ಸಿಎಂ ಒಬ್ರೆ ಅಲ್ಲ ಎಲ್ಲ ಸಚಿವರೂ ಮಾತನಾಡ್ಬೇಕು

Team Udayavani, Oct 7, 2017, 7:42 AM IST

07-1.jpg

ಬೆಂಗಳೂರು: ರಾಜ್ಯ ಸರ್ಕಾರದ ಸಾಧನೆಗಳನ್ನು ಸರಿಯಾಗಿ ಜನರಿಗೆ ಮುಟ್ಟಿಸದೇ ಇರುವ ಮತ್ತು ಪ್ರತಿಪಕ್ಷಗಳ
ಆರೋಪಗಳಿಗೆ ತಕ್ಕ ಉತ್ತರ ನೀಡದೇ ಇರುವ ಸಚಿವರ ವಿರುದ್ಧ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಗರಂ ಆಗಿದ್ದಾರೆ. ಜತೆಗೆ, ಪ್ರತಿಪಕ್ಷಗಳ ಪ್ರತಿ ಟೀಕೆಗೆ ಮುಖ್ಯಮಂತ್ರಿಗಳೊಬ್ಬರೇ ತಿರುಗೇಟು ನೀಡಿದರೆ ಸಾಲದು, ಎಲ್ಲರೂ  ಪ್ರತಿಕ್ರಿಯಿಸಬೇಕು ಎಂದೂ ಖಡಕ್ಕಾಗಿ ಸೂಚಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರಿಗೆ ವಿನಂತಿ ರೂಪದ ಎಚ್ಚರಿಕೆ ನೀಡಿದ ಅವರು, ಕಳೆದ ನಾಲ್ಕೂವರೆ ವರ್ಷದಲ್ಲಿ ಸಚಿವರು, ಸರ್ಕಾರ ಹಾಗೂ ಪಕ್ಷದ ವಿರುದ್ಧ ಬಂದಿರುವ ಆರೋಪಗಳಿಗೆ ಪ್ರತಿ ಕ್ರಿಯೆ ನೀಡದೆ ಮೌನ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. “ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲು ಎಷ್ಟು ಪತ್ರಿಕಾಗೋಷ್ಠಿ ಮಾಡಿದ್ದೀರಿ? ಪ್ರತಿಪಕ್ಷಗಳ ಟೀಕೆಗಳಿಗೆ ಎಷ್ಟು ಪ್ರತಿಕ್ರಿಯೆ ನೀಡಿದ್ದೀರಿ?’ ಎಂದು ಸಚಿವರಿಗೆ ಮಾಹಿತಿ ನೀಡುವಂತೆ ವೇಣುಗೋಪಾಲ ಕೇಳಿದರು. ಪ್ರತಿಪಕ್ಷಗಳ ಪ್ರತಿಯೊಂದು ಟೀಕೆಗೂ ಮುಖ್ಯ ಮಂತ್ರಿಯೊಬ್ಬರೇ ತಿರುಗೇಟು ನೀಡಿದರೆ ಸಾಲದು. ಎಲ್ಲರೂ ಪ್ರತಿಕ್ರಿಯೆ ನೀಡಬೇಕು. ಪಕ್ಷ ನಿಮ್ಮನ್ನು ಮಂತ್ರಿಗಳನ್ನಾಗಿ ಮಾಡಿದೆ. ಪಕ್ಷ ಇಲ್ಲದಿದ್ದರೆ ಅಧಿಕಾರ ಇಲ್ಲ ಎನ್ನುವ ಮಾತನ್ನು ಸಚಿವರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರೇ, ಕೆಲಸ ಮಾಡಿ: ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಭವಿಷ್ಯ ಕಷ್ಟ ಎನ್ನುವ ಸಂದೇಶ ವನ್ನು ವೇಣುಗೋಪಾಲ ನೀಡಿದ್ದಾರೆ.  ಪಕ್ಷ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಾಸಕ್ತಿ ವಹಿಸಿದರೆ, ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಬೂತ್‌ ಮಟ್ಟದ ಸಮಿತಿಗಳ ರಚನೆ ಮಾಡುವಲ್ಲಿ ಶಾಸಕರು ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ
ಬಂದಿದ್ದರಿಂದ ಕಡ್ಡಾಯವಾಗಿ ಶಾಸಕರು ಬೂತ್‌ ಕಮಿಟಿ ರಚನೆ ಮಾಡಬೇಕು ಮತ್ತು ಮನೆ ಮನೆಗೆ ಕಾಂಗ್ರೆಸ್‌
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಪ್ರತಿ ದಿನ ಎಷ್ಟು ಬೂತ್‌ ಗಳಿಗೆ ಭೇಟಿ ನೀಡಿ, ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ನಡೆಸಿದ್ದೀರಿ ಎಂಬ ಬಗ್ಗೆ ರಾಜ್ಯ ಘಟಕಕ್ಕೆ ಮತ್ತು ಹೈಕಮಾಂಡ್‌ಗೆ ವರದಿ ನೀಡುವಂತೆ ಶಾಸಕರಿಗೆ ವೇಣುಗೋಪಾಲ ತಾಕೀತು ಮಾಡಿದ್ದಾರೆ. ಹಾಲಿ ಶಾಸಕರಲ್ಲಿ ಎಲ್ಲರೂ ಮತ್ತೆ ವಿಧಾನಸಭೆಗೆ ಬರಬೇಕು ಎನ್ನುವುದು ಪಕ್ಷದ ಬಯಕೆ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಸಕ್ರೀಯರಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ
ಎಂದು ತಿಳಿದು ಬಂದಿದೆ.  

ಟಾಪ್ ನ್ಯೂಸ್

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

crime (2)

ಕಲಬುರಗಿ: ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

priyank

ಗಂಗಾ ಕಲ್ಯಾಣ ಯೋಜನೆ ಗೋಲ್‌ ಮಾಲ್‌; ನನ್ನ ಮಾತು ನಿಜವಾಗಿದೆ: ಪ್ರಿಯಾಂಕ್‌ ಖರ್ಗೆ

1-assds

ರಾಜ್ಯದಲ್ಲಿ ಕಮಿಷನ್‌ ಪರ್ವ ಆರಂಭ: ಕಾಂಗ್ರೆಸ್‌ ಟೀಕೆ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

ಮೇ 19ರಂದು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರಕಟ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.