ಮುಂದುವರಿದ ಎಸಿಬಿ ಬೇಟೆ:ಬೆಳಗಾವಿಯಲ್ಲಿ ಮತ್ತೊಂದು ತಿಮಿಂಗಿಲ ಬಲೆಗೆ 

Team Udayavani, Oct 6, 2018, 12:30 PM IST

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶನಿವಾರವೂ ಭ್ರಷ್ಟರ ಮೇಲೆ ದಾಳಿ ಮುಂದುವರಿಸಿದ್ದು ಬೆಳಗಾವಿಯಲ್ಲಿ ಭಾರೀ ತಿಮಿಂಗಿಲವೊಂದರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

ಖಾನಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಚಂದ್ರಕಾಂತ್‌ ಪಾಟೀಲ್‌ ರ  ಬೆಳಗಾವಿ ರಾಮತೀರ್ಥದಲ್ಲಿರುವ ನಿವಾಸ, ಬೈಲಹೊಂಗಲದಲ್ಲಿರುವ ಕಚೇರಿ ,ಸಹೋದರನ ನಿವಾಸಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. 

ದಾಳಿ ವೇಳೆ 10 ಲಕ್ಷ ರೂಪಾಯಿಗೂ ಅಧಿಕ ನಗದು ಹಣ, ಅರ್ಧ ಕೆ.ಜಿಗೂ ಹೆಚ್ಚು ಚಿನ್ನ, 3 ಕೆ.ಜಿಗೂ ಅಧಿಕ ಬೆಳ್ಳಿ  ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ. 

ಶುಕ್ರವಾರ ಬೆಂಗಳೂರು ಅಭಿ  ವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿ  ಯರ್‌ ಎನ್‌.ಜಿ.ಗೌಡಯ್ಯ ಮತ್ತು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರ ಮನೆ ಮತ್ತು ಕಚೇರಿಗಳ ಮೇಲೆ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ, ಆಸ್ತಿ ದಾಖಲೆ ವಶಕ್ಕೆ ಪಡೆದಿದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ