ರಾಜ್ಯದಲ್ಲಿ ಸೆಕ್ಯುಲರ್ ಸರ್ಕಾರ ಬರಬಾರದೆಂದು ಮೈತ್ರಿ: ಡಿಕೆಶಿ!
Team Udayavani, May 26, 2018, 3:40 PM IST
ಬೆಂಗಳೂರು: ರಾಜ್ಯದಲ್ಲಿ ಸೆಕ್ಯುಲರ್ ಸರ್ಕಾರ ಬರಬಾರದು ಎಂದು ಜೆಡಿಎಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಎಡವಟ್ಟು ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ಭರದಲ್ಲಿ, ಕಮ್ಯೂನಲ್ ಎಂದು ಹೇಳುವ ಬದಲು ಸೆಕ್ಯುಲರ್ ಎಂಬ ಪದ ಉಪಯೋಗಿಸಿ ನಗೆಪಾಟಿಲಿಗೀಡಾಗಿದ್ದಾರೆ.
ರಾಷ್ಟ್ರದಲ್ಲಿ ಕಾಂಗ್ರೆಸ್ ಒಂದು ದೊಡ್ಡ ಪಕ್ಷವಾಗಿದೆ. ಹೀಗಾಗಿ ರಾಜ್ಯದಲ್ಲಿ ಸೆಕ್ಯುಲರ್ ಸರ್ಕಾರ ಬರಬಾರದು ಎಂದು ಹೃದಯ ಶ್ರೀಮಂತಿಕೆ ತೋರಿಸಿ ಜೆಡಿಎಸ್ ಅನ್ನು ಬೆಂಬಲಿಸಿದ್ದೇವೆ ಎಂದರು.