ಕೆಎಸ್‌ಆರ್‌ಟಿಸಿಗೆ 8 ದಿನದಲ್ಲಿ 5.40ಕೋಟಿ ರೂಪಾಯಿ ನಷ್ಟ

Team Udayavani, Aug 13, 2019, 3:00 AM IST

Udayavani Kannada Newspaper

ಬೆಂಗಳೂರು: ಎಂಟು ದಿನಗಳ ಅಂತರದಲ್ಲಿ 2,702 ಅನುಸೂಚಿಗಳು ಮತ್ತು 15 ಲಕ್ಷ ಕಿ.ಮೀ. ಸಂಚಾರ ರದ್ದು. ಸಾವಿರಾರು ಪ್ರಯಾಣಿಕರು ಪರದಾಟ. ಒಟ್ಟಾರೆ ಕೆಎಸ್‌ಆರ್‌ಟಿಸಿಗಾದ ನಷ್ಟ 5.40 ಕೋಟಿ ರೂ.!   ಇದು ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ಎಫೆಕ್ಟ್. ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಕಳೆದ ಏಳೆಂಟು ದಿನಗಳಿಂದ ಉಂಟಾದ ನೆರೆ ಹಾವಳಿಯಿಂದ ಹತ್ತಾರು ಜನ-ಜಾನುವಾರುಗಳು ಬಲಿ, ಬೆಳೆ ಹಾನಿ ಜತೆಗೆ ಕೆಎಸ್‌ಆರ್‌ಟಿಸಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ.

ಆಗಸ್ಟ್‌ 4ರಿಂದ 12ರವರೆಗೆ ಒಟ್ಟಾರೆ ನಿಗಮದ ವ್ಯಾಪ್ತಿಯಲ್ಲಿ 2,702 ಅನುಸೂಚಿಗಳು ಸಂಪೂರ್ಣವಾಗಿ ರದ್ದಾಗಿದ್ದರೆ, 4,060 ಅನುಸೂಚಿಗಳು ಭಾಗಶಃ ಸ್ಥಗಿತಗೊಂಡವು. ಇದರಿಂದ 5,40 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸ ಲಾಗಿದೆ. ಸಂಪೂರ್ಣ ರದ್ದಾಗಿರುವ ಸೇವೆಗಳಲ್ಲಿ ಮಂಗಳೂರು, ಪುತ್ತೂರು, ಚಿಕ್ಕಮಗ ಳೂರು, ಮೈಸೂರು, ಶಿವಮೊಗ್ಗ ಮಾರ್ಗಗಳು ಹೆಚ್ಚಿವೆ.

ಇಲ್ಲಿ ಕ್ರಮವಾಗಿ 414, 324, 323, 232, 226 ಬಸ್‌ ಸೇವೆಗಳು ರದ್ದಾಗಿವೆ. ಅದೇ ರೀತಿ, ಭಾಗಶಃ ಬಸ್‌ ಸೇವೆಗಳು ಸ್ಥಗಿತಗೊಂಡಿದ್ದು ಕೂಡ ಇದೇ ಮಾರ್ಗದಲ್ಲಿ ಬರುತ್ತವೆ. ಇನ್ನು ಸೇವೆ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ 45,233 ಟಿಕೆಟ್‌ಗಳು ರದ್ದಾಗಿದ್ದು, 2.67 ಕೋಟಿ ರೂ. ಪ್ರಯಾಣಿಕರಿಗೆ ಹಿಂಪಾವತಿ ಮಾಡಲಾಗಿದೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಮಳೆ ಇಳಿಮುಖವಾಗಿದ್ದು, ನೆರೆ ಹಾವಳಿ ಕೂಡ ತಗ್ಗಿದ ಪರಿಣಾಮ ಸೋಮವಾರದಿಂದ ಕೆಲವು ರಸ್ತೆಗಳಲ್ಲಿ ಬಸ್‌ ಸಂಚಾರ ಪುನಾರಂಭಗೊಂಡಿದೆ. ಬೆಂಗಳೂರು-ಮಂಗಳೂರು ನಡುವೆ ಕಡಿತಗೊಂಡಿದ್ದ ರಸ್ತೆ ಸಂಪರ್ಕ ಕೊಂಡಿ ಪುನಃ ಬೆಸೆದಿದ್ದು, ಹಗಲು ಈ ಮಾರ್ಗದಲ್ಲಿ ಶಿರಾಡಿ ಘಾಟ್‌ ಮೂಲಕ ಹಾಗೂ ರಾತ್ರಿ ಮಡಿಕೇರಿ ಮೂಲಕ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ.

ಅದೇ ರೀತಿ, ಬೆಂಗಳೂರು-ಕೇರಳ, ಶಿವಮೊಗ್ಗ-ಮಂಗಳೂರು-ಧರ್ಮಸ್ಥಳ, ಬೆಂಗಳೂರು-ಉಡುಪಿ (ರಾತ್ರಿ ಸೇವೆಗೆ ಅನುಮತಿ ಇಲ್ಲ), ಚಿಕ್ಕಮಗಳೂರು-ಉಡುಪಿ (ಶೃಂಗೇರಿ ಮೂಲಕ), ಮೈಸೂರಿನಿಂದ ಕುಶಾಲನಗರ, ನಂಜನಗೂಡು, ಎಚ್‌.ಡಿ. ಕೋಟೆ ಮತ್ತಿತರ ಮಾರ್ಗಗಳಲ್ಲಿ ಸೇವೆ ಮತ್ತೆ ಆರಂಭಗೊಂಡಿದೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ಮುಂಬೈ ಕ್ರಿಕೆಟ್‌ ತಂಡದ ನಾಲ್ವರಿಗೆ ಕೋವಿಡ್‌

ಮುಂಬೈ ಕ್ರಿಕೆಟ್‌ ತಂಡದ ನಾಲ್ವರಿಗೆ ಕೋವಿಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ದೀಪಾವಳಿ ದಿನ ದೇವಸ್ಥಾನಗಳಲ್ಲಿ ಗೋಪೂಜೆ : ಜೊಲ್ಲೆಗೆ ಪ್ರಭು ಚೌವ್ಹಾಣ್‌ ಅಭಿನಂದನೆ

ಭಿಕ್ಷಾಟನೆ ಜೊತೆಗೆ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿಯನ್ನು ರಕ್ಷಿಸಿದ ನ್ಯಾಯಾಧೀಶರು

ಭಿಕ್ಷಾಟನೆ ಜೊತೆಗೆ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿಯನ್ನು ರಕ್ಷಿಸಿದ ನ್ಯಾಯಾಧೀಶರು

r-ashok

ಕನ್ನಡಕ್ಕಾಗಿ ಲಾಠಿ ಏಟು ತಿಂದು 15 ದಿನ ಆಸ್ಪತ್ರೆಯಲ್ಲಿದ್ದೆ: ಸಚಿವ ಆರ್.ಅಶೋಕ್

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಹಿಂದುಳಿದವರು,ದಲಿತರು ಬಿಜೆಪಿ ಜತೆ ಇದ್ದಾರೆ: ಸಚಿವ ಕೆ.ಎಸ್‌.ಈಶ್ವರಪ್ಪ

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಪ್ರವಾಸಿ ಗೈಡ್‌ಗಳಿಗೆ ಶೀಘ್ರ ಗುರುತಿನ ಚೀಟಿ: ಆನಂದ್‌ ಸಿಂಗ್‌

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಕೆನಡಾಕ್ಕೆ ಭಾರತ ಮೂಲದ ರಕ್ಷಣಾ ಸಚಿವೆ

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

ಟೀವಿ ಕಾರ್ಯಕ್ರಮದ ನಡುವೆಯೇ ಹೊರ ನಡೆದ ಶೋಯಿಬ್‌ ಅಖ್ತರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.