Udayavni Special

ರೆಸಾರ್ಟ್‌ಗೆ ಕರೆದುಕೊಂಡು ಹೋಗಲು ಶಾಸಕರಿಗೆ 2 ಐಷಾರಾಮಿ ಬಸ್‌

Team Udayavani, Jan 19, 2019, 12:50 AM IST

congress.jpg

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾಗುತ್ತಿದ್ದಂತೆ ಪಕ್ಷದ ಶಾಸಕರನ್ನು ನೇರವಾಗಿ ರೆಸಾರ್ಟ್‌ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರಿಂದ ನ್ಯಾಷನಲ್‌ ಟ್ರಾವೆಲ್‌ ಮಾಲೀಕರಾಗಿರುವ ಜಮೀರ್‌ ಅಹಮದ್‌ ಅವರ ಮೂಲಕ ಎರಡು ಐಶಾರಾಮಿ ಬಸ್‌ಗಳನ್ನು ತರಿಸಲಾಯಿತು. ಸಭೆ ಮುಗಿದ ತಕ್ಷಣ ಬಹುತೇಕ ಶಾಸಕರು ಬಟ್ಟೆ ತರಲು ಶಾಸಕರ ಭವನಕ್ಕೆ ತೆರಳಿದ್ದರಿಂದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಶಾಸಕರ ಭವನಕ್ಕೆ ತೆರಳಿದ್ದ ಶಾಸಕರನ್ನು ಕರೆದುಕೊಂಡು ಬಸ್‌ನಲ್ಲಿ ಕೂಡಿಸುವಂತೆ ಸೂಚನೆ ನೀಡಿದರು.

ಹಿಂದೆ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಇಂತದ್ದೇ ಪರಿಸ್ಥಿತಿ ಉದ್ಭವಿಸಿದ್ದಾಗ ಜಮೀರ್‌ ಅಹಮದ್‌, ಪಾರ್ಟಿ ಕೆ ಲಿಯೆ ಕುಚ್‌ ಬೀ ಕರ್ತಾ ಎಂದು ಸ್ವತ: ರಾಜಭವನಕ್ಕೆ ನ್ಯಾಷನಲ್‌ ಟ್ರಾವೆಲ್ಸ್‌ ಬಸ್‌ ಚಾಲನೆ ಮಾಡಿಕೊಂಡು ಹೋಗಿದ್ದರು. ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಅವರದೇ ಮಾಲೀಕತ್ವದ ಬಸ್‌ನಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಂದರ್ಭ ಎದುರಾಗಿದೆ.

ಬಿಜೆಪಿಯ ಲೆಕ್ಕಾಚಾರ ಫ‌ಲ ನೀಡುತ್ತಾ?: ಪ್ರಸ್ತುತ ಬಿಜೆಪಿಗೆ ತನ್ನ 104 , 2 ಪಕ್ಷೇತರರು ಸೇರಿ 106 ಶಾಸಕರ ಬಲವಿದೆ. ಕಾಂಗ್ರೆಸ್‌ನಲ್ಲಿ ಜೆಡಿಎಸ್‌-ಬಿಎಸ್‌ಪಿ ಸೇರಿ 118 ಬಲವಿದೆ. ಒಂದೊಮ್ಮೆ ನಾಲ್ವರು ಕಾಂಗ್ರೆಸ್‌ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 114ಕ್ಕೆ ಇಳಿಯಲಿದೆ. ನಂತರ, ಎರಡನೇ ಹಂತದಲ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭ ಎದುರಾದರೆ 8 ಮಂದಿ ವಿಪ್‌ ಉಲ್ಲಂ ಸಿ ಮತ ಹಾಕಲಿದ್ದಾರೆ ಎಂಬುದು ಬಿಜೆಪಿ ನಾಯಕರ ವಾದ. ಇನ್ನೊಂದೆಡೆ, ಕಾಂಗ್ರೆಸ್‌-ಜೆಡಿಎಸ್‌ ಸಂಖ್ಯಾಬಲ 106ಕ್ಕೆ ಇಳಿದು ಬಿಜೆಪಿಯ ಬಲ 112ಕ್ಕೆ ಏರಲಿದೆ ಎಂಬ ಲೆಕ್ಕಾಚಾರವಿದೆ. ನಾಲ್ಕು ಶಾಸಕರ ಜತೆಗೆ ಇನ್ನೂ ಆರು ಶಾಸಕರು ರಾಜೀನಾಮೆ ನೀಡಿದರೂ ಸರ್ಕಾರದ ಬಲ 108ಕ್ಕೆ ಇಳಿಯಲಿದೆ. ಆಗ ಮ್ಯಾಜಿಕ್‌ ನಂಬರ್‌ 113ಕ್ಕೆ 5 ಕಡಿಮೆಯಾಗಲಿದೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ, ರಾಜ್ಯಪಾಲರ ಮೊರೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಸದನದಲ್ಲಿ ಬಹುಮತ ಸಾಬೀತು ಸಂದರ್ಭದಲ್ಲಿ ಅಲ್ಲಿರುವ ಸಂಖ್ಯಾಬಲದ ಆಧಾರದ ಮೇಲೆಯೇ ಬಹುಮತ ನಿರ್ಧಾರ ಆಗುವುದರಿಂದ ಬಿಜೆಪಿಯ ಲೆಕ್ಕಾಚಾರ ಫ‌ಲ ನೀಡುತ್ತಾ ಎಂಬ ಅನುಮಾನವೂ ಇದೆ. ಏನೇ ಆದರೂ ಸರ್ಕಾರ ಪತನವಾಗಬೇಕಾದರೆ ಕನಿಷ್ಠ 18 ಶಾಸಕರು ರಾಜೀನಾಮೆ ನೀಡಲೇಬೇಕು. ಅಷ್ಟು ಸಂಖ್ಯೆ ಸಾಧ್ಯವಾ ಎಂಬ ಪ್ರಶ್ನೆಯೂ ಇದೆ.

ಮುಂಬೈನದ್ದು ಐಶಾರಾಮಿ ರೆಸಾರ್ಟ್‌

 ಕಾಂಗ್ರೆಸ್‌ ಅತೃಪ್ತ ಶಾಸಕರ ವಾಸ್ತವ್ಯಕ್ಕೆ ಮುಂಬೈನ ಮ್ಯಾರಿಯೆಟ್‌ ಗ್ರೂಪ್‌ನ ರೇನಿಸನ್ಸ್‌ ಹೋಟೆಲ್‌ನಲ್ಲಿ 15 ಕೊಠಡಿಗಳನ್ನು ಬುಕ್‌ ಮಾಡಲಾಗಿತ್ತು. ಆದರೆ, ಕೇವಲ 6 ಜನ ಮಾತ್ರ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿ ರೂಮಿಗೆ 20 ಸಾವಿರ ಬಾಡಿಗೆ ನೀಡಲಾಗಿದೆ ಎನ್ನಲಾಗುತ್ತಿದ್ದು, ಒಂದು ಕಪ್‌ ಚಹಾದ ಬೆಲೆ 350 ರೂ.ಎಂದು ಹೇಳಲಾಗುತ್ತಿದೆ.

700 ಕೊಠಡಿಗಳನ್ನು ಹೊಂದಿರುವ ಐಶಾರಾಮಿ ಹೋಟೆಲ್‌ನಲ್ಲಿ ವಿದೇಶಿ ಪ್ರಜೆಗಳೇ ಹೆಚ್ಚಾಗಿ ವಾಸ್ತವ್ಯ ಹೂಡುತ್ತಾರೆ ಎಂದು ತಿಳಿದು ಬಂದಿದೆ. ಸದ್ಯ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ, ಉಮೇಶ್‌ ಜಾಧವ್‌ ಹಾಗೂ ಬಿ.ನಾಗೇಂದ್ರ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಮಲ್ಲೇಶ್ವರಂ ಶಾಸಕ ಅಶ್ವಥ್‌ ನಾರಾಯಣ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಹಾಗೂ ಮಾಜಿ ಶಾಸಕ ನೆಲಮಂಗಲ  ನಾಗರಾಜ್‌ ಇದ್ದಾರೆ ಎಂದು ತಿಳಿದು ಬಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

DREAMS – ಈ ಕನಸುಗಳನ್ನೂ ಒಮ್ಮೆ ನೋಡಿಬಿಡಿ

DREAMS – ಈ ಕನಸುಗಳನ್ನೂ ಒಮ್ಮೆ ನೋಡಿಬಿಡಿ

ಬಿಜೆಪಿ ಹೈಕಮಾಂಡ್ ಬಯಸಿದರೆ 5 ಕೈ ಶಾಸಕರ ರಾಜೀನಾಮೆ ಕೊಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಬಿಜೆಪಿ ಹೈಕಮಾಂಡ್ ಬಯಸಿದರೆ 5 ಕೈ ಶಾಸಕರ ರಾಜೀನಾಮೆ ಕೊಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಪಾಕ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಮುಖ್ಯಸ್ಥ ಸೈಯದ್ ಮೇಲೆ ದಾಳಿ; ಐಎಸ್ ಐ ಕೈವಾಡ

ಪಾಕ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಮುಖ್ಯಸ್ಥ ಸೈಯದ್ ಮೇಲೆ ದಾಳಿ; ಐಎಸ್ ಐ ಕೈವಾಡ

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಅಮೇಜ್ಹ್ ಫಿಟ್‌ ಟಿ ರೆಕ್ಸ್‌ ಸ್ಮಾರ್ಟ್‌ ವಾಚ್‌

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

ಮುಖ್ಯಮಂತ್ರಿಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಮುಖ್ಯಮಂತ್ರಿಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ, ರಾಯಚೂರಿನಲ್ಲಿ ಸೋಂಕು ಸ್ಪೋಟ: ರಾಜ್ಯದಲ್ಲಿ 178 ಹೊಸ ಪ್ರಕರಣಗಳು

ಯಾದಗಿರಿ, ರಾಯಚೂರಿನಲ್ಲಿ ಸೋಂಕು ಸ್ಪೋಟ: ರಾಜ್ಯದಲ್ಲಿ 178 ಹೊಸ ಪ್ರಕರಣಗಳು

ಅಧಿಕಾರಕ್ಕಾಗಿ ಯಡಿಯೂರಪ್ಪ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ: ಯತ್ನಾಳ್

ಅಧಿಕಾರಕ್ಕಾಗಿ ಯಡಿಯೂರಪ್ಪ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ: ಯತ್ನಾಳ್

ರಾಜ್ಯದ ಈ 10 ಜಿಲ್ಲೆಗಳಲ್ಲಿ ಶತಕ ದಾಟಿದೆ ಕೋವಿಡ್-19 ಸೋಂಕಿತರ ಸಂಖ್ಯೆ

ರಾಜ್ಯದ ಈ 10 ಜಿಲ್ಲೆಗಳಲ್ಲಿ ಶತಕ ದಾಟಿದೆ ಕೋವಿಡ್-19 ಸೋಂಕಿತರ ಸಂಖ್ಯೆ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

29-May-26

ಕೋವಿಡ್ ಜಾಗೃತಿಗಾಗಿ “ಹಿತ್ಲಮನೆ’ ಕಿರುಚಿತ್ರ

29-May-25

ಪಿಯು ಮೌಲ್ಯಮಾಪನಕ್ಕೆ ಆತುರ ಬೇಡ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಹಳ್ಳಿ ಪ್ರತಿಭೆ ಬೇಬಿ

ಚತ್ತೀಸ್ ಗಢದ ಮೊದಲ ಸಿಎಂ, ಹಿರಿಯ ರಾಜಕಾರಣಿ ಅಜಿತ್ ಜೋಗಿ ವಿಧಿವಶ

ಚತ್ತೀಸ್ ಗಢದ ಮೊದಲ ಸಿಎಂ, ಹಿರಿಯ ರಾಜಕಾರಣಿ ಅಜಿತ್ ಜೋಗಿ ವಿಧಿವಶ

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.