ಹಣ್ಣು, ತರಕಾರಿ ರಫ್ತಿಗೆ ಎರಡು ದೇಸಿ ಏರ್‌ಲೈನ್ಸ್‌ಗಳು ಉತ್ಸುಕ

ಕಾರ್ಗೋ ದರ ಅಂತಿಮವಾದರೆ ವಾರಾಂತ್ಯದಲ್ಲಿ ರಫ್ತು ಚುರುಕು; ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣಗಳಿಂದ ಸೇವೆ

Team Udayavani, Apr 23, 2020, 6:15 AM IST

ಹಣ್ಣು, ತರಕಾರಿ ರಫ್ತಿಗೆ ಎರಡು ದೇಸಿ ಏರ್‌ಲೈನ್ಸ್‌ಗಳು ಉತ್ಸುಕ

ಬೆಂಗಳೂರು: ವಿದೇಶಗಳಿಗೆ ರಾಜ್ಯದಿಂದ ನೇರವಾಗಿ ಹಣ್ಣು, ತರಕಾರಿ ರಫ್ತಿಗೆ ಕಾರ್ಗೋ ವಿಮಾನಯಾನ ಸೇವೆ ಒದಗಿಸಲು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹಾಗೂ ಸ್ಪೈಸ್‌ ಜೆಟ್‌ ಆಸಕ್ತಿ ತೋರಿವೆ. ಎಲ್ಲವೂ ಅಂದುಕೊಂಡಂತೇ ಆದರೆ ಮಂಗಳೂರು ಮತ್ತು ಬೆಂಗಳೂರು ಅಂ.ರಾ. ವಿಮಾನ ನಿಲ್ದಾಣಗಳಿಂದ ಹಣ್ಣು-ತರಕಾರಿ ವಿದೇಶಕ್ಕೆ ರಫ್ತಾಗಲಿವೆ.

ಸದ್ಯ ವಿದೇಶಿ ವಿಮಾನಯಾನ ಸಂಸ್ಥೆಗಳು ಕಾರ್ಗೋ ಸೇವೆ ಮುಂದುವರಿಸಿದ್ದು ಅವು ವಿಧಿಸುತ್ತಿರುವ ದರ ದುಬಾರಿಯಾದ ಕಾರಣ ವ್ಯವಹಾರ ನಡೆಸಲು ರಫ್ತುದಾರರು ಹಿಂದೇಟು ಹಾಕುವಂತಾಗಿದೆ. ದೇಶೀಯ ವಿಮಾನಯಾನ ಸಂಸ್ಥೆಗಳು ಕೇಳಿದ ದರ ಪಾವತಿಸಲು ಮುಂದಾದರೆ ಶೀಘ್ರ ಕಾರ್ಗೋ ಸೇವೆಗೆ ಚಾಲನೆ ಸಿಗುವ ನಿರೀಕ್ಷೆ ಮೂಡಿದೆ.

ಲಾಕ್‌ಡೌನ್‌ ಬಳಿಕ ವಿದೇಶಿ ಸಂಸ್ಥೆಗಳು ಮಾತ್ರ ಕಾರ್ಗೋ ಸೇವೆ ನೀಡುತ್ತಿದ್ದು ಎರಡು- ಮೂರು ಪಟ್ಟು ಹೆಚ್ಚಿನ ದರ ಸಂಗ್ರಹಿಸುತ್ತಿವೆ. ರಾಜ್ಯದ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ರಫ್ತು ಮಾಡುವಂತಾಗಲಿ ಎಂಬ ಉದ್ದೇಶದಿಂದ ಕೃಷಿ, ತೋಟಗಾರಿಕೆ ಇಲಾಖೆಯು ರಾಜ್ಯದ ಪ್ರಮುಖ ರಫ್ತುದಾರರೊಂದಿಗೆ ಇತ್ತೀಚೆಗೆ ಸಭೆ ನಡೆಸಿತ್ತು. ಈ ವೇಳೆ ವಿದೇಶಿ ವಿಮಾನಯಾನ ಸಂಸ್ಥೆಗಳು ಪ್ರತಿ ಕೆ.ಜಿ.ಗೆ 250 ರೂ.ನಿಂದ 350 ರೂ. ದರ ವಿಧಿಸುತ್ತಿವೆ ದೇಶೀಯ ವಿಮಾನಯಾನ ಸಂಸ್ಥೆಗಳು ಸಾಮಾನ್ಯ ದರದಲ್ಲಿ ಸೇವೆ ಒದಗಿಸಿದರೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಅದರಂತೆ ಮುಖ್ಯ ಕಾರ್ಯದರ್ಶಿಗಳು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಎರಡು ಸಂಸ್ಥೆಗಳು ಸ್ಪಂದಿಸಿವೆ. ಸ್ಪೈಸ್‌ ಜೆಟ್‌ ಕೆಂಪೇಗೌಡ ಅಂ.ರಾ. ವಿಮಾನನಿಲ್ದಾಣದಿಂದ ಹಾಗೂ ಏರ್‌ಇಂಡಿಯಾ ಕೆಂಪೇಗೌಡ ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಸೇವೆ ನೀಡಲು ಉತ್ಸಾಹ ತೋರಿವೆ.

ದರ ಶೇ. 10ರಷ್ಟು ಹೆಚ್ಚು
ಈ ಹಿಂದೆ ಹಣ್ಣು, ತರಕಾರಿ ಇತರೆ ಅಗತ್ಯ ವಸ್ತುಗಳ ರಫ್ತಿಗೆ ದೇಶೀಯ ವಿಮಾನಯಾನ ಸಂಸ್ಥೆಗಳು ಪ್ರತಿ ಕೆ.ಜಿ.ಗೆ 110 ರೂ.ನಿಂದ 130 ರೂ.ವರೆಗೆ ದರ ವಿಧಿಸುತ್ತಿದ್ದವು. ಇದೀಗ ಆ ದರ ಕೆ.ಜಿ.ಗೆ 140 ರೂ.ನಿಂದ 150 ರೂ.ವರೆಗೆ ಇದೆ. ಸಂಸ್ಥೆಗಳು ದರ ವಿವರ ನೀಡಿದ್ದು, ಅದನ್ನು ಸರ್ಕಾರ ರಾಜ್ಯದ ರಫ್ತುದಾರರಿಗೆ ರವಾನಿಸಿದೆ. ರಫ್ತುದಾರರು-ಆಮದುದಾರರು ಒಪ್ಪಿದರೆ ರಫ್ತು ಶುರುವಾಗಲಿದೆ.

ಟಾಪ್ ನ್ಯೂಸ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರ ಪಾದಯಾತ್ರೆ

ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರ ಪಾದಯಾತ್ರೆ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

MUST WATCH

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಹೊಸ ಸೇರ್ಪಡೆ

1-paal

ಪಾಲಿಕೆ ಜಾಗ ಪರಭಾರೆ ಸಲ್ಲ : ಆಯುಕ್ತರಿಗೆ ಅಣ್ಣಾ ಹಜಾರೆ ಹೋರಾಟ ಸಮಿತಿ ಮನವಿ

1-aaap

ನಗರಸಭೆ ಚುನಾವಣೆಗೆ ಆಮ್‌ಆದ್ಮಿ ಪಕ್ಷ ಕಣಕ್ಕೆ

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

1-ggt

ಚಿಕ್ಕಮಗಳೂರು: ಅಮಾನತುಗೊಂಡಿದ್ದ ಜ್ಯೋತಿ ಡಿಸೋಜಾ ಮತ್ತೆ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.