ಬಾವಿಗೆ ಆಕಸ್ಮಿಕವಾಗಿ ಬಿದ್ದ ತಾಯಿ, ಮಕ್ಕಳಿಬ್ಬರ ದುರ್ಮರಣ

2 ದಿನದ ಹಿಂದೆ ಸುರಿದ ಭಾರೀ ಮಳೆಗೆ ತುಂಬಿಕೊಂಡಿದ್ದ ಬಾವಿ

Team Udayavani, Jun 9, 2019, 4:16 PM IST

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ತಾಯಿ ಮತ್ತು ಮಕ್ಕಳಿಬ್ಬರು ಆಕಸ್ಮಿಕವಾಗಿ ಬಾವಿಗೆಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ನಡೆದಿದೆ.

ವಿಜಯಾ(30) ಮತ್ತುಮಕ್ಕಳಾದ ಅಜಯ್‌ (10), ಧನಲಕ್ಷ್ಮೀ (8) ಮೃತ ದುರ್‌ದೈವಿಗಳು.

ಬಟ್ಟೆ ತೊಳೆಯಲೆಂದು ತೆರಳಿದ್ದ ವೇಳೆ ಆಕಸ್ಮಿಕ ವಾಗಿ ಧನಲಕ್ಷ್ಮೀ ಬಾವಿಗೆ ಆಯತಪ್ಪಿ ಬಿದ್ದಿದ್ದಾಳೆ. ಆಕೆಯನ್ನುರಕ್ಷಿಸಲೆಂದು ಅಜಯ್‌ ತೆರಳಿದ್ದು ಆತನೂ ಬಾವಿಗೆ ಬಿದ್ದಿದ್ದಾನೆ. ಮಕ್ಕಳಿಬ್ಬರನ್ನು ರಕ್ಷಿಸಲೆಂದು ತೆರಳಿದ ವಿಜಯಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಪತ್ನಿ ಮತ್ತು ಮಕ್ಕಳು ಮನೆಗೆ ವಾಪಾಸಾಗದೆ ಇದ್ದುದರಿಂದ ಹುಡುಕಾಟಕ್ಕೆ ಆಗಮಿಸಿದ ಪತಿ ನಾಗರಾಜು ಅವರು ಆಗಮಿಸಿ ನೋಡಿದಾಗ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ತಿಳಿದಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ