ಅಂಬರೀಶ್ ಸಾಕಿದ್ದ ಪ್ರೀತಿಯ ಕನ್ವರ್ ಇನ್ನಿಲ್ಲ..!
Team Udayavani, May 24, 2021, 1:58 PM IST
ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಸಾಕಿದ್ದ ಮುದ್ದಿನ ನಾಯಿ ಕನ್ವರ್ ಇಂದು(ಸೋಮವಾರ) ಕೊನೆಯುಸಿರೆಳೆದಿದೆ. ಕನ್ವರ್ ಹೆಸರಿನ ಶ್ವಾನವು ಅಂಬರೀಶ್ ಅವರ ಪ್ರೀತಿಯ ನಾಯಿ. ‘ಅಂತ’ ಸಿನಿಮಾದಲ್ಲಿ ಅಂಬರೀಶ್ ಅವರಿಗೆ ಕನ್ವರ್ ಎಂಬ ಹೆಸರನ್ನು ಇಡಲಾಗಿತ್ತು. ಇದೇ ಹೆಸರನ್ನು ಅಂಬರೀಶ್ ತಮ್ಮ ನಾಯಿಗೆ ಇಟ್ಟಿದ್ದರು. ಆಗಾಗ ಕನ್ವರ್ ಜೊತೆ ಅಂಬರೀಶ್ ವಾಕಿಂಗ್ ಹೋಗುತ್ತಿದ್ದರು. ಇದರಿಂದ ಬಹಳ ಖುಷಿ ಕೊಡ್ತಿತ್ತಂತೆ.
ಅಂಬರೀಶ್ ಜೊತೆ ಸಾಕಷ್ಟು ಒಡನಾಟ ಹೊಂದಿದ್ದ ಕನ್ವರ್ ನಾಯಿಯು, ಅಂಬರೀಶ್ ಎಲ್ಲಿಗೆ ಹೋದ್ರೂ ಹಿಂಬಾಲಿಸ್ತಿತ್ತಂತೆ. ಅಂಬರೀಶ್ ನಿಧನದ ನಂತರ ಕನ್ವರ್ ಊಟ-ತಿಂಡಿಯನ್ನೂ ಸರಿಯಾಗಿ ಸೇವಿಸ್ತಿರಲಿಲ್ಲ. ಅಂಬರೀಶ್ ನಂತರ ಒಬ್ಬಂಟಿಯಾಗಿತ್ತು ಕನ್ವರ್. ಇಂದಿಗೆ ಅಂಬರೀಶ್ ಅಗಲಿ ಸರಿಯಾಗಿ ಎರಡೂವರೆ ವರ್ಷ. ಒಡೆಯನನ್ನ ಕಳೆದುಕೊಂಡ ಎರಡೂವರೆ ವರ್ಷಕ್ಕೆ ಕನ್ವರ್ ಪ್ರಾಣ ಬಿಟ್ಟಿದೆ.
ಸೈಂಟ್ ಬರ್ನಾಡ್ ತಳಿಯ ಶ್ವಾನವಾಗಿದ್ದ ಕನ್ವರ್, ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ಗೂ ಸಿಕ್ಕಾಪಟ್ಟೆ ಇಷ್ಟವಂತೆ. ಇನ್ನು ಅಂಬಿ ಇದ್ದಾಗ, ಯಾವಾಗಲೂ ‘ಏ..ಕನ್ವರ್ ಲಾಲ್ ಬರೋ ಇಲ್ಲಿ’ ಅಂದ್ರೆ ಸಾಕು ಎಲ್ಲಿದ್ದರೂ ಅಂಬರೀಶ್ ಮುಂದೆ ಪ್ರತ್ಯಕ್ಷವಾಗಿ ಬಿಡ್ತಿತ್ತು ಅನ್ನೋ ಮಾತಿದೆ. ಕನ್ವರ್ ಹೊರತುಪಡಿಸಿ ಅಂಬರೀಶ್ ಮನೆಯಲ್ಲಿ ‘ಬುಲ್ಬುಲ್’ ಅನ್ನೋ ಹೆಸರಿನ ಶ್ವಾನವೂ ಇದೆ. ಎರಡು ಶ್ವಾನಗಳಿಗೂ ತಮ್ಮ ಸಿನಿಮಾಗಳಿಗೆ ಸಂಬಂಧಪಟ್ಟ ಹೆಸರನ್ನೇ ಇಟ್ಟಿದ್ದರು ನಟ ಅಂಬರೀಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..