ಹೊನ್ನಾವರದಲ್ಲಿ 6 ಸೆಂ.ಮೀ. ಮಳೆ
Team Udayavani, Sep 15, 2019, 3:00 AM IST
ಬೆಂಗಳೂರು/ಮಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು. ಹೊನ್ನಾವರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 6 ಸೆಂ.ಮೀ.ಮಳೆ ಸುರಿಯಿತು.
ಇದೇ ಅವಧಿಯಲ್ಲಿ ಗೇರುಸೊಪ್ಪಾದಲ್ಲಿ 5, ಕುಮಟಾದಲ್ಲಿ 4, ಕಾರವಾರ, ಆಗುಂಬೆಗಳಲ್ಲಿ ತಲಾ 3 ಸೆಂ.ಮೀ.ಮಳೆ ಸುರಿಯಿತು. ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.