ಜಿಂಬಾಬ್ವೆಗೆ ಟೆಸ್ಟ್‌  ಗೆಲುವಿನ ಕನಸು

Team Udayavani, Jul 18, 2017, 9:08 AM IST

18-sports-9.gif

ಕೊಲಂಬೊ: ಸರಣಿಯ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿನ ಕನಸಿನಲ್ಲಿ ವಿಹರಿಸುತ್ತಿದೆ. ಆದರೆ ಆತಿಥೇಯ ಶ್ರೀಲಂಕಾ ಮುಂದೆಯೂ ಗೆಲುವಿನ ಸಮಾನ ಅವಕಾಶ ತೆರೆಯಲ್ಪಟ್ಟಿದೆ. ಅಲ್ಲಿಗೆ ಮಂಗಳವಾರದ ಅಂತಿಮ ದಿನದಾಟ ಹೆಚ್ಚು ರೋಚಕತೆಯಿಂದ ಕೂಡಿರುವುದು ಖಂಡಿತ.

ಗೆಲುವಿಗೆ 388 ರನ್ನುಗಳ ಗುರಿ ಪಡೆದಿರುವ ಶ್ರೀಲಂಕಾ, 4ನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟಿಗೆ 170 ರನ್‌ ಮಾಡಿದೆ. ಉಳಿದ ಪೂರ್ತಿ ದಿನದ ಆಟದಲ್ಲಿ, 7 ವಿಕೆಟ್‌ ನೆರವಿನಿಂದ 218 ರನ್‌ ತೆಗೆಯುವ ಸವಾಲು ಲಂಕೆಯ ಮುಂದಿದೆ. ಇದೇನೂ ಅಸಾಧ್ಯವಲ್ಲ. ಆದರೆ ಜಿಂಬಾಬ್ವೆ ಬೌಲರ್‌ಗಳ ಕೈ ಮೇಲಾಗಿ, ಕೆಲವು ವಿಕೆಟ್‌ಗಳು ಪಟಪಟನೆ ಉದುರಿದರೆ ಆಗ ಲಂಕೆಗೆ ಗಂಡಾಂತರ ತಪ್ಪಿದ್ದಲ್ಲ.

60 ರನ್‌ ಮಾಡಿರುವ ಕುಸಲ್‌ ಮೆಂಡಿಸ್‌, 17 ರನ್‌ ಗಳಿಸಿರುವ ಏಂಜೆಲೊ ಮ್ಯಾಥ್ಯೂಸ್‌ ಕ್ರೀಸ್‌ ಆಕ್ರಮಿಸಿಕೊಂಡಿದ್ದಾರೆ. ಕೊನೆಯ ಅವಧಿಯ 11 ಓವರ್‌ಗಳನ್ನು ಇವರಿಬ್ಬರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಸೇಲ ಗುಣರತ್ನೆ, ನಿರೋಷನ್‌ ಡಿಕ್ವೆಲ್ಲ, ಕುಸಲ್‌ ಪೆರೆರ ಬ್ಯಾಟಿಂಗಿಗೆ ಬರಬೇಕಿದೆ. ಇವರಲ್ಲಿ ಒಂದು ಜೋಡಿ ಕ್ರೀಸಿಗೆ ಅಂಟಿಕೊಂಡರೂ ಜಿಂಬಾಬ್ವೆಯ ಕನಸು ಛಿದ್ರಗೊಳ್ಳಬಹುದು.

ದಾಖಲೆಯ ವಿಷಯಕ್ಕೆ ಬಂದರೆ, ಶ್ರೀಲಂಕಾ ನೆಲದಲ್ಲಿ ಸರ್ವಾಧಿಕ ರನ್‌ ಬೆನ್ನಟ್ಟಿ ಗೆದ್ದ ಹೆಗ್ಗಳಿಕೆ ಪಾಕಿಸ್ಥಾನಕ್ಕೆ ಸಲ್ಲುತ್ತದೆ. ಶ್ರೀಲಂಕಾ ವಿರುದ್ಧದ 2015ರ ಪಲ್ಲೆಕಿಲೆ ಪಂದ್ಯದಲ್ಲಿ ಅದು 3ಕ್ಕೆ 382 ರನ್‌ ಬಾರಿಸಿ ಗೆಲುವಿನ ಬಾವುಟ ಹಾರಿಸಿತ್ತು. ಶ್ರೀಲಂಕಾದ ಅತ್ಯಧಿಕ ಚೇಸಿಂಗ್‌ ಮೊತ್ತ 9ಕ್ಕೆ 352 ರನ್‌. ಈ ಗೆಲುವು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ದಾಖಲಾಗಿತ್ತು.

ಮೆಂಡಿಸ್‌ ಹೋರಾಟ ಜಾರಿ: ಲಂಕೆಗೆ ದಿಮುತ್‌ ಕರುಣಾರತ್ನೆ (49) ಮತ್ತು ಉಪುಲ್‌ ತರಂಗ (27) ಭರವಸೆಯ ಆರಂಭವನ್ನೇ ಒದಗಿಸಿದರು. 19.2 ಓವರ್‌ ನಿಭಾಯಿಸಿ 58 ರನ್‌ ಪೇರಿಸಿದರು. ಕರುಣಾರತ್ನೆ-ಮೆಂಡಿಸ್‌ ಅವರ ದ್ವಿತೀಯ ವಿಕೆಟ್‌ ಜತೆಯಾಟವೂ ಹೆಚ್ಚು ಜವಾಬ್ದಾರಿಯುತವಾಗಿತ್ತು. ಇವರಿಂದ ಭರ್ತಿ 50 ರನ್‌ ಒಟ್ಟುಗೂಡಿತು. ಆದರೆ ನಾಯಕ ದಿನೇಶ್‌ ಚಂಡಿಮಾಲ್‌ (15) ಕಪ್ತಾನನ ಆಟವಾಡುವಲ್ಲಿ ವಿಫ‌ಲರಾದರು. ಅಲ್ಲಿಗೆ ಲಂಕಾ 133 ರನ್ನಿಗೆ 3ನೇ ವಿಕೆಟ್‌ ಕಳೆದುಕೊಂಡಿತು.

ರಾಜ ಮೊದಲ ಶತಕ: ಇದಕ್ಕೂ ಮುನ್ನ 6ಕ್ಕೆ 252 ರನ್‌ ಮಾಡಿ 3ನೇ ದಿನದಾಟ ಮುಗಿಸಿದ್ದ ಜಿಂಬಾಬ್ವೆ 377ರ ತನಕ ತನ್ನ ದ್ವಿತೀಯ ಇನ್ನಿಂಗ್ಸ್‌ ಬೆಳೆಸಿತು. 97ರಲ್ಲಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಸಿಕಂದರ್‌ ರಾಜ ಬಹಳ ಬೇಗನೆ ಮೊದಲ ಶತಕದ ಸಂಭ್ರಮ ಆಚರಿಸಿದರು. 8ನೇ ವಿಕೆಟ್‌ ರೂಪದಲ್ಲಿ ಔಟಾದ ಅವರು 127 ರನ್ನುಗಳ ಕೊಡುಗೆ ಸಲ್ಲಿಸಿದರು. 205 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. 

37 ರನ್‌ ಮಾಡಿ ಆಡುತ್ತಿದ್ದ ಮಾಲ್ಕಂ ವಾಲರ್‌ 68 ರನ್‌ ಬಾರಿಸಿದರು (98 ಎಸೆತ, 8 ಬೌಂಡರಿ). ರಾಜ-ವಾಲರ್‌ ಅವರ 7ನೇ ವಿಕೆಟ್‌ ಜತೆಯಾಟದಲ್ಲಿ 154 ರನ್‌ ಹರಿದು ಬಂತು. ನಾಯಕ ಗ್ರೇಮ್‌ ಕ್ರೆಮರ್‌ ಕೂಡ ಬ್ಯಾಟಿಂಗಿನಲ್ಲಿ ಮಿಂಚಿ 48 ರನ್‌ ಕಾಣಿಕೆ ಸಲ್ಲಿಸಿದರು (94 ಎಸೆತ, 5 ಬೌಂಡರಿ). ಶ್ರೀಲಂಕಾ ಪರ ಸ್ಪಿನ್ನರ್‌ ರಂಗನ ಹೆರಾತ್‌ 133 ರನ್ನಿಗೆ 6 ವಿಕೆಟ್‌ ಉಡಾಯಿಸಿದರು. ಈ ಪಂದ್ಯದಲ್ಲಿ ಹೆರಾತ್‌ ಸಾಧನೆ 249ಕ್ಕೆ 11 ವಿಕೆಟ್‌. 

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ-356 ಮತ್ತು 377 (ರಾಜ 127, ವಾಲರ್‌ 68, ಕ್ರೆಮರ್‌ 48, ಹೆರಾತ್‌ 133ಕ್ಕೆ 6, ದಿಲುÅವಾನ್‌ 95ಕ್ಕೆ 3). ಶ್ರೀಲಂಕಾ-346 ಮತ್ತು 3 ವಿಕೆಟಿಗೆ 170 (ಮೆಂಡಿಸ್‌ ಬ್ಯಾಟಿಂಗ್‌ 60, ಕರುಣಾರತ್ನೆ 49, ಕ್ರೆಮರ್‌ 67ಕ್ಕೆ 2).

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.