ಲಯುದ್ಧ ವಿಶಾರದ’ನ ನಾಡಿನಲ್ಲಿ ಕುಸ್ತಿ ಪಂದ್ಯಾವಳಿ

Team Udayavani, Sep 27, 2017, 11:43 AM IST

27-STATE-26.jpg

ಉಡುಪಿ: ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ವತಿಯಿಂದ ಮಂಗಳೂರು ವಿ.ವಿ. ಸಹಯೋಗದಲ್ಲಿ 2 ದಿನಗಳ ಮಂಗಳೂರು ವಿ.ವಿ. ಮಟ್ಟದ ಅಂತರ್‌ ಕಾಲೇಜು ಕುಸ್ತಿ ಪಂದ್ಯಾಟ ಮಂಗಳವಾರ “ಮಲ್ಲಯುದ್ಧ ವಿಶಾರದ’ ಕೃಷ್ಣನ ನಾಡಾದ ಉಡುಪಿಯಲ್ಲಿ ಆರಂಭಗೊಂಡಿತು. 

ಮಂಗಳೂರು ವಿ.ವಿ. ವ್ಯಾಪ್ತಿಯ ಪುರುಷರ ವಿಭಾಗದಲ್ಲಿ 31 ಕಾಲೇಜಿನ 178 ಸ್ಪರ್ಧಿಗಳು, ಮಹಿಳೆಯರ ವಿಭಾಗದಲ್ಲಿ 18 ಕಾಲೇಜಿನ 78 ಸ್ಪರ್ಧಿಗಳು ಭಾಗವಹಿಸಿದ್ದು, ಇದೇ ಮೊದಲ ಬಾರಿ ಎನ್ನುವಂತೆ ದಾಖಲೆಯ ಒಟ್ಟು 249 ಸ್ಪರ್ಧಿಗಳು ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಉಡುಪಿಯ 12 ಕಾಲೇಜುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಪುರುಷರ ವಿಭಾಗದಲ್ಲಿ 57 ಕೆ.ಜಿ.ಯಿಂದ  125 ಕೆ.ಜಿ.ವರೆಗೆ, ಮಹಿಳಾ ವಿಭಾಗದಲ್ಲಿ 43 ಕೆ.ಜಿ.ಯಿಂದ 74 ಕೆ.ಜಿ.ವರೆಗೆ ಒಟ್ಟು 8 ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ. 

ಹಳ್ಳಿ ಆಟಕ್ಕೂ ಪ್ರಾಶಸ್ತ್ಯ ಸಿಗಲಿ
ಪೂರ್ಣಪ್ರಜ್ಞ ಶಿಕ್ಷಣ ಸಮೂಹದ ಅಧ್ಯಕ್ಷ, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕ್ರೀಡಾಕೂಟ ಉದ್ಘಾಟಿಸಿ, ಆಶೀರ್ವ ದಿಸಿದರು. “ನಗರವಾಸಿಗಳು ಪೇಟೆಯ ತಿಂಡಿ, ಆಹಾರದಿಂದ ಬೇಸತ್ತು, ಹಳ್ಳಿಯ ಊಟಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದು, ಹಾಗೇ ನಮ್ಮ ಗ್ರಾಮೀಣ ಆಟಗಳಾದ ಕುಸ್ತಿ, ಲಗೋರಿ, ಹಗ್ಗದ ಆಟಗಳಿಗೆ ಪ್ರಾಶಸ್ತ್ಯ ಸಿಗಬೇಕಿದೆ. ಸೋತವರಿಂದ ನಾವು ಗೆದ್ದಿದ್ದೇವೆ ಅನ್ನುವುದನ್ನು ಗೆದ್ದವರು ಮರೆಯಬಾರದು. ಪುರಾಣದ ಶ್ರೀ ಕೃಷ್ಣ- ಬಲರಾಮ, ಹನುಮಂತ, ಭೀಮಸೇನ, ಆಚಾರ್ಯ ಮಧ್ವರು ಇವರೆಲ್ಲ ಕುಸ್ತಿ ಆಟದಲ್ಲಿ ಪರಿಣತಿ ಪಡೆದಿದ್ದರು’ ಎಂದರು. 

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ| ಕಿಶೋರ್‌ ಕುಮಾರ್‌ ಸಿ.ಕೆ., ದ.ಕ. ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಪೂರ್ಣಪ್ರಜ್ಞ ಶಿಕ್ಷಣ ಸಮೂಹದ ಕಾರ್ಯದರ್ಶಿ ಡಾ| ಜಿ. ಎಸ್‌. ಚಂದ್ರಶೇಖರ್‌, ಕೋಶಾಧಿಕಾರಿ ಪ್ರದೀಪ್‌ ಕುಮಾರ್‌, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್‌ ಉಪಸ್ಥಿತರಿದ್ದರು.  ಕಾಲೇಜಿನ ಶ್ರೀಕಾಂತ್‌ ರಾವ್‌ ಸ್ವಾಗತಿಸಿದರು. ಶಿವಕುಮಾರ್‌ ವಂದಿಸಿದರು. 

ಆಳ್ವಾಸ್‌ ಪ್ರಾಬಲ್ಯ
8 ಬೇರೆ ಬೇರೆ ವಿಭಾಗದಲ್ಲಿ 10 ಕಾಲೇಜುಗಳಾದ ಉಡುಪಿಯ ಪೂರ್ಣಪ್ರಜ್ಞ, ಎಂಜಿಎಂ, ಮೂಡಬಿದಿರೆ ಯ ಆಳ್ವಾಸ್‌, ಆಳ್ವಾಸ್‌ ಬಿಪಿಎಡ್‌, ಮಂಗಳೂರಿನ ಕಾರ್‌ಸ್ಟ್ರೀಟ್‌ ಕಾಲೇಜು, ಬ್ರಹ್ಮಾವರದ ಎಸ್‌ಎಂಎಸ್‌, ಬಸೂÅರಿನ  ಎಸ್‌ಬಿಎಂ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ, ಕೋಟದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದ ಎಸ್‌ವಿಎಸ್‌ನ ವಿದ್ಯಾರ್ಥಿಗಳು ಸೆಮಿಫೈನಲ್‌ಗೇರಿದ್ದು, ಹೆಚ್ಚಿನ ಸ್ಪರ್ಧೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ.

ಟಾಪ್ ನ್ಯೂಸ್

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ahmedabad franchise

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಜೊತೆಗೆ ಯುವ ಆಟಗಾರನನ್ನು ಸೆಳೆದ ಅಹಮದಾಬಾದ್ ಫ್ರಾಂಚೈಸಿ

Kohli will have to give up his ego and play under new leader: Kapil

ವಿರಾಟ್ ಕೊಹ್ಲಿ ತನ್ನ ಇಗೋ ಮರೆತು ಆಡಬೇಕಿದೆ..: ಮಾಜಿ ನಾಯಕನ ಸಲಹೆ

bumrah

ನಾಯಕತ್ವದ ಜವಾಬ್ದಾರಿ ನೀಡಿದರೆ ಸಂತೋಷ: ಜಸ್ಪ್ರೀತ್ ಬುಮ್ರಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ವಿರಾಟ್‌ ಕೊಹ್ಲಿಗೆ ಪರ್ಯಾಯ ಟೆಸ್ಟ್‌ ಕ್ಯಾಪ್ಟನ್‌ ಯಾರು?

ವಿರಾಟ್‌ ಕೊಹ್ಲಿಗೆ ಪರ್ಯಾಯ ಟೆಸ್ಟ್‌ ಕ್ಯಾಪ್ಟನ್‌ ಯಾರು?

MUST WATCH

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

ಹೊಸ ಸೇರ್ಪಡೆ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.