108 ಕೈದಿಗಳಿಗೆ ಬಿಡುಗಡೆ ಭಾಗ್ಯ!
Team Udayavani, Dec 13, 2017, 8:58 AM IST
ಬೆಂಗಳೂರು: ಜೈಲು ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿದ್ದ
ನೂರಾರು ಜೈಲು ಹಕ್ಕಿಗಳಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 108 ಮಂದಿ ಕೈದಿಗಳನ್ನು ಗಣರಾಜ್ಯೋತ್ಸವ ಮುನ್ನವೇ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ರಾಜ್ಯಪಾಲ ವಿ.ಆರ್.ವಾಲಾ ಅಂಕಿತ ಹಾಕಿದ್ದಾರೆ.
ಕಳೆದ ಶುಕ್ರವಾರವೇ ಗೃಹ ಇಲಾಖೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವ ಕಡತ ಬಂದಿದ್ದು, ಬುಧವಾರ ಸಂಜೆ ಬೆಂಗಳೂ
ರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ನಾಲ್ಕು ಕಾರಾಗೃಹಗಳಲ್ಲಿರುವ ಕೈದಿಗಳು ಬಿಡುಗಡೆ ಹೊಂದಲಿದ್ದಾರೆ.
ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಸುಪ್ರಿಂಕೋರ್ಟ್ ಕೆಲ ಮಾರ್ಗಸೂಚಿ ನಿಗದಿಪಡಿಸಿತ್ತು. ಸಿಆರ್‌ಪಿಸಿ (ಅಪರಾಧ
ದಂಡ ಪಕ್ರಿಯಾ ಸಂಹಿತಾ) ಕಲಂ 433 ಎ ಪ್ರಕಾರ ಸುಪ್ರೀಂ ಆದೇಶದಂತೆ 2016ರಲ್ಲಿ ರಾಜ್ಯ ಸರ್ಕಾರ ಕೈದಿಗಳ ಬಿಡುಗಡೆಗೆ
ಸಂಬಂಧಿಸಿದಂತೆ ನೂತನ ನಿಯಮವನ್ನು ಜಾರಿಗೆ ತಂದಿತ್ತು. ಅದರನ್ವಯ ಜೀವಾವಧಿ ಶಿಕ್ಷೆಗೆ ಒಳಪಟ್ಟ ಆರೋಪಿ 14 ವರ್ಷ
ಕಠಿಣ ಶಿಕ್ಷೆ ಹಾಗೂ ಮಹಿಳಾ ಆರೋಪಿ 10 ವರ್ಷ ಕಠಿಣ ಶಿಕ್ಷೆ ಕಡ್ಡಾಯವಾಗಿ ಪೂರೈಸಬೇಕೆಂದು ಸೂಚಿಸಿತ್ತು. ಅದರಂತೆ ಕೈದಿಗಳ
ಪಟ್ಟಿಯನ್ನು ಸಿದ್ಧಪಡಿಸಿ 200 ಮಂದಿ ಹೆಸರನ್ನು ಗೃಹ ಇಲಾಖೆ ಬಿಡುಗಡೆಗೆ ಶಿಫಾರಸು ಮಾಡಿ ರಾಜ್ಯ ಪಾಲರಿಗೆ
ಕಳುಹಿಸಿಕೊಟ್ಟಿತ್ತು. ಈ ಪೈಕಿ ಹಳೆಯ 26 ಹಾಗೂ ನೂತನ ಪಟ್ಟಿಯಲ್ಲಿ 91 ಮಂದಿ ಕೈದಿಗಳ ಬಿಡುಗಡೆಗೆ ರಾಜ್ಯಪಾಲರು
ಒಪ್ಪಿಗೆ ನೀಡಿದ್ದಾರೆ.
108 ಕೈದಿಗಳ ಪೈಕಿ ಬೆಂಗಳೂರು ಕೇಂದ್ರ ಕಾರಾಗೃಹದ 45 ಪುರುಷ ಮತ್ತು 5 ಮಹಿಳಾ ಕೈದಿಗಳು, ಬೆಳಗಾವಿ ಜೈಲಿನ 9
ಪುರುಷ ಮತ್ತು 3 ಮಹಿಳಾ ಕೈದಿಗಳು, ಮೈಸೂರು ಜೈಲಿನ 15 ಪುರುಷ ಕೈದಿಗಳು, ಬಳ್ಳಾರಿ ಕಾರಾಗೃಹದ 7 ಪುರುಷ ಮತ್ತು
ಓಬ್ಬ ಮಹಿಳಾ ಕೈದಿಗಳು, ಕಲುºರ್ಗಿ ಜೈಲಿನ 9 ಪುರುಷ ಕೈದಿಗಳು ಬಿಡುಗಡೆ ಹೊಂದಲಿದ್ದಾರೆ.
ಗಣರಾಜ್ಯೋತ್ಸವಕ್ಕೂ ಬಿಡುಗಡೆ ಭಾಗ್ಯ:
ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿದ್ದ ಕೈದಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.ಅದೇ ರೀತಿ 2018ರ ಗಣರಾ ಜ್ಯೋತ್ಸವ ದಿನಾಚರಣೆಗೂ 100ಕ್ಕೂ ಅಧಿಕ ಮಂದಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಕಾರಾಗೃಹ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರದಲ್ಲಿರುವ 55 ಮಂದಿಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅದೇ ರೀತಿ ಬೇರೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಅರ್ಹ ಕೈದಿಗಳ ಪಟ್ಟಿಯನ್ನು
ಸಿದ್ಧಗೊಳಿಸಿದ್ದಾರೆ. ಇದೇ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯುವ ಸಭೆಯಲ್ಲಿ ಅರ್ಹ ನೂರಕ್ಕೂ ಅಧಿಕ ಕೈದಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಗೃಹ ಇಲಾಖೆ ಮೂಲಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು ಎಂದು ಜೈಲಿನ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ
ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ
ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ
ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ,ಏರ್ ಗನ್ ತರಬೇತಿ; ಸಂಘ ಪರಿವಾರದ ನಡೆಗೆ ತೀವ್ರ ಆಕ್ಷೇಪ
ಬಿಜೆಪಿ ನಾಯಕರು ಗತಿಯಿಲ್ಲದೆ, ಮತಿಯಿಲ್ಲದ ನಿರ್ಮಲಾರನ್ನು ರಾಜ್ಯಸಭೆಗೆ ಕಳಿಸಲು ಹೊರಟಿದ್ದಾರೆ