ವೈದೇಹಿ ಕಥೆಯಾಧಾರಿತ “ಅಮ್ಮಚ್ಚಿಯೆಂಬ ನೆನಪು” ಈಗ ಪ್ರೈಮ್ ನಲ್ಲಿ ವೀಕ್ಷಿಸಿ
ಅಮ್ಮಚ್ಚಿಯೆಂಬ ನೆನಪು ಆಧರಿಸಿ ಚಂಪಾ ಶೆಟ್ಟಿ ಅವರು ನಿರ್ದೇಶಿಸಿದ ಸಿನಿಮಾ ತೆರೆಗೆ ಬಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.
Team Udayavani, Apr 24, 2020, 4:42 PM IST
ಅಮ್ಮಚ್ಚಿಯೆಂಬ ನೆನಪು
ಬೆಂಗಳೂರು: ಅಮ್ಮಚ್ಚಿಯೆಂಬ ನೆನಪು ಸಿನಿಮಾ ವೈದೇಹಿ ಅವರ ಸಣ್ಣ ಕಥೆಗಳ ಸಂಗ್ರಹ…ಇದು ಅಮ್ಮಚ್ಚಿ ಮತ್ತು ಅಕ್ಕುವಿನ ನಡುವಿನ ಹೋರಾಟವಾಗಿದೆ. ಈಗಾಗಲೇ ಅಮ್ಮಚ್ಚಿಯೆಂಬ ನೆನಪು ಆಧರಿಸಿ ಚಂಪಾ ಶೆಟ್ಟಿ ಅವರು ನಿರ್ದೇಶಿಸಿದ ಸಿನಿಮಾ ತೆರೆಗೆ ಬಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.
ಏತನ್ಮಧ್ಯೆ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಕಾಲ ಕಳೆಯಲು ಹಳೆ ಸಿನಿಮಾ, ಕಥೆ, ಕಾದಂಬರಿಗಳ ಮೊರೆ ಹೋಗಿದ್ದಾರೆ. ಥಿಯೇಟರ್ ನಲ್ಲಿ ಅಮ್ಮಚ್ಚಿಯೆಂಬ ನೆನಪು ಸಿನಿಮಾ ನೋಡಲು ಸಾಧ್ಯವಾಗಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಚಿಂತೆ ಬೇಡ. ಯಾಕೆಂದರೆ ಈಗಾಗಲೇ ಅಮ್ಮಚ್ಚಿಯೆಂಬ ನೆನಪು ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದ್ದು ವೀಕೆಂಡ್ ಗೆ ಒಂದೊಳ್ಳೆ ಸಿನಿಮಾ ನೋಡಬಹುದಾಗಿದೆ.
ಪುಟ್ಟಮ್ಮತ್ತೆಯ ಮೊಮ್ಮಗಳು ಅಮ್ಮಚ್ಚಿಯ ಕತೆಯನ್ನು ಪಕ್ಕದ ಮನೆಯ ಅಕ್ಕುವಿನ ಕತೆಯ ಜೊತೆ ಹೇಳುತ್ತಾ ಮೂರು ಕತೆಗಳ ತ್ರಿವೇಣಿ ಸಂಗಮದ ಚಿತ್ರವೇ ಅಮ್ಮಚ್ಚಿಯ ನೆನಪು. ಪ್ರಕಾಶ್ ಪಿ,ಶೆಟ್ಟಿ, ವೇಣು ನೆಪೋಲಿಯನ್, ಗೀತಾ ಸುರತ್ಕಲ್ ನಿರ್ಮಾಣದ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ರಾಜ್ ಬಿ ಶೆಟ್ಟಿ, ವೈಜಯಂತಿ ಅಡಿಗ, ಡಾ.ರಾಧಾಕೃಷ್ಣ ಉರಾಳ, ದಿಯಾ ಪಲಕಲ್, ದೀಪಿಕಾ ಪಿ ಆರಾಧ್ಯ, ಚಂದ್ರಹಾಸ್ ಉಲ್ಲಾಳ್ ನಟಿಸಿದ್ದಾರೆ.