Udayavni Special

ಯೋಧಾ-ಬೆಂಗಾಲ್‌ ಬಿಗ್‌ ಫೈಟ್‌ ನಿರೀಕ್ಷೆ


Team Udayavani, Jul 24, 2019, 6:22 AM IST

yoda-bengal

ಹೈದರಾಬಾದ್‌: ಪ್ರೊ ಕಬಡ್ಡಿ 7ನೇ ಆವೃತಿಯ ಮಂಗಳವಾರ ವಿಶ್ರಾಂತಿಯ ಬಳಿಕ ಮತ್ತೆ ಹೋರಾಟ ಆರಂಭವಾಗಿದೆ. ಬುಧವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಬೆಂಗಾಲ್‌ ವಾರಿಯರ್ ಹೋರಾಡಲು ಸಜ್ಜಾಗಿವೆೆ. ಈ ಪಂದ್ಯದಲ್ಲಿ ಇತ್ತಂಡಗಳು ಗೆಲುವಿನ ಶುಭಾರಂಭಗೈಯಲು ಹಾತೊರೆಯುತ್ತಿವೆ.

ಈ ಬಾರಿ ಇತ್ತಂಡಗಳಲ್ಲಿಯೂ ಕೆಲವು ಆಟಗಾರರು ಬದಲಾವಣೆಯಾಗಿದ್ದು ಕಳೆದ ಬಾರಿ ತೋರಿದ ಪ್ರದರ್ಶನದ ಮೇಲೆ ತಂಡದ ಬಲವನ್ನು ಹೇಳಲು ಸಾಧ್ಯವಿಲ್ಲ. ಆದರೂ ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ಸಮಾನ ಆಟಗಾರರನ್ನು ಹೊಂದಿದ್ದು ಬಲಿಷ್ಠವಾಗಿವೆ.

ಬೆಂಗಾಲ್‌ಗೆ ಮಣಿಂದರ್‌ ಬಲ
ನಾಯಕ ಮಣಿಂದರ್‌ ಸಿಂಗ್‌ ಅವರ ರೈಡಿಂಗ್‌ ಸ್ಕಿಲ್‌ ಬೆಂಗಾಲ್‌ ವಾರಿಯರ್ಗೆ ಹೆಚ್ಚಿನ ಬಲ ನೀಡಲಿದೆ. ನೀಲ ಕಾಲಿನ ಮಣಿಂದರ್‌ ಎದುರಾಳಿ ಕೋಟೆಯಿಂದ ಅಂಕ ಕದಿಯುದರಲ್ಲಿ ಬಲು ಫೇಮಸ್‌. ಕಳೆದ ಋತುವಿನಲ್ಲಿ ಬೆಂಗಾಲ್‌ ಪರ ಆಡಿದ್ದ ಅವರು ಸೂಪರ್‌ ರೈಡ್‌ ಮೂಲಕ ಹಲವು ಬಾರಿ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ತಂಡ ಇವರ ರೈಡಿಂಗ್‌ ಬಲವನ್ನೇ ನಂಬಿಕೊಂಡಿದೆ.

ಕಳೆದ ಬಾರಿ ತಮಿಳ್‌ ತಲೈವಾಸ್‌ ಪರ ಆಡಿದ್ದ ಕನ್ನಡಿಗ ಸುಕೇಶ್‌ ಹೆಗ್ಡೆ ಬೆಂಗಾಲ್‌ ತಂಡದಲ್ಲಿದ್ದಾರೆ. ಕೆ. ಪ್ರಪಂಚನ್‌ ಕೂಡ ಬೆಂಗಾಲ್‌ ತಂಡದಲ್ಲಿದ್ದು ರೈಡಿಂಗ್‌ ವಿಭಾಗದಲ್ಲಿ ಹೆಚ್ಚಿನ ಬಲ ತುಂಬಿ ದಂತಾಗಿದೆ. ಪ್ರೊ ಕಬಡ್ಡಿ ಕೂಟದ ಸೂಪರ್‌ ಟ್ಯಾಕಲ್‌ ಸ್ಪೆಶಲಿಸ್ಟ್‌ಗಳಲ್ಲಿ ಒಬ್ಬರಾದ ಜೀವ ಕುಮಾರ್‌ ಬೆಂಗಾಲ್‌ ತಂಡದಲ್ಲಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌.

ಯೋಧಾ ಸಮರ್ಥ ತಂಡ
ಯುಪಿ ಯೋಧಾ ಬೆಂಗಾಲ್‌ ತಂಡಕ್ಕಿಂತ ಎಲ್ಲ ವಿಭಾಗದಲ್ಲೂ ಸಮರ್ಥ ಎನ್ನಲಡ್ಡಿಯಿಲ್ಲ. ರೈಡಿಂಗ್‌, ಡಿಫೆಂಡಿಂಗ್‌ ವಿಭಾಗದಲ್ಲಿ ಸಮರ್ಥ ಆಟಗಾರರನ್ನು ಹೊಂದಿದೆ. ಕಳೆದ ಬಾರಿ ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಮೋನು ಗೋಯತ್‌ ಈ ಬಾರಿ ಯುಪಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರೈಡಿಂಗ್‌ ವಿಭಾಗದಲ್ಲಿ ರಿಷಾಂಕ್‌ ದೇವಾಡಿಗ, ಮೋನು ಗೋಯತ್‌ ತಂಡಕ್ಕೆ ಆಸರೆಯಾದರೆ ನಾಯಕ ನಿತೇಶ್‌ ಕುಮಾರ್‌ ಡಿಫೆಂಡಿಂಗ್‌ನಲ್ಲಿ ಎದುರಾಳಿ ರೈಡರ್‌ಗಳನ್ನು ರೈಟ್‌ ಕಾರ್ನರ್‌ನಲ್ಲಿ ಕಟ್ಟಿಕಾಕುವ‌ ತಂತ್ರಗಾರಿಕೆ ಹೊಂದಿದ್ದಾರೆ.

ಗೆಲುವಿನ ಶುಭಾರಂಭಕ್ಕೆ ಡೆಲ್ಲಿ ಕಾತುರ
ಆಡಿದ ಎರಡು ಪಂದ್ಯಗಳಲ್ಲಿ ಸೋತಿರುವ ಟೈಟಾನ್ಸ್‌ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಬಲಿಷ್ಠ ಡಿಫೆಂಡಿಂಗ್‌ ತಂಡವಾದ ದಬಾಂಗ್‌ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಡೆಲ್ಲಿ ತಂಡದ ಬಲವೇ ಡಿಫೆಂಡಿಂಗ್‌, ಜೋಗಿಂದರ್‌ ಶರ್ಮಾ, ವಿಶಾಲ್‌ ಮಾನೆ, ಡೈವಿಂಗ್‌ ಆ್ಯಂಕಲ್‌ ಹೋಲ್ಡ್‌ ಸ್ಪೆಶಲಿಸ್ಟ್‌ ರವೀಂದ್ರ ಫೆಹಲ್‌ ಅವರ ಡಿಫೆಂಡಿಂಗ್‌ ತಂತ್ರಗಾರಿಕೆಯ ಮುಂದೆ ಎಷ್ಟೇ ಸ್ಟಾರ್‌ ರೈಡರ್‌ಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಡೆಲ್ಲಿ ಪರ ಈ ಬಾರಿ ಸ್ಟಾರ್‌ ರೈಡರ್ ಕಾಣಿಸಿಕೊಂಡಿಲ್ಲ. ಮಿರಾಜ್‌ ಶೇಖ್‌ ಹೊರತುಪಡಿಸಿದರೆ ಮತ್ತೆಲ್ಲ ರೈಡರ್ ಹೊಸಬರು.

ಕಳೆದ ಬಾರಿಯು ಮುಂಬಾ ತಂಡದಲ್ಲಿದ್ದ ಸ್ಟಾರ್‌ ರೈಡರ್‌ ಸಿದ್ಧಾರ್ಥ್ ದೇಸಾಯಿ ಈ ಬಾರಿ ಟೈಟಾನ್ಸ್‌ ತಂಡದಲ್ಲಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಆಡಿದ 2 ಪಂದ್ಯದಲ್ಲಿಯೂ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಇದರಿಂದ ಇತರ ಸದಸ್ಯರೂ ಧೈರ್ಯ ಕಳೆದುಕೊಳ್ಳುವಂತಾಗಿದೆ.ವಿಶಾಲ್‌ ಭಾರದ್ವಾಜ್‌, ರಜನೀಸ್‌ ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

ಕನ್ನಡಿಗರ ಮುಖಾಮುಖೀ
ಕನ್ನಡಿಗರಾದ ರಿಷಾಂಕ್‌ ದೇವಾಡಿಗ ಮತ್ತು ಸುಕೇಶ್‌ ಹೆಗ್ಡೆ ಪಂದ್ಯದ ಪ್ರಮುಖ ಆಕರ್ಷಣೆ. ಇಬ್ಬರೂ ರೈಡಿಂಗ್‌ನಲ್ಲಿ ಎದುರಾಳಿ ಕೋಟೆಗೆ ನುಗ್ಗಿ ಅಂಕ ಪಡೆಯುವುದರಲ್ಲಿ ನಿಸ್ಸೀಮರು. ಆದರೆ ಇವರಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

5.87 ಕೋಟಿ ಅಮೆರಿಕನ್ನರ ಅಂಚೆ ಮತ

5.87 ಕೋಟಿ ಅಮೆರಿಕನ್ನರ ಅಂಚೆ ಮತ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

chennai super kings out of playoff race 2020

ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

ಬೆನ್ ಸ್ಟೋಕ್ಸ್ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ರಾಜಸ್ಥಾನ್ ಗೆ ಭರ್ಜರಿ ಜಯ

ಬೆನ್ ಸ್ಟೋಕ್ಸ್ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ರಾಜಸ್ಥಾನ್ ಗೆ ಭರ್ಜರಿ ಜಯ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.