ಅಚ್ಚರಿ ಮೂಡಿಸಿದ ಆನಂದ್ ಸಿಂಗ್ ಅಂಗಿ!
Team Udayavani, Nov 30, 2019, 3:05 AM IST
ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆ ಕಣ ರಂಗೇರುತ್ತಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಡ್ರೆಸ್ ಎಲ್ಲರ ಗಮನ ಸೆಳೆಯುತ್ತಿದೆ.
ಚುನಾವಣಾ ಪ್ರಚಾರ ಆರಂಭಗೊಂಡ ದಿನದಿಂದಲೂ ಸಿಂಗ್ ಅವರು ತಿಳಿ ಕೇಸರಿ ಬಣ್ಣದ ಅಂಗಿ ಧರಿಸಿ ಮತದಾರರನ್ನು ಭೇಟಿ ಮಾಡುತ್ತಿದ್ದು, ಇದರ ಹಿಂದೆ ಬಲವಾದ ಕಾರಣವಿದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷಿಗಳ ಸೂಚನೆ ಮೇರೆಗೆ ಆನಂದ್ ಸಿಂಗ್ ತಿಳಿ ಕೇಸರಿ ಬಣ್ಣದ ಅಂಗಿ ಹಾಗೂ ಬಿಳಿಪ್ಯಾಂಟ್ ಧರಿಸುತ್ತಿದ್ದಾರೆ.
ಯಾವುದೇ ಕ್ಷುದ್ರ ಶಕ್ತಿಗಳ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ಈ ದಿರಿಸು ಧರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಆನಂದ್ ಸಿಂಗ್ ಮಾತ್ರ ಇದನ್ನು ಅಲ್ಲಗಳೆದಿದ್ದಾರೆ. ಗುರುವಾರ ಪ್ರಚಾರದ ವೇಳೆ ದಿರಿಸಿನ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಡ್ರೆಸ್ ಸೆನ್ಸ್ ಜಾಸ್ತಿಯಿದೆ, ಇಷ್ಟವಾಯಿತು. ಅದಕ್ಕೆ ಈ ಶರ್ಟ್ ಧರಿಸಿದ್ದೇನೆ. ಅಂಗಿಯ ಬಣ್ಣ ಇಷ್ಟವಾಗಿದ್ದರಿಂದ ಇಂತಹ 20 ಅಂಗಿ ಖರಿದಿಸಿದ್ದು, ಇದರ ಹಿಂದೆ ಇನ್ಯಾವ ಕಾರಣವೂ ಇಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ