ಭಾರತದ ಕೈತಪ್ಪಿದ ಐತಿಹಾಸಿಕ ಬಂಗಾರ
Team Udayavani, Oct 16, 2018, 6:00 AM IST
ಬ್ಯೂನಸ್ ಐರಿಸ್ (ಆರ್ಜೆಂಟೀನಾ): ಯೂತ್ ಒಲಿಂಪಿಕ್ಸ್ ಹಾಕಿ (5ಎಸ್) ಫೈನಲ್ ಪ್ರವೇಶಿಸಿ ಭಾರೀ ನಿರೀಕ್ಷೆ ಹುಟ್ಟಿಸಿದ ಭಾರತದ ಪುರುಷರ ಹಾಗೂ ವನಿತೆಯರ ತಂಡಗಳೆರಡೂ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿವೆ. ಇದರಿಂದ ಭಾರತಕ್ಕೆ ಐತಿಹಾಸಿಕ ಚಿನ್ನ ಕೈತಪ್ಪಿದೆ. ಆದರೆ ಇವು ಯೂತ್ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಒಲಿದ ಮೊದಲ ಪದಕಗಳೆಂಬುದು ವಿಶೇಷ.
ರವಿವಾರ ತಡರಾತ್ರಿ ನಡೆದ ಪುರುಷರ ಹಾಕಿ ಪೈನಲ್ನಲ್ಲಿ ಭಾರತ ತಂಡ ಮಲೇಶ್ಯ ಎದುರು 2-4 ಗೋಲುಗಳ ಅಂತರದಿಂದ ಪರಾಭವಗೊಂಡಿತು. ಅನಂತರ ನಡೆದ ವನಿತಾ ಫೈನಲ್ಸ್ನಲ್ಲಿ ಭಾರತ ಅತಿಥೇಯ ಅರ್ಜೆಂಟೀನಾ ವಿರುದ್ಧ 1-3 ಗೋಲುಗಳಿಂದ ಎಡವಿತು. ಮಲೇಶ್ಯ ಹಾಗೂ ಆರ್ಜೆಂಟೀನಾ ತಂಡಗಳು ಯೂತ್ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಹಾಕಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ. ಆರ್ಜೆಂಟೀನಾ ಪುರುಷರ ತಂಡ ಹಾಗೂ ಚೀನದ ವನಿತಾ ತಂಡ ಕಂಚಿನ ಪದಕ ಜಯಿಸಿವೆ.
ಮುನ್ನಡೆ ಉಳಿಸಿಕೊಳ್ಳದ ಭಾರತ
ಪುರುಷರ ಫೈನಲ್ನ ಆರಂಭದ ಮೊದಲ 2ನೇ ನಿಮಿಷದಲ್ಲಿ ಭಾರತದ ತಂಡ ನಾಯಕ ವಿವೇಕ್ ಸಾಗರ್ ಪ್ರಸಾದ್ ಗೋಲಿನ ಖಾತೆ ತೆರೆದರು. ಆದರೆ 2 ನಿಮಿಷದ ಬಳಿಕ ಫಿರ್ದಾಸ್ ರೊಸಿª ಗೋಲಿನ ಮೂಲಕ ಮಲೇಶ್ಯ ಸಮಬಲ ಸಾಧಿಸಿತು. ಅನಂತರ ಪ್ರಸಾದ್ ಮತ್ತೂಂದು ಗೋಲು ಹೊಡೆದು ಮೊದಲಾರ್ಧದಲ್ಲಿ ಭಾರತಕ್ಕೆ 2-1 ಮುನ್ನಡೆ ತಂದಿತ್ತರು. ಆದರೆ ಈ ಮುನ್ನಡೆಯನ್ನು ಉಳಿಸಿಕೊಳ್ಳಲಾಗಲಿಲ್ಲ.
ಆರ್ಜೆಂಟೀನಾ ಅಜೇಯ
ಅಜೇಯವಾಗಿ ಫೈನಲ್ ಪ್ರವೇಶಿಸಿದ ಅತಿಥೇಯ ಅರ್ಜೆಂಟೀನಾ ವನಿತಾ ತಂಡ ಫೈನಲ್ನಲ್ಲೂ ಇದೇ ಮಟ್ಟವನ್ನು ಕಾಯ್ದು ಕೊಂಡು ಭಾರತವನ್ನು ಕಟ್ಟಿಹಾಕಿತು. ಪಂದ್ಯದ 49ನೇ ಸೆಕೆಂಡ್ ನಲ್ಲೇ ಮುಮ್ತಾಜ್ ಖಾನ್ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಕೊಡಿಸಿದರಾದರೂ, ತಂಡದ ಆರ್ಭಟ ಈ ಒಂದು ಗೋಲಿಗಷ್ಟೇ ಸೀಮಿತಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ