
ISRO;ಅಧ್ಯಯನ ಆರಂಭಿಸಿದ ಆದಿತ್ಯ-ಎಲ್1
ಭೂಮಿಯಿಂದ 50 ಸಾವಿರ ಕಿ.ಮೀ.ಗೂ ಅಧಿಕ ದೂರದಲ್ಲಿ ಎಸ್‌ಟಿಇಪಿಎಸ್ ಚಾಲನೆ
Team Udayavani, Sep 19, 2023, 12:41 AM IST

ಬೆಂಗಳೂರು: ಸೂರ್ಯ ಸಂಶೋಧನೆಗಾಗಿ ಕಳುಹಿಸಿದ್ದ ಆದಿತ್ಯ-ಎಲ್1 ನೌಕೆಯು ಅಧ್ಯಯನ ಕ್ಕಾಗಿ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೋಮವಾರ ತಿಳಿಸಿದೆ.
ಈ ದತ್ತಾಂಶಗಳಿಂದ ಭೂಮಿಯನ್ನು ಸುತ್ತುವರಿದಿರುವ ಪಾರ್ಟಿಕಲ್‌ಗಳ ಸ್ವಭಾವವನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಸಹಾಯ ಆಗಲಿದೆ ಎಂದು ಇಸ್ರೋ ತಿಳಿಸಿದೆ.
ಭಾರತದ ಮೊತ್ತಮೊದಲ ಸೂರ್ಯ ವೀಕ್ಷಕ ನೌಕೆಯಲ್ಲಿ ಅಳವಡಿಸಲಾಗಿರುವ ಸೆನ್ಸರ್‌ಗಳು ಭೂಮಿಯಿಂದ 50 ಸಾವಿರಕ್ಕೂ ಅಧಿಕ ಕಿ.ಮೀ. ದೂರದಲ್ಲಿ ಸುಪ್ರಾ-ಥರ್ಮಲ್ ಮತ್ತು ಶಕ್ತಿಪೂರಿತ ಅಯಾನ್‌ಗಳು ಹಾಗೂ ಎಲೆಕ್ಟ್ರಾನ್‌ಗಳ ಮಾಪನವನ್ನು ಆರಂಭಿಸಿವೆ. ಈ ದತ್ತಾಂಶಗಳ ಮೂಲಕ ಭೂಮಿಯನ್ನು ಸುತ್ತುವರಿದಿರುವ ಕಣಗಳ ಸ್ವಭಾವವನ್ನು ವಿಶ್ಲೇಷಿಸುವುದಕ್ಕೆ ಸಾಧ್ಯವಾಗಲಿದೆ ಎಂದು ಇಸ್ರೋ “ಎಕ್ಸ್’ನಲ್ಲಿ ಹೇಳಿದೆ.
ಪ್ರಯಾಣದುದ್ದಕ್ಕೂ ದತ್ತಾಂಶ ಸಂಗ್ರಹದ ಸುಪ್ರಾ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೊಮೀಟರ್ (ಎಸ್‌ಟಿಇಪಿಎಸ್) ಉಪಕರಣವು ಆದಿತ್ಯ ಸೋಲಾರ್ ವಿಂಡ್ ಪಾರ್ಟಿ ಕಲ್ ಎಕ್ಸ್‌ಪರಿಮೆಂಟ್ (ಎಎಸ್‌ಪಿಇಎಕ್ಸ್) ಪೇಲೋಡ್‌ನ ಭಾಗವಾಗಿದೆ. ಆದಿತ್ಯ ನೌಕೆಯು ಎಲ್-1ನತ್ತ ನಡೆಸುವ ಪ್ರಯಾಣದುದ್ದಕ್ಕೂ ಉಪಕರಣವು ದತ್ತಾಂಶ ಸಂಗ್ರಹ ನಡೆಸಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?

JDS ಫ್ಯಾಮಿಲಿ ಟ್ರಸ್ಟ್; ಸಿಎಂ ಇಬ್ರಾಹಿಂ “ಭೂಗತ’: ಲಕ್ಷ್ಮಣ್ ವ್ಯಂಗ್ಯ

Cauvery issueತಮಿಳುನಾಡು ಸಿಎಂ ಭೇಟಿಗೆ 48 ತಾಸು ಕಾದು ಬರಿಗೈಯಲ್ಲಿ ಮರಳಿದ ಲೆಹರ್ ಸಿಂಗ್!

karnataka 2 ಕಡೆ ಸಂಶೋಧನ ಕೇಂದ್ರ ತೆರೆಯಲು ಆಪ್ಟೀವ್ ಕಂಪೆನಿಗೆ ಆಹ್ವಾನ

Karnataka Bandh: ರಾಜ್ಯಾದ್ಯಂತ ಬಿಗಿ ಭದ್ರತೆ, ಕಟ್ಟೆಚ್ಚರ
MUST WATCH
ಹೊಸ ಸೇರ್ಪಡೆ

Asian Games ಇಂದಿನಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿಲ್ಲಿಗೆ ?

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್ ಚಿರಸ್ಥಾಯಿ