ಬಿಸಿಎ ವಿದ್ಯಾರ್ಥಿಗಳ ಸಾಧನೆ
ವಿದ್ಯಾರ್ಥಿಗಳ ಸಾಧನೆ
Team Udayavani, Mar 12, 2021, 9:23 PM IST
ಶಿವಮೊಗ್ಗ : ಕುವೆಂಪು ವಿವಿಯ 2019-20ನೇ ಸಾಲಿನ ಪದವಿ ಪರೀಕ್ಷೆಯ ಬಿ.ಸಿ.ಎ ವಿಭಾಗದಲ್ಲಿ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್. ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿಗೆ 3 ರ್‍ಯಾಂಕ್ ಗಳು ಲಭಿಸಿದೆ. ವಿದ್ಯಾರ್ಥಿನಿಯರಾದ ಮೇಘ ಪಿ.ಪರ್ವತಿಕರ್ (ಮೂರನೇ ರ್ಯಾಂಕ್), ವಿದ್ಯಾಶ್ರೀ ಎಸ್.ಆರ್ (ಆರನೇ ರ್ಯಾಂಕ್), ಪಲ್ಲವಿ. ಕೆ.ಪಿ (ಏಳನೇ ರ್ಯಾಂಕ್) ಪಡೆದಿದ್ದಾರೆ. ಇವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರು, ಕಾಲೇಜಿನ ಎಲ್ಲಾ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.