ವಕೀಲಿಕೆ ಮುಂದುವರಿಕೆ: ಮೊಯ್ಲಿ ಇಂಗಿತ
Team Udayavani, Jun 25, 2019, 3:05 AM IST
ಬೆಂಗಳೂರು: ವೃತ್ತಿಯಲ್ಲಿ ಮೂಲತಃ ವಕೀಲರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸೋಮವಾರ ಹೈಕೋರ್ಟ್‌ಗೆ ಬಂದಿದ್ದರು.
ಕೋರ್ಟ್ ಕಲಾಪಗಳು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಕರಿ ಕೋಟು ಧರಿಸಿ ಹೈಕೋರ್ಟ್‌ಗೆ ಆಗಮಿಸಿದ ಮೊಯ್ಲಿಯವರು ಕಾರಿಡಾರ್‌ನಲ್ಲಿ ಪರಿಚಯಸ್ಥ ವಕೀಲರನ್ನು ಭೇಟಿಯಾಗಿ ಲೋಕಾಭಿರಾಮವಾಗಿ ಮಾತನಾಡಿಸಿದರು.
ಇದೇ ವೇಳೆ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ, ಹಿರಿಯ ವಕೀಲರಾದ ಡಿಎಲ್‌ಎನ್ ರಾವ್, ರವೀಂದ್ರನಾಥ್ ಕಾಮತ್, ಕಲ್ಯಾಣ ಬಸವರಾಜ್ ಸೇರಿದಂತೆ ಹಿರಿಯ-ಕಿರಿಯ ವಕೀಲರನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದ ಬಳಿಕ ಎಲ್ಲರೊಟ್ಟಿಗೆ ಚಹಾ ಕುಡಿದು ಅಲ್ಲಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಅನೌಪಚಾರಿಕವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮೂಲತಃ ವಕೀಲ. ಆದರೆ, ರಾಜಕೀಯದಲ್ಲಿ ಸಕ್ರೀಯವಾದ ಬಳಿಕ ವಕೀಲಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಆಗಾಗ ಕೋರ್ಟ್‌ಗೆ ಬಂದು ಹೋಗುತ್ತಿದೆ. ಈಗ ರಾಜಕೀಯದಲ್ಲಿ ಒಂದಿಷ್ಟು ಬಿಡುವು ಸಿಕ್ಕಿದ್ದು ವಕೀಲ ವೃತ್ತಿ ಮುಂದುವರಿಸುತ್ತೇನೆ. ಆಗಾಗ ಹೈಕೋರ್ಟ್‌ಗೆ ಬರುತ್ತಿರುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ: ಸಚಿವ ಅಶ್ವತ್ಥನಾರಾಯಣ
ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್
ವಾಯುವ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ನಾಮಪತ್ರ ಸಲ್ಲಿಕೆ
ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ
ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್