ರಾಜ್ಯಾದ್ಯಂತ ಸ್ಮಾರ್ಟ್‌ಗ್ರಿಡ್ ವಿಸ್ತರಣೆಗೆ ಕ್ರಮ: ಡಿಕೆಶಿ
Team Udayavani, Jul 26, 2017, 8:45 AM IST
ಮೈಸೂರು: ದೇಶದಲ್ಲೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಕೈಗೊಂಡಿರುವ ಸ್ಮಾರ್ಟ್‌ಗ್ರಿಡ್ ಯೋಜನೆ
ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ರಾಜ್ಯದ ಇನ್ನಿತರ ನಗರಗಳಿಗೂ ವಿಸ್ತರಿಸಲು
ಕ್ರಮಕೈಗೊಳ್ಳುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಕಚೇರಿಗೆ ಭೇಟಿ ನೀಡಿ ಪ್ರಾಯೋಗಿಕ ಸ್ಮಾರ್ಟ್‌ಗ್ರಿಡ್
ಯೋಜನೆಯ ಪ್ರಗತಿ ಪರಿಶೀಲಿಸಿ, ಯೋಜನೆಯ ಕಾರ್ಯದ ಬಗ್ಗೆ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಅವರು
ಮಾತನಾಡಿದರು. ಕಳೆದ ವರ್ಷ ಕೇಂದ್ರ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದ ದಂತೆ ಸ್ಮಾರ್ಟ್‌ಗ್ರಿಡ್
ಯೋಜನೆ ಆರಂಭಿಸಲಾಗಿದ್ದು, ಅದರಂತೆ ಮೊದಲ ಬಾರಿಗೆ ಮೈಸೂರಿನಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆಯನ್ನು ಮೈಸೂರಿನ ಜತೆಗೆ ಹುಬ್ಬಳ್ಳಿ, ಬೆಂಗಳೂರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯಾಪ್ತಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ ಎಂದರು.
9 ಸಾವಿರ ಹುದ್ದೆ ಭರ್ತಿಗೆ ಕ್ರಮ: ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ 55 ಸಾವಿರ ಮಂಜೂರಾತಿ ಹುದ್ದೆ ಪೈಕಿ 30 ಸಾವಿರ ಹುದ್ದೆಗಳು ಖಾಲಿ ಇವೆ. ಹಿಂದಿನ ಸರ್ಕಾರಗಳು ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಕೆಲಸ ಮಾಡಿಸುತ್ತಿದ್ದರು. ಈಗಾಗಲೇ 22 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ 9
ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಐದು ಮಂದಿ ಪ್ರಾಣಾಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ