ನಟಿ ರಾಧಿಕಾ ತಂದೆ ನಿಧನ
Team Udayavani, May 20, 2019, 3:03 AM IST
ಬೆಂಗಳೂರು: ನಟಿ ರಾಧಿಕಾ ಅವರ ತಂದೆ ದೇವರಾಜ್ ಭಾನುವಾರ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ನಾಲ್ಕು ದಿನಗಳಿಂದಲೂ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ನಡೆದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಹಬ್ಬದ ನಂತರ ಅವರಿಗೆ ಕಫ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.