ಅಮೃತ್ ಪೌಲ್ ಜತೆಗೆ ಸಚಿವರ ಹೆಸರನ್ನೂ ಬಹಿರಂಗಪಡಿಸಲಿ: ಕಾಂಗ್ರೆಸ್ ಆಗ್ರಹ
ಇತಿಹಾಸದಲ್ಲಿ ಎಡಿಜಿಪಿ ಇದುವರೆಗೆ ಬಂಧನವಾಗಿರಲಿಲ್ಲ...
Team Udayavani, Jul 4, 2022, 5:00 PM IST
ಬೆಂಗಳೂರು : ಎಡಿಜಿಪಿ ಅಮೃತ್ ಪೌಲ್ ಜತೆಗೆ ಪಿಎಸ್ ಐ ನೇಮಕದಲ್ಲಿ ಭಾಗಿಯಾದ ಪ್ರಭಾವಿ ಸಚಿವರ ಹೆಸರನ್ನೂ ಸರಕಾರ ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಎಡಿಜಿಪಿ ಬಂಧನದಿಂದ ಸರಕಾರದ ದೊಡ್ಡಮಟ್ಟದ ವ್ಯಕ್ತಿಗಳು ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಇದರ ಜತೆಗೆ ಈ ಹಗರಣದಲ್ಲಿ ಭಾಗಿಯಾದ ಪ್ರಭಾವಿ ಸಚಿವರ ಹೆಸರನ್ನು ಜನತೆಯ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಇತಿಹಾಸದಲ್ಲಿ ಎಡಿಜಿಪಿ ದರ್ಜೆ ಅಧಿಕಾರಿ ಇದುವರೆಗೆ ಬಂಧನವಾಗಿರಲಿಲ್ಲ. ಇದು ಪೊಲೀಸ್ ಇಲಾಖೆಯ ಪಾಲಿಗೆ ಕಪ್ಪು ಚುಕ್ಕೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ರಾಜ್ಯಪಾಲರು ತಕ್ಷಣ ಸರಕಾರವನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಸದನದಲ್ಲಿ ಮೂರು ಬಾರಿ ಗೃಹ ಸಚಿವರು ಉತ್ತರ ನೀಡುವಾಗ ಪಿಎಸ್ ಐ ನೇಮಕದಲ್ಲ ಹಗರಣದಲ್ಲಿ ನಡೆದಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಈಗ ಏನಾಗಿದೆ ! ಇದು ಡಬಲ್ ಎಂಜಿನ್ ಸರಕಾರದ ಇನ್ನೊಂದು ಸಾಧನೆ ಎಂದು ಟೀಕಿಸಿದೆ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್ ಪೌಲ್ ಬಂಧಿಸಿದ ಸಿಐಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರ್ಸಿಂಗ್ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್
ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್ ಗುಂಡೂರಾವ್
ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗದು
ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ
ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್