ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ., 1 ಲಕ್ಷ N-95 ಮಾಸ್ಕ್ ನೀಡಿದ ಅಪೆಕ್ಸ್ ಬ್ಯಾಂಕ್
Team Udayavani, May 12, 2021, 11:35 AM IST
ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆಯನ್ನು ಅಪೆಕ್ಸ್ ಬ್ಯಾಂಕ್ ನೀಡಿದ್ದು, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಎಂದು ಮುಖ್ಯಮಂತ್ರಿಗಳಿಗೆ ಚೆಕ್ಕನ್ನು ಹಸ್ತಾಂತರಿಸಿದರು.
ಇದೇ ವೇಳೆ 1 ಲಕ್ಷ N-95 ಮಾಸ್ಕ್ ಅನ್ನು ಸಹ ಮುಖ್ಯಮಂತ್ರಿಗಳಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ನೀಡಲಾಯಿತು. ಈ ವೇಳೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಬೆಳ್ಳಿಪ್ರಕಾಶ್, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಅಪೆಕ್ಸ್ ಬ್ಯಾಂಕ್ ಎಂಡಿ ಸಿ.ಎನ್.ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸರ್ಕಾರಕ್ಕೆ ಬೇಕಿದೆ ಇಂತಹ ನೆರವಿನ ಹಸ್ತ: ಕೋವಿಡ್ ಎರಡನೆಯ ಬಹಳ ಗಂಭೀರವಾಗಿ ಪರಿಣಾಮವನ್ನು ಬೀರುತ್ತದೆ. ಇದರ ನಿರ್ವಹಣೆ ಸರ್ಕಾರಗಳಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಗೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಪೆಕ್ಸ್ ಬ್ಯಾಂಕ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದಂತೆ ಇತರ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಮುಂದಾಗಬೇಕಿದೆ. ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಇಂತಹ ಹಣ ಬಳಕೆಯಾಗಲು ಕಾರಣವಾಗಬೇಕಿದೆ. ನಾನು ಸಹ ಮೈಸೂರು ಮೃಗಾಲಯ ನಿರ್ವಹಣೆಗೆ ದಾನಿಗಳು ನೆರವು ನೀಡಬೇಕೆಂದು ನಿನ್ನೆಯಷ್ಟೇ ಮೈಸೂರಿನಲ್ಲಿ ಮನವಿ ಮಾಡಿದ್ದೆ. ಹೀಗೆ ಉದಾರಿಗಳ ನೆರವಿನಿಂದ ಇಂತಹ ಮಹಾಮಾರಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಎಸ್. ಟಿ. ಸೋಮಶೇಖರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ
ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?
ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ : ಅಲ್ಲಲ್ಲಿ ಧರೆಗುರುಳಿದ ಮರ, ಜನಜೀವನ ಅಸ್ತವ್ಯಸ್ತ
ಪ್ರಾಣಿ ಪಕ್ಷಿಗಳಿಗೂ ಉಂಟು ಆಶ್ರಯ ತಾಣ
MUST WATCH
ಹೊಸ ಸೇರ್ಪಡೆ
ಗಜಪಯಣ ಜನರ ಹಬ್ಬವಾಗಿಸಬೇಕು: ಶಾಸಕ ಮಂಜುನಾಥ್
ಬಿಜೆಪಿಗನ ಮನೆ ಬುಲ್ಡೋಜ್ ಕೇವಲ ಪ್ರದರ್ಶನ: ಪ್ರಿಯಾಂಕಾ ಗಾಂಧಿ
ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ
ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ನಿರ್ಧಾರ; ಬಸ್ಗಳ ಫುಟ್ಬೋರ್ಡ್ನಲ್ಲಿ ನಿಂತು ಪ್ರಯಾಣ
ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ