ಅರುಣ್ ಸಿಂಗ್ ಆಗಮನಕ್ಕೂ ಮೊದಲೇ ಬಿಜೆಪಿಯಲ್ಲಿ ತಾಲೀಮು ಶುರು

ಅರುಣ್ ಸಿಂಗ್ ಬಗ್ಗೆ ಕೇಳಿದರೆ 'ಯಡಿಯೂರಪ್ಪ ನಮ್ಮ ನಾಯಕ' ಎನ್ನುತ್ತಿದ್ದಾರೆ ಕೆಲ ಶಾಸಕರು

Team Udayavani, Jun 14, 2021, 3:51 PM IST

arun singh

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಹಲವರ ದೆಹಲಿ ಭೇಟಿ, ಸಹಿ ಸಂಗ್ರಹ ಮುಂತಾದ ಬೆಳವಣಿಗೆಗಳ ಪರಿಣಾಮ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಜೂ.16ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮಾತ್ರವಲ್ಲದೆ ಈ ಬಾರಿ ಅರುಣ್ ಸಿಂಗ್ ಶಾಸಕರ ಜೊತೆ ಮಾತನಾಡಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಅರುಣ್ ಸಿಂಗ್ ಭೇಟಿಯ ಹಿನ್ನಲೆಯಲ್ಲಿ ಬಿಜೆಪಿಯ ಎರಡು ಗುಂಪುಗಳಲ್ಲಿ ಚಟುವಟಿಕೆಗಳು ಆರಂಭವಾಗಿದೆ. ಬಿಎಸ್ ವೈ ಬೆಂಬಲಿಗರು ‘ಯಡಿಯೂರಪ್ಪನವರೇ ನಮ್ಮ ನಾಯಕರು’ ಎಂದು ಪ್ರತಿಪಾದಿಸುತ್ತಿದ್ದಾರೆ. ಸಭೆಯಲ್ಲೂ ಇದನ್ನೇ ಗಟ್ಟಿಯಾಗಿ ಹೇಳಿ ನಾಯಕತ್ವ ಬದಲಾವಣೆ ಚರ್ಚೆಗೆ ಅಂತ್ಯ ಹಾಡಲು ತಯಾರಾಗಿದ್ದಾರೆ.

ಇದನ್ನೂ ಓದಿ:ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

ಇಂದು ರಾಣಿಬೆನ್ನೂರು ಶಾಸಕ ಅರುಣ್ ಕುಮಾರ್ ಅವರ ಬಳಿ ಅರುಣ್ ಸಿಂಗ್ ರಿಂದ ಶಾಸಕರ ಜೊತೆ ಸಭೆ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ “ಯಡಿಯೂರಪ್ಪನೇ ನಮ್ಮ ನಾಯಕರು. ನಾವೆಲ್ಲರೂ ಯಡಿಯೂರಪ್ಪ ನಾಯಕತ್ವದಲ್ಲಿ ಗೆದ್ದು ಬಂದಿದ್ದೇವೆ. ನಾವು ಯಡಿಯೂರಪ್ಪರ ಪರವಾಗಿಯೇ ಇರುತ್ತೇವೆ” ಎಂದು ಬಿಟ್ಟರು. ಅರುಣ್ ಸಿಂಗ್ ಶಾಸಕರ ಸಭೆ ಕರೆದಿರುವ ಬಗ್ಗೆ ಗೊತ್ತಿಲ್ಲ. ಆದರೆ ಸಭೆ ಇರಲಿ, ಇಲ್ಲದೇ ಇರಲಿ ಆದರೆ ನಾವಂತೂ ಯಡಿಯೂರಪ್ಪಗೆ ಬೆಂಬಲ ಸೂಚಿಸ್ತೇವೆ ಎಂದರು. ಅಂದರೆ ಅರುಣ್ ಸಿಂಗ್ ರಾಜ್ಯಕ್ಕೆ ಬರುವ ಮುನ್ನವೇ ಯಡಿಯೂರಪ್ಪ ಪರ ಶಾಸಕರು ಬ್ಯಾಟಿಂಗ್ ಆರಂಭಿಸಿದ್ದು, ತಮ್ಮ ನಿಲುವನ್ನು ರಾಜ್ಯ ಉಸ್ತುವಾರಿಗೆ ಮನದಟ್ಟು ಮಾಡುವ ಪ್ರಯತ್ನದಲ್ಲಿದ್ದಾರೆ.

ಆರ್‌ಎಸ್‌ಎಸ್‌ ನಾಯಕರ ಭೇಟಿ ಮಾಡಿದ ಬೆಲ್ಲದ: ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿರುವುದಾಗಿ ಹೇಳಿಕೊಂಡಿರುವ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು, ದೆಹಲಿಯಲ್ಲಿ ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನೂ ಭೇಟಿ ಮಾಡಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಜೊತೆಗೆ ಬೇರೊಬ್ಬ ನಾಯಕರನ್ನು ಶಾಸಕರ ಅಭಿಪ್ರಾಯ ಪಡೆಯಲು ಕಳುಹಿಸುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟಾಪ್ ನ್ಯೂಸ್

CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

web-29-goosberry

Gooseberry Benefits: ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

12-cm

CM: 536ನೇ ಶ್ರೀ ಕನಕ ಜಯಂತ್ಯೋತ್ಸವ, ಭಾವೈಕ್ಯತಾ ಸಮಾವೇಶ ಉದ್ಘಾಟಿಸಿದ ಸಿ.ಎಂ. ಸಿದ್ದರಾಮಯ್ಯ

11-cm

Drought:ಬರಗಾಲದ ಪರಿಹಾರ ಕುರಿತು ಸಮೀಕ್ಷೆ; ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ: ಮುಖ್ಯಮಂತ್ರಿ

Sagara: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ… ವಿದ್ಯಾರ್ಥಿನಿಯರ ಮೊರೆ

Sagara: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ… ವಿದ್ಯಾರ್ಥಿನಿಯರ ಮೊರೆ

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

Gangavathi: ರಸಗೊಬ್ಬರ-ಏಕ ಬೆಳೆ ಪದ್ಧತಿ ಕೈ ಬಿಡಲು ಸಲಹೆ

Gangavathi: ರಸಗೊಬ್ಬರ-ಏಕ ಬೆಳೆ ಪದ್ಧತಿ ಕೈ ಬಿಡಲು ಸಲಹೆ

Sandalwood: ಸೂಟ್‌ ಹಾಡು ಹಬ್ಬ

Sandalwood: ಸೂಟ್‌ ಹಾಡು ಹಬ್ಬ

Kaiva: ಟ್ರೇಲರ್‌ನಲ್ಲಿ ಕೈವ ಸದ್ದು

Kaiva: ಟ್ರೇಲರ್‌ನಲ್ಲಿ ಕೈವ ಸದ್ದು

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.