ಠಾಣೆಯ ಎಲ್ಲ 71 ಸಿಬ್ಬಂದಿ ವರ್ಗ !

Team Udayavani, Feb 2, 2019, 12:35 AM IST

ಬೆಂಗಳೂರು: ದೂರು ದಾಖಲಿಸಲು ಬಂದ ಮಹಿಳೆ ಮೇಲೆ ಹಲ್ಲೆ, ರೈಫ‌ಲ್‌ ಕಳ್ಳತನ, ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ನಡುವಣ ಸಮನ್ವಯ ಕೊರತೆಯಿಂದ ಸುದ್ದಿಯಾಗಿದ್ದ ಕುಮಾರಸ್ವಾಮಿ ಲೇಔಟ್‌ ಠಾಣೆಯ ಎಲ್ಲ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಇನ್ಸ್‌ ಪೆಕ್ಟರ್‌ ಸೇರಿ 71 ಮಂದಿಯನ್ನು ವರ್ಗಾವಣೆಗೊಳಿಸಿ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಪೊಲೀಸ್‌ ಠಾಣೆಯೊಂದರ ಎಲ್ಲ ಸಿಬ್ಬಂದಿಯನ್ನು ಏಕಕಾಲಕ್ಕೆ ವರ್ಗಾವಣೆಗೊಳಿಸಿದ ನಿದರ್ಶನ ಇದಾಗಿದೆ. ವರ್ಗಾ ವಣೆ ಆದೇಶ ಸುದ್ದಿ ಕೇಳಿದ ಬೆನ್ನಲ್ಲೇ ರಜೆಯ ಮೇಲಿದ್ದ ಕುಮಾರಸ್ವಾಮಿ ಲೇಔಟ್‌ ಠಾಣೆಯ ಮುಖ್ಯಪೇದೆ ನದಾಫ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ನಡೆದ ಕೆಲವು ಘಟನೆಗಳ ಸಂಬಂಧ ಠಾಣೆಯಲ್ಲಿ ಶಿಸ್ತು
ರೂಪಿಸುವ, ವ್ಯವಸ್ಥೆಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಪಿಎಸ್‌ಐ ಹೊರತುಪಡಿಸಿ ಠಾಣೆಯ 71 ಸಿಬ್ಬಂದಿ ಯನ್ನು ವರ್ಗಾವಣೆ ಮಾಡುವಂತೆ ನಗರ ಪೊಲೀಸರಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ