ಹೊಂಬಣ್ಣ ಸಹನಟನಿಂದ ಯುವತಿ ಮೇಲೆ ಅತ್ಯಾಚಾರ, ಆರೋಪ ಅಲ್ಲಗಳೆದ ನಟ

Team Udayavani, Dec 28, 2017, 4:38 PM IST

ಬೆಂಗಳೂರು: ತಂಪುಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರಸಿ ಹೊಂಬಣ್ಣ ಸಿನಿಮಾದ ಸಹನಟ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಯುವತಿಯೊಬ್ಬಳು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೊಂಬಣ್ಣ ಚಿತ್ರದ ಸಹನಟ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಬಸವನಗುಡಿ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ನಾಯಕ ನಟ ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ನಟ ಬೆಂಗಳೂರಿನಲ್ಲಿ ವಾಸವಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾನು ಅತ್ಯಾಚಾರ ಮಾಡಿದ ಬಗ್ಗೆ ದಾಖಲೆ ನೀಡಲಿ: ನಟ ಸುಬ್ರಹ್ಮಣ್ಯ

ನಾನು ನಿನ್ನ ಅಭಿಮಾನಿ ಎಂದು ಹಿಂದೆ ಸುತ್ತುತ್ತಿದ್ದಳು, ಮದುವೆಗೆ ನಿರಾಕರಿಸಿದ್ದಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಅತ್ಯಾಚಾರದ ಆರೋಪ ಹೊರಿಸಿದ್ದು, ನಾನು ಅತ್ಯಾಚಾರ ಮಾಡಿದ ಬಗ್ಗೆ ದಾಖಲೆ ನೀಡಲಿ ಎಂದು ಹೊಂಬಣ್ಣ ಚಿತ್ರದ ನಟ ಸುಬ್ರಹ್ಮಣ್ಯ ಸ್ಪಷ್ಟನೆ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ