ಪಾಕ್ ಕ್ರಿಕೆಟಿಗನ ಶೂ ಲೇಸ್ ಕಟ್ಟಿದ ಚಾಹಲ್: ವಿಡಿಯೋ ವೈರಲ್
Team Udayavani, Sep 21, 2018, 6:00 AM IST
ದುಬೈ: ಕ್ರಿಕೆಟಿಗರ ನಡುವೆ ಕ್ರಿಕೆಟ್ ಹೊರತಾದ ಅಪರೂಪದ ಘಟನೆಯೊಂದಕ್ಕೆ ಬುಧವಾರ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯ ಸಾಕ್ಷಿಯಾಯಿತು.
ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ಉಸ್ಮಾನ್ ಖಾನ್ ಶೂವಿನ ಲೇಸ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಬಿಚ್ಚಿ ಹೋಗಿದೆ. ಈ ವೇಳೆ ಉಸ್ಮಾನ್ಗೆ ಭಾರತದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ ಲೇಸ್ ಕಟ್ಟುವ ಮೂಲಕ ಸೌಹಾರ್ದತೆ ಮರೆದಿದ್ದಾರೆ.
ಟ್ವೀಟರ್ನಲ್ಲಿ ಚಾಹಲ್ ಕೆಲಸಕ್ಕೆ ಭಾರೀ ಪ್ರಶಂಸೆಗೆ ವ್ಯಕ್ತವಾಗಿದೆ. ನಿಜವಾದ ಕ್ರಿಕೆಟ್ ಸ್ಫೂರ್ತಿ ಅಂದರೆ ಇದುವೇ ಎಂದು ಹಲವಾರು ಟ್ವೀಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.