ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಿ: ಶಿಕ್ಷಣ ಸಚಿವರ ಪತ್ರ

Team Udayavani, Oct 13, 2019, 3:00 AM IST

ಕಾಸರಗೋಡು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂದು ಆಗ್ರಹಿಸಿ ಕರ್ನಾಟಕದ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಕೇರಳದ ಶಿಕ್ಷಣ ಸಚಿವ ಪ್ರೊ| ಸಿ.ರವೀಂದ್ರನಾಥ್‌ ಅವರಿಗೆ ಪತ್ರ ಬರೆದಿದ್ದಾರೆ.

ಕಾಸರಗೋಡಿನ ಕನ್ನಡ ಪ್ರದೇಶಗಳಾದ ಬೇಕಲ, ಉದಮ ಮತ್ತಿತರ ಕಡೆಗಳ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ತಿಳಿಯದ ಮಲೆಯಾಳಿ ಶಿಕ್ಷಕರನ್ನು ನೇಮಿಸಿದ್ದು, ಅದು ಅಲ್ಲಿನ ಕನ್ನಡಿಗರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬರುವ ಶಿಕ್ಷಕರನ್ನೇ ನೇಮಿಸ ಬೇಕೆಂದು ಆಗ್ರಹಿಸಿ ಸುರೇಶ್‌ ಕುಮಾರ್‌ ಪತ್ರ ಬರೆದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ