ಲೋಕಕಲ್ಯಾಣಕ್ಕಾಗಿ ರುದ್ರಾಕ್ಷಿ ಮರವೇರಿ ಕುಳಿತ 70ರ ಹರೆಯದ ಮುತ್ಯಾ
ಕಳೆದ 8 ದಿನಗಳಿಂದ ನಿರಾಹಾರಿಯಾಗಿ ಧ್ಯಾನ
Team Udayavani, Nov 27, 2020, 5:20 AM IST
ಚಿತ್ತಾಪುರ: ಜಗತ್ತನ್ನು ಕಾಡುತ್ತಿರುವ ಕೊರೊನಾ ದೂರವಾಗಲೆಂದು ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ಧ ಮಠದ 70 ವರ್ಷದ ಶ್ರೀ ಮಹಾದೇವ ಮುತ್ಯಾ ಅವರು 8 ದಿನಗಳಿಂದ ಮೋಗಲಾ ಗ್ರಾಮದ ಸಾಧು ಮುತ್ಯಾನ ಗುಡಿ ಆವರಣದಲ್ಲಿರುವ ರುದ್ರಾಕ್ಷಿ ಮರದ ಮೇಲೆ ಕುಳಿತು ನಿರಾಹಾರಿಯಾಗಿ ಕಠಿನ ಅನುಷ್ಠಾನ ಕೈಗೊಂಡಿದ್ದಾರೆ.
ಸಂಸಾರಿಯಾಗಿ ಮೂವರು ಮಕ್ಕಳನ್ನೂ ಹೊಂದಿರುವ ಇವರು ಈ ಹಿಂದೆಯೂ ಅನಾವೃಷ್ಟಿಯಂಥ ಸಂದರ್ಭದಲ್ಲಿ ಮರದ ಮೇಲೆ ಕುಳಿತು ಅನುಷ್ಠಾನ ಮಾಡಿದ್ದರು. ಪ್ರಸ್ತುತ ಅನೇಕ ಗ್ರಾಮಗಳಿಂದ ಆಗಮಿಸಿರುವ ಭಕ್ತರು ಮರದ ಕೆಳಗೆ ನಿಂತು ಭಜನೆ ಮಾಡುತ್ತಿದ್ದಾರೆ. ಮರದ ಮೇಲೆ ಐದಾರು ಅಡಿ ಇರುವ ಜಾಗದಲ್ಲೇ ಅನುಷ್ಠಾನ ಕೈಗೊಂಡಿರುವ ಮುತ್ಯಾ ಅಲ್ಲಿಯೇ ಮಲಗುತ್ತಿದ್ದಾರೆ. ಮಲಮೂತ್ರ ವಿಸರ್ಜನೆಗೂ ಇವರು ಕೆಳಗಿಳಿದಿಲ್ಲ.
ಒಂಬತ್ತನೇ ದಿನವಾಗಿರುವ ಶುಕ್ರವಾರ ಅನುಷ್ಠಾನ ಕೊನೆಗೊಳ್ಳುತ್ತಿದ್ದು, ಗ್ರಾಮದಲ್ಲಿ ಪಾದಪೂಜೆ ಮುಗಿದ ಬಳಿಕ ನೀರು, ಆಹಾರ ಸೇವಿಸುತ್ತಾರೆ ಎನ್ನಲಾಗಿದೆ. ಅವರು ಇಲ್ಲಿಯ ವರೆಗೆ 29 ಬಾರಿ ಅನುಷ್ಠಾನ ಮಾಡಿದ್ದಾರೆ. “ನನಗೆ ಗಾಳಿಯೇ ಆಹಾರ ಹಾಗೂ ನೀರು. ಅದರಿಂದಲೇ ಬದುಕುತ್ತೇನೆ. ಅನುಷ್ಠಾನ ಮಾಡುವಾಗ ನನಗೆ ಹಸಿವು, ಬಾಯಾರಿಕೆ ಆಗೋಲ್ಲ’ ಎನ್ನುತ್ತಾರೆ ಮುತ್ಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ
ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ
ಆಸ್ಪತ್ರೆಗಳಲ್ಲಿ ನಾರ್ಮಲ್ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಹೆಚ್ಚಳ : ಅಡಳಿತಾಧಿಕಾರಿ ಕಳವಳ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!