ಡಬ್ಲ್ಯುಟಿಎ ಫೈನಲ್ಸ್: ಮೊದಲ ಪ್ರಶಸ್ತಿ ಜಯಿಸಿದ ಬಾರ್ಟಿ
Team Udayavani, Nov 4, 2019, 1:08 AM IST
ಶೆಂಜೆನ್ (ಚೀನ): ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿ, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮೊದಲ ಸಲ “ಡಬ್ಲ್ಯುಟಿಎ ಫೈನಲ್ಸ್’ ಕೂಟದ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ರವಿವಾರ “ಶೆಂಜೆನ್ ಬೇ ನ್ಪೋರ್ಟ್ಸ್ ಸೆಂಟರ್’ನಲ್ಲಿ ನಡೆದ ಫೈನಲ್ನಲ್ಲಿ ಅವರು ಹಾಲಿ ಚಾಂಪಿಯನ್, ಉಕ್ರೇನಿನ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ನೇರ ಸೆಟ್ಗಳ ಜಯ ಸಾಧಿಸಿ “ಬಿಲ್ಲಿ ಜೀನ್ ಕಿಂಗ್ ಟ್ರೋಫಿ’ಯನ್ನು ತಮ್ಮದಾಗಿಸಿಕೊಂಡರು. ಒಂದು ಗಂಟೆ, 26 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಈ ಗೆಲುವಿಗಾಗಿ ಆ್ಯಶ್ಲಿ ಬಾರ್ಟಿ 4.42 ಮಿಲಿಯನ್ ಡಾಲರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಇದು ಟೆನಿಸ್ ಕೂಟದ ಅತ್ಯಧಿಕ ಮೊತ್ತದ ಬಹುಮಾನವಾಗಿದೆ.
ವನಿತಾ ಡಬಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಟೈಮಿಯಾ ಬಬೋಸ್ (ಹಂಗೇರಿ)-ಕ್ರಿಸ್ಟಿನಾ ಲಡೆನೋವಿಕ್ (ಫ್ರಾನ್ಸ್) ಯಶಸ್ವಿಯಾಗಿದ್ದಾರೆ. ಫೈನಲ್ನಲ್ಲಿ ಅವರು ಬಾಬೊìರಾ ಸ್ಟ್ರೈಕೋವಾ- ಶೀ ಸು ವೀ ವಿರುದ್ಧ 6-1, 6-3 ಅಂತರದ ಗೆಲುವು ಸಾಧಿಸಿದರು. ಫ್ರೆಂಚ್ ಓಪನ್ ಚಾಂಪಿಯನ್ ಕೂಡ ಆಗಿರುವ ಬಬೋಸ್-ಲಡೆನೋವಿಕ್ 2008ರ ಬಳಿಕ ಇಲ್ಲಿ ಟ್ರೋಫಿ ಉಳಿಸಿಕೊಂಡ ಮೊದಲ ಜೋಡಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ