ರೋಮನ್ ನೋವಿನ ವಿದಾಯ;WWE ಚಾಂಪಿಯನ್ಗೆ ಮಾರಕ ಕಾಯಿಲೆ!
Team Udayavani, Oct 24, 2018, 10:59 AM IST
ವಾಷಿಂಗ್ಟನ್: ಡಬ್ಲ್ಯೂಡಬ್ಲ್ಯೂಇನಲ್ಲಿ ನಾಲ್ಕು ಬಾರಿ ಚಾಂಪಿಯನ್ ಎಣಿಸಿಕೊಂಡಿದ್ದ ರೋಮನ್ ರೈನ್ಸ್ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಹೋರಾಟ ಲೋಕಕ್ಕೆ ಭಾವಪೂರ್ಣ ವಿದಾಯ ಹೇಳಿ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮತ್ತು ದುಃಖ ತಂದಿಟ್ಟಿದ್ದಾರೆ.
ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ 33 ರ ಹರೆಯದ ಕುಸ್ತಿ ಪಟು ರೋಮನ್ ರೈನ್ಸ್ ಹಲವು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ನಾಲ್ಕು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದರು.
ಅಚ್ಚರಿಯೆಂದರೆ ಕಳೆದ 11 ವರ್ಷಗಳಿಂದ ಮಾರಕ ಲ್ಯುಕೇಮಿಯಾ(ರಕ್ತದ ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿದ್ದ ರೋಮನ್ ರೈನ್ಸ್ ಅವರಿಗೆ ಇದೀಗ ಕಾಯಿಲೆ ಉಲ್ಬಣವಾಗಿರುವ ಹಿನ್ನಲೆಯಲ್ಲಿ ವಿದಾಯ ಹೇಳುವುದು ಅನಿವಾರ್ಯವಾಗಿದೆ.
‘ಥ್ಯಾಂಕ್ ಯೂ ರೋಮನ್’ ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಬೆಂಬಲ ನೀಡುತ್ತಿದ್ದು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳೊಂದಿಗೆ ಮತ್ತೆ ಅಖಾಡಕ್ಕೆ ಮರಳುವುದಾಗಿ ರೋಮನ್ ಅಭಿಮಾನಿಗಳಿಗೆ ವಿಶ್ವಾಸ ತುಂಬಿದ್ದಾರೆ.
ರಣಕಣದಲ್ಲಿ ಜಿದ್ದಿಗೆ ಬಿದ್ದು ಹೋರಾಟ ನಡೆಸಿದ್ದ ಇತರ ಕುಸ್ತಿ ಪಟುಗಳೂ ರೋಮನ್ ಅವರನ್ನು ಅಪ್ಪಿಕೊಂಡು ಭಾವಪೂರ್ಣ ವಿದಾಯ ಹೇಳಿದ್ದಾರೆ. ಅಭಿಮಾನಿಗಳು ಕಣ್ಣೀರಿನ ಹೊಳೆಯನ್ನು ಹರಿಸಿದ್ದಾರೆ.
ಮಾರಕ ಕಾಯಿಲೆಯಿಂದ ಕುಂದಿ ಹೋಗುತ್ತಿರುವ ರೋಮನ್ ಚಿನ್ನದ ಬೆಲ್ಟ್ ಮರಳಿಸಿ ವಿದಾಯ ಹೇಳುವ ವೇಳೆ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ