ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಸಿ ಮತ್ತು ಡಿ ವೃಂದದ ಉದ್ಯೋಗದಲ್ಲಿ ಮೀಸಲಾತಿಗೆ ಕ್ರಮ; ದಿವ್ಯಾಂಗರಿಗೆ ಶೇ. 5 ಮೀಸಲಾತಿ: ಕಾರ್ಮಿಕ ಇಲಾಖೆ ಹೆಜ್ಜೆ

Team Udayavani, Jun 15, 2024, 7:00 AM IST

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಬೆಂಗಳೂರು: ಖಾಸಗಿ ವಲಯದ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಂಪೂರ್ಣ ಮೀಸಲಾತಿ ಕಲ್ಪಿಸುವುದು ಹಾಗೂ ಅಂಗವಿಕಲರಿಗೆ ಶೇ. 5ರಷ್ಟು ಮೀಸಲು ಕಲ್ಪಿಸುವುದಕ್ಕೆ ಕಾರ್ಮಿಕ ಇಲಾಖೆ ಮತ್ತೊಮ್ಮೆ ಮುಂದಾಗಿದೆ.

ಈ ವಿಷಯಕ್ಕೆ ಸಂಬಂಧಿಸಿ “ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ನಿಯಮ -2024′ ರೂಪಿಸುವ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಗುರುವಾರ ಇಲಾಖಾಧಿಕಾರಿಗಳ ಜತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕೂಡ ಈ ದಿಶೆಯಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅನೇಕ ಕಾರಣಗಳಿಂದ ಅದು ಜಾರಿಯಾಗಿರಲಿಲ್ಲ. ಈಗ ಸರಕಾರ ಹಳೇ ಪ್ರಯತ್ನ ಜಾರಿಗೆ ಮತ್ತೆ ಕೈ ಹಾಕಿದೆ.

ಸರೋಜಿನಿ ಮಹಿಷಿ ವರದಿಯನ್ನು ಇಲ್ಲಿಯವರೆಗೆ ನೀತಿಯಾಗಿ ಪರಿಗಣಿಸಲಾಗಿದೆ. ಇದರ ಆಧಾರದ ಮೇಲೆಯೇ ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡುವ ಬಗ್ಗೆ ದಶಕಗಳಿಂದ ಚರ್ಚೆಯಲ್ಲಿದೆ. ಮೀಸಲಾತಿಯನ್ನು ಕಡ್ಡಾಯಗೊಳಿಸಬೇಕಿದ್ದರೆ ನಿಯಮ ತಿದ್ದುಪಡಿ ಮಾಡಬೇಕು. ಅದಕ್ಕೆ ಸಚಿವ ಸಂಪುಟದ ಒಪ್ಪಿಗೆಯೂ ಕಡ್ಡಾಯ. ಆದರೆ 50ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಖಾಸಗಿ ಸಂಸ್ಥೆಗಳಿಗೂ ಇದನ್ನು ಅನ್ವಯಿಸಲು ಕಾರ್ಮಿಕ ಇಲಾಖೆ ಮುಂದಾಗಿರುವುದರಿಂದ ಸಚಿವ ಸಂಪುಟದ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಇದರ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರಕಾರದ ಅಂತರ್‌ ಇಲಾಖಾ ಮಟ್ಟದಲ್ಲೇ ಅನುಮಾನಗಳು ಎದ್ದಿವೆ ಎನ್ನಲಾಗಿದೆ. ಆದರೆ ಸಿಎಂ ಕಾರ್ಯಾಲಯ, ಕಾನೂನು-ಸಂಸದೀಯ ವ್ಯವಹಾರಗಳ ಸಚಿವಾಲಯದ‌ ಮೂಲಗಳ ಪ್ರಕಾರ ಸದ್ಯಕ್ಕೆ ಸರಕಾರ ಅಂಥ ಯಾವುದೇ ಮಸೂದೆ ಜಾರಿಗೆ ತರುವ ತರಾ ತುರಿಯಲ್ಲಿ ಇಲ್ಲ ಎಂದು ತಿಳಿದು ಬಂದಿದೆ.

ಸರಕಾರದ ಉನ್ನತ ಮೂಲಗಳ ಪ್ರಕಾರ ಆದರ್ಶವಾಗಿ ಕಾರ್ಮಿಕ ಇಲಾಖೆ ಇಂಥ ನಿಯಮ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ವಾಸ್ತವವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ನಡಿಗರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನಿಯಮ ರೂಪಿಸಿದರೂ ಅಖೀಲ ಭಾರತ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಇದರಲ್ಲಿ ಸಂವಿಧಾನಾತ್ಮಕ ವಿಚಾರಗಳೂ ಅಡಕವಾಗಿರುವುದರಿಂದ ತರಾತುರಿಯಲ್ಲಿ ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ. ನಿಯಮ ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದರೂ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ.

ಸದ್ಯಕ್ಕೆ ನಮ್ಮ ಇಲಾಖೆ ವರೆಗೆ ಈ ಚರ್ಚೆ ಬಂದಿಲ್ಲ. ಸಿ ಮತ್ತು ಡಿ ದರ್ಜೆಯ ಹೊರಗುತ್ತಿಗೆ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲು ವ್ಯವಸ್ಥೆ ಕಲ್ಪಿಸುವ ಮಸೂದೆ ಮಾತ್ರ ನಮ್ಮ ಮುಂದಿದ್ದು, ಮುಂದಿನ ಅಧಿವೇಶನದಲ್ಲಿ ಅ ಮಂಡನೆಯಾಗಲಿದೆ ಎಂದು ಕಾನೂನು ಇಲಾಖೆ ಮೂಲಗಳು ಹೇಳಿವೆ.

ಸಚಿವ ಲಾಡ್‌ ವಾದವೇನು?
ಇಲಾಖಾ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಈ ವಿಷಯದಲ್ಲಿ ದೃಢ ನಿಲುವು ಪ್ರಕಟಿಸಿದ್ದಾರೆ. ಪ್ರತಿಯೊಂದು ಕೈಗಾರಿಕೆಗೂ ಸರಕಾರದಿಂದ ಒಂದಲ್ಲ ಒಂದು ರೀತಿಯ ಪ್ರಯೋಜನ ಸಿಗುತ್ತಿದೆ. ತೆರಿಗೆ ರಿಯಾಯಿತಿಗಳಲ್ಲದೆ ಭೂಮಿ ಖರೀದಿ, ನೀರು, ವಿದ್ಯುತ್‌ ಪೂರೈಕೆಯಲ್ಲಿ ರಿಯಾ ಯಿತಿ ನೀಡಲಾಗುತ್ತಿದೆ. ಕನ್ನಡಿಗರಿಗೆ ಶೇ. 100ರಷ್ಟು ಉದ್ಯೋಗ ಮೀಸಲಾತಿಗಾಗಿ ಹಿಂದಿನಿಂದಲೂ ಬೇಡಿಕೆ ಇದೆ. 2019ರಲ್ಲಿ ಸ್ಥಾಯೀ ಆದೇಶದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ಬಾರಿ ನಿಯಮ ರೂಪಿಸುವ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಕ್ಕೆ ಸಿದ್ಧತೆ ನಡೆಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾಗಿ ತಿಳಿದು ಬಂದಿದೆ.

ಟಾಪ್ ನ್ಯೂಸ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಶವ ನದಿಯಲ್ಲಿ ಪತ್ತೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Union Budget 2024; ಸಮತೋಲಿತ-ಅಭಿವೃದ್ಧಿ ಪರ ಆಯ-ವ್ಯಯ: ಜಗದೀಶ ಶೆಟ್ಟರ್

Union Budget 2024; ಸಮತೋಲಿತ-ಅಭಿವೃದ್ಧಿ ಪರ ಆಯ-ವ್ಯಯ: ಜಗದೀಶ ಶೆಟ್ಟರ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.