ಧೋನಿ ಟೀಂ ಇಂಡಿಯಾಗೆ ಬಂದರೆ ನನಗೆ ಖಂಡಿತ ಅವಕಾಶ ಸಿಗುವುದಿಲ್ಲ: ಸಹಾ
Team Udayavani, May 18, 2020, 10:59 AM IST
ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ವಿಕೆಟ್ ಹಿಂದಿನ ಸ್ಥಾನವನ್ನು ತುಂಬಿದ್ದು ಬಂಗಾಲದ ಆಟಗಾರ ವೃದ್ಧಿಮಾನ್ ಸಹಾ. ಈ ಮಧ್ಯೆ ಸಹಾ ತಾನು ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಆ ಸಂದರ್ಭವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ರಾಜಿನಾಮೆ ನೀಡಿದ್ದರು. ಆದರೆ ವೃದ್ಧಿಮಾನ್ ಸಹಾ ಅದಕ್ಕೂ ಮೊದಲೇ ಒಂದು ಟೆಸ್ಟ್ ಪಂದ್ಯ ಆಡಿದ್ದರು. ಆದರೆ ವಿಕೆಟ್ ಕೀಪರ್ ಆಗಿ ಅಲ್ಲ, ಫೀಲ್ಡರ್ ಆಗಿ.
ಖಾಸಿ ಕ್ರೀಡಾ ಪತ್ರಿಕೆಗೆ ಮಾತನಾಡುತ್ತ ಸಹಾ ತನ್ನ ಮೊದಲ ಟೆಸ್ಟ್ ಪಂದ್ಯದ ಮೆಲುಕು ಹಾಕಿದ್ದಾರೆ. ನಾಗ್ಪುರ ಟೆಸ್ಟ್ ಪಂದ್ಯಕ್ಕೂ ಮುನ್ನ ಲಕ್ಷ್ಮಣ್ ಗಾಯಗೊಂಡಿದ್ದರು. ನಾನು 15ರ ಬಳಗದಲ್ಲಿದ್ದೆ. ಲಕ್ಷ್ಮಣ್ ಬದಲಿಗೆ ರೋಹಿತ್ ಶರ್ಮಾರನ್ನು ಕರೆಸಲಾಗಿತ್ತು. ಆದರೆ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸುವಾಗ ನಾನು ಮತ್ತು ರೋಹಿತ್ ಢಿಕ್ಕಿ ಹೊಡೆದುಕೊಂಡಿದ್ದೆವು. ರೋಹಿತ್ ಸ್ವಲ್ಪ ಗಾಯಗೊಂಡಿದ್ದರು. ಆದರೆ ನಾನು ಆಡುವ ಬಗ್ಗೆ ಧೋನಿ ಹೇಳಿರಲಿಲ್ಲ.
ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆ ತೆರಳುತ್ತದ್ದ ಧೋನಿ, ನನಗೆ ಕರೆದು ನೀನು ಇವತ್ತು ಆಡುತ್ತಿದ್ದೀಯ ಎಂದರು. ಆಡುವ ಬಗ್ಗೆ ಗೊತ್ತಿರದ ನಾನು ಸರಿಯಾದ ಅಭ್ಯಾಸ ಮಾಡದೇ ಡೇಲ್ ಸ್ಟೇನ್, ಮಾರ್ಕೆಲ್ ರನ್ನು ಎದುರಿಸಿದ್ದೇನೆ ಎಂದರು.
ಆದರೆ ತಂಡದಲ್ಲಿ ಧೋನಿ ಇರುವವರೆಗೆ ನನಗೆ ಸ್ಥಾನ ದೊರೆಯುತ್ತಿರಲಿಲ್ಲ. ಹಾಗಾಗಿ ನನಗೆ ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡುತ್ತಿದ್ದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ