ಕೊಹ್ಲಿ ಹುಟ್ಟುಹಬ್ಬಕ್ಕೆ ಅನುಷ್ಕಾ ಹೇಳಿದ್ದೇನು ಗೊತ್ತಾ?
Team Udayavani, Nov 5, 2018, 4:11 PM IST
ವಿಶ್ವ ಕ್ರಿಕೆಟ್ನಲ್ಲಿ ಎಲ್ಲರ ಗಮನ ಸೆಳೆದು ತನ್ನದೇ ಛಾಪು ಮೂಡಿಸುತ್ತಿರುವ ಟೀಂ ಇಂಡಿಯಾದ ನಾಯಕ “ವಿರಾಟ್ ಕೊಹ್ಲಿ’ಗೆ ಇಂದು 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೀಗ ಅವರ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾ ಸೇರಿದಂತೆ, ಕೊಹ್ಲಿ ಗೆಳೆಯರು, ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಸಿದ್ದಾರೆ.
ಪತಿ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭಾಶಯ ಕೋರಿರುವ ಅನುಷ್ಕಾ, “ಕೊಹ್ಲಿ ಹುಟ್ಟಿಗೆ ಕಾರಣರಾದ ದೇವರಿಗೆ ಧನ್ಯವಾದ’ ಎಂದು ಹೇಳುತ್ತಾ ತಮ್ಮಿಬ್ಬರ ಆತ್ಮೀಯ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಆ ಫೋಟೋಗೆ ತರಹೇವಾರಿ ಕಾಮೆಂಟ್ಗಳು ವ್ಯಕ್ತವಾಗಿದೆ.
Wishing you a lot of success and happiness in the year ahead. Happy Birthday, @imvkohli! pic.twitter.com/HcXX88rXJn
— Sachin Tendulkar (@sachin_rt) November 5, 2018
ಇನ್ನು ಟಿ-20, ಟೆಸ್ಟ್, ಏಕದಿನ ಸಹಿತ ಎಲ್ಲ ವರ್ಗದ ಕ್ರಿಕೆಟ್ನಲ್ಲಿ ಒಂದರ ಹಿಂದೊಂದರಂತೆ ತನ್ನದೇಯಾದಂತಹ ದಾಖಲೆಗಳನ್ನು ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಕ್ರಿಕೆಟ್ ದಂತಕಥೆ ಸಚಿನ್, ಮೊಹಮದ್ ಕೈಫ್, ಬಿಸಿಸಿಐ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದು, ಭಾರತದ ಕ್ರಿಕೆಟ್ ಖ್ಯಾತಿಯನ್ನು ಕೊಹ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭಹಾರೈಸಿದ್ದಾರೆ.