Udayavni Special

ರಾಜ್ಯದಲ್ಲಿ ರಾಮಜನ್ಮ ಭೂಮಿ ಹೋರಾಟ

Team Udayavani, Nov 10, 2019, 5:15 AM IST

RAM-M

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಕರ್ನಾಟಕದಲ್ಲಿ 35 ವರ್ಷಗಳ ಹಿಂದೆಯೇ ದೊಡ್ಡ ಪ್ರಮಾಣದಲ್ಲೇ ಪ್ರಾರಂಭವಾಗಿತ್ತು.

1984ರ ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಎರಡನೇ ಮಹಾ ಸಮ್ಮೇಳನ ಉಜಿರೆಯಲ್ಲಿ ನಡೆದಾಗ ರಾಮಜನ್ಮಭೂಮಿ ಜಾಗೃತಿ ರಥಯಾತ್ರೆಯೂ ಆರಂಭವಾಗಿತ್ತು, ರಾಮಜನ್ಮಭೂಮಿ ಮುಕ್ತಿಗಾಗಿ ಕರೆ ನೀಡಲಾಗಿತ್ತು.
1990 ರಲ್ಲಿ ಆದಿಚುಂಚನಗಿರಿ, ಧರ್ಮಸ್ಥಳ, ಕೂಡಲಸಂಗಮ ಸೇರಿ ರಾಜ್ಯದ ಏಳು ಭಾಗಗಳಿಂದ ರಾಮಶಿಲಾ ರಥಯಾತ್ರೆ ಹೆಸರಿನಲ್ಲಿ ಏಳು ರಥಗಳು ಬೀದರ್‌ನಲ್ಲಿ ಸಮಾವೇಶಗೊಂಡು ಬೃಹತ್‌ ಸಮಾವೇ ಶದ ಮೂಲಕ ಸುಮಾರು 60 ರಿಂದ 70 ಸಾವಿರ ಕರಸೇವಕರು ಅಯೋಧ್ಯೆ ತಲುಪಿದರು.

ಆಗ ಉತ್ತರಪ್ರದೇಶ ಮುಖ್ಯಮಂತ್ರಿಯಾ ಗಿದ್ದ ಮುಲಾಯಂಸಿಂಗ್‌ ಯಾದವ್‌ ಅವರು ಕರಸೇವಕರನ್ನು ಉತ್ತರಪ್ರದೇಶ ಪ್ರವೇಶದಲ್ಲೇ ತಡೆಯಲು ಸೂಚಿಸಿದಾಗ ಪೊಲೀಸರು ಬಂಧಿ ಸಿದರು. ಆಗ ಕೆಲವರ ಪ್ರಾಣತ್ಯಾಗ ಸಹ ಆಯಿ ತು. ಸ್ವಾತಂತ್ರಾéನಂತರ ಭಾರತದಲ್ಲಿ ರಾಮಜನ್ಮ ಭೂಮಿ ಮುಕ್ತಿಗಾಗಿ ನಡೆದ ಬಲಿದಾನ ಎಂದೇ ಆಗ ಕರಸೇವಕರು ಹೇಳಿಕೊಂಡರು.

ಆ ನಂತರ 1992 ರಲ್ಲಿ ಮತ್ತೆ ರಾಜ್ಯದ ದಕ್ಷಿಣ ಭಾಗದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಾಮಜನ್ಮಭೂಮಿ ಆಂದೋಲನ ಪ್ರಾರಂಭವಾಯಿತು. ಉತ್ತರ ಕರ್ನಾಟಕ ಭಾಗದ ನೇತೃತ್ವವನ್ನು ವಾದಿರಾಜ ಪಂಚಮುಖೀ ಅವರು ವಹಿಸಿಕೊಂಡಿದ್ದರು. (ಪ್ರಸ್ತುತ ಅವರು ಅಲಹಾಬಾದ್‌ನಲ್ಲಿ ಶ್ರೀಗಳಾಗಿದ್ದಾರೆ). ಆಗ ರಾಜ್ಯದಿಂದ 1 ಲಕ್ಷ ಕರಸೇವಕರು ಅಯೋಧ್ಯೆಗೆ ತೆರಳಿ ಅಶೋಕ್‌ ಸಿಂಘಾಲ್‌ ನೇತೃತ್ವದಲ್ಲಿ ಡಿಸೆಂಬರ್‌ 6 ರ ಘಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ 28 ಸಾವಿರ ಗ್ರಾಮಗಳಿಂದ ಒಂದು ಗ್ರಾಮದಿಂದ ಒಂದು ಇಟ್ಟಿಗೆ, ಒಬ್ಬ ಹಿಂದೂವಿ ನಿಂದ 1.25 ರೂ. ಸಂಗ್ರಹ ಮಾಡಲಾಗಿತ್ತು.

ರಾಜ್ಯದ ಪ್ರತಿ ಹಳ್ಳಿಯಿಂದಲೂ ಇಟ್ಟಿಗೆಗಳನ್ನು ಪೂಜಿಸಿ ರಾಮಮಂದಿರ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಿತರಾಗಿ ಜನತೆ ಕಳುಹಿಸಿಕೊಟ್ಟಿದ್ದರು.ವಹಿ ಬನಾಯೇಂಗೇ: ರಾಜ್ಯದಲ್ಲಿ ರಾಮಜನ್ಮಭೂಮಿ ಆಂದೋಲನ ಕುರಿತು ಆಗ ಕೂಡಲಸಂಗಮ ಭಾಗದಿಂದ ಹೊರಟ ರಥದ ಸಾರಥ್ಯ ವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಮಂತ್ರಿ ಆಗಿರುವ ಜಗದೀಶ್‌ ಕಾರಂತ್‌ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟ 73 ಬಾರಿ ವಿಫ‌ಲ ಯತ್ನದ ನಂತರ 1992ರಲ್ಲಿ ನಾವು ಯಶಸ್ವಿಯಾಗಿದ್ದೆವು. ಅಲ್ಲಿಂದ “ಮಂದಿರ್‌ ವಹಿ ಬನಾಯೇಂಗೇ’ ಘೋಷವಾಕ್ಯ ಮೊಳಗಿತು. ಆ ಜಾಗವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಖಾತರಿಯಾಯಿತು.

ರಾಮಜನ್ಮಭೂಮಿ ಆಂದೋಲನವು ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಹಿಂದೂಗಳ ಭಾವನೆ ಭಾರತಕ್ಕಷ್ಟೇ ಅಲ್ಲದೆ ವಿಶ್ವಕ್ಕೆ ಗೊತ್ತಾಯಿತು. ಆದರೆ, ಈ ಸತ್ಯ ಅರ್ಥ ಮಾಡಿಕೊಳ್ಳದ ಸೆಕ್ಯುಲರ್‌ ವಾದಿಗಳ ರಾಜಕೀಯ ಭವಿಷ್ಯ ನೆಲಕಚ್ಚಿತು. ಎಡವಾದಿಗಳಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು.

1980-85 ರಲ್ಲಿ ಏನೇನೂ ಅಲ್ಲದ ಬಿಜೆಪಿ ಕೋಟಿ ಕೋಟಿ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದರಿಂದ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ.

ಕೇಂದ್ರದಲ್ಲಿ ಆಡಳಿತ ಮಾಡಿದ ಸರಕಾರಗಳಿಗೆ ನಾವು ಕಾನೂನಾತ್ಮಕವಾಗಿಯೇ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಬಿಟ್ಟುಕೊಡಲು ಬೇಡಿಕೆ ಇಟ್ಟಿದ್ದೆವು. ಅಂತಿಮವಾಗಿ ಅದು ನ್ಯಾಯಾಲಯದ ಅಂಗಳಕ್ಕೆ ಹೋಗಿತ್ತು. ಇದೀಗ 500 ವರ್ಷಗಳ ಸುದೀರ್ಘ‌ ಸಂಘರ್ಷಕ್ಕೆ ಪುರಸ್ಕಾರ, ಗೌರವ ಸಂದಿದೆ. ರಾಮಜನ್ಮಭೂಮಿ ವಿಚಾರದಲ್ಲಿ ತುಷ್ಟೀಕರಣ ನೀತಿ ಅನುಸರಿಸಿದ ಸೋಗಲಾಡಿ ಸೆಕ್ಯುಲರ್‌ವಾದಿಗಳು, ನಕಲಿ ಜಾತ್ಯತೀತವಾದಿ ಗಳಿಗೆ ಪಾಠವಾಗಿದೆ ಎಂದು ಹೇಳಿದ್ದಾರೆ.

ಆಡ್ವಾಣಿ ರಥಯಾತ್ರೆ
ರಾಮಮಂದಿರ ನಿರ್ಮಾಣಕ್ಕಾಗಿ ಎಲ್‌.ಕೆ.ಆಡ್ವಾಣಿಯವರು ನಡೆಸಿದ ರಥಯಾತ್ರೆ ಕರ್ನಾಟಕದಲ್ಲೂ ಐದು ದಿನ ಸಂಚರಿಸಿತ್ತು. ಬೆಂಗಳೂರಿಗೆ ಆಗಮಿಸಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಭೆಯ ನಂತರ ತುಮಕೂರು, ಶಿವಮೊಗ್ಗ, ಹರಿಹರ, ಹೊಸಪೇಟೆ, ಗಂಗಾವತಿ, ರಾಯಚೂರು ಮೂಲಕ ಸಾಗಿ ನಂತರ ಆಂಧ್ರಪ್ರದೇಶಕ್ಕೆ ಹೊರಟಿತ್ತು.

ಶಬರಿ ಕೊಟ್ಟ ಬೋರೆ ಹಣ್ಣು
ಭಕ್ತಿ, ಆದರಾತಿಥ್ಯ, ಮುಗ್ಧ ಪ್ರೀತಿಗೆ ಮತ್ತೂಂದು ಹೆಸರು “ಶಬರಿ’. ಬೇಡರ ರಾಜನ ಮಗಳಾಗಿದ್ದ ಶಬರಿ, ವೈರಾಗ್ಯದಿಂದ ಮನೆಯನ್ನು ತೊರೆದು ಮಾತಂಗ ಮುನಿಯ ಶಿಷ್ಯೆ ಯಾಗುತ್ತಾಳೆ. ಶ್ರೀರಾಮನನ್ನು ಜಪಿಸಿದರೆ ಮುಕ್ತಿ ಸಿಗುತ್ತದೆಂದು ತಿಳಿದಾಗ, ಆಕೆ ಆತನಿಗಾಗಿ ಉತ್ಕಟ ಭಕ್ತಿಯಿಂದ ವರ್ಷಾನುಗಟ್ಟಲೆ ಕಾಯುತ್ತಾಳೆ. ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದು ಕಚ್ಚಿ ನೋಡಿ, ಸಿಹಿ ಹಣ್ಣನ್ನು ರಾಮನಿಗಾಗಿ ತೆಗೆದಿಡುವುದೇ ಅವಳ ನಿತ್ಯ ಕಾಯಕವಾಗುತ್ತದೆ. ಆಕೆಯ ನಿಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸುತ್ತಾನೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲಿ:ಸಿದ್ದರಾಮಯ್ಯ

ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಎಚ್ ಡಿಕೆ

ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಎಚ್ ಡಿಕೆ

ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು

ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ