ಬಯಸಿದವರಿಗೆಲ್ಲ ಸಿಗದು ಅಯ್ಯಪ್ಪ ದರ್ಶನ

Team Udayavani, Oct 11, 2021, 6:00 AM IST

ಬಯಸಿದವರಿಗೆಲ್ಲ ಸಿಗದು ಅಯ್ಯಪ್ಪ ದರ್ಶನ

ಬೆಂಗಳೂರು: ಕೋವಿಡ್‌ ಕಾರಣ ಈ ಬಾರಿಯೂ ಶಬರಿಮಲೆ ಪ್ರವೇಶಕ್ಕೆ ಹಲವು ಷರತ್ತು ಗಳಿದ್ದು, ಬಯಸಿದವರಿಗೆಲ್ಲ ಅಯ್ಯಪ್ಪ ದರ್ಶನ ಸಿಗದು.

ಮಂಡಲ ಪೂಜೆ ಮತ್ತು ಮಕರಜ್ಯೋತಿ ಸಂದರ್ಭ ಪ್ರತೀ ದಿನ 25 ಸಾವಿರ ಮಂದಿಗೆ ಅವಕಾಶವಿದೆ. ಆದರೆ ಆನ್‌ಲೈನ್‌ ಬುಕಿಂಗ್‌ ಮಾಡಿದವರಿಗೆ ಮಾತ್ರ ದರ್ಶನ ಭಾಗ್ಯ ಪ್ರಾಪ್ತಿಯಾಗ ಲಿದೆ. ಹೀಗಾಗಿ ರಾಜ್ಯದ ಲಕ್ಷಾಂತರ ಭಕ್ತರು ಹಿಂದೇಟು ಹಾಕುವಂತಾಗಿದೆ.

ಈ ಬಾರಿ ದರ್ಶನಕ್ಕೆ ಲಸಿಕೆಯ ಎರಡೂ ಡೋಸ್‌ ಪಡೆದ ಪ್ರಮಾಣಪತ್ರ ಅಥವಾ ಯಾತ್ರೆಗೆ 48 ತಾಸು ಮುನ್ನ ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡಿಸಿ ನೆಗೆಟಿವ್‌ ಪ್ರಮಾಣಪತ್ರ ಹೊಂದಿರ ಬೇಕಿದೆ. ಇದು ಭಕ್ತರ ಚಿಂತೆಗೆ ಕಾರಣವಾಗಿದೆ.

ಭಕ್ತರಿಗೆ ಸಲಹೆ
ರಾಜ್ಯದಿಂದ ಪ್ರತೀ ವರ್ಷ 10ರಿಂದ 15 ಲಕ್ಷ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಪ್ರವೇಶ ಮಿತಿ ಇದ್ದ ಕಾರಣ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.ಈ ಬಾರಿಯೂ ಷರತ್ತು ವಿಧಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅವಕಾಶ ಸಿಗದು. ನಿರ್ಬಂಧಗಳ ಬಗ್ಗೆ ರಾಜ್ಯದ ಅಯ್ಯಪ್ಪ ದೇವಾಲಯಗಳಲ್ಲಿ ಭಕ್ತರಿಗೆ ಮಾಹಿತಿ ನೀಡಲಾಗುತ್ತಿದೆ. ಆನ್‌ಲೈನ್‌ ಬುಕ್ಕಿಂಗ್‌ ಮಾಡದೆ ಯಾತ್ರೆ ಕೈಗೊಳ್ಳಬೇಡಿ. ಇರುಮುಡಿ ಕಟ್ಟುವ ಮುನ್ನ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಲಾಗುತ್ತಿದೆ. ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವವರಿಗೆ ಮಾತ್ರ ಇರುಮುಡಿ ಕಟ್ಟಲು ಕೆಲವು ದೇವಾಲಯಗಳಲ್ಲಿ ಸೂಚನೆ ನೀಡಲಾಗಿದೆ

ಈ ಬಾರಿ ಪಂಪಾ ನದಿಯಲ್ಲಿ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ಪುಲಿಮೇಡು ಮತ್ತು ಎರಿಮೇಲಿ ಮೂಲಕ ಪ್ರವೇಶ ನಿರ್ಬಂಧಿಸಲಾಗಿದ್ದು, ಪಂಪಾ ಮಾರ್ಗದ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸನ್ನಿಧಾನದಲ್ಲಿ ಉಳಿಯುವಂತಿಲ್ಲ. ದರ್ಶನ ಮಾಡಿದವರಿಗೆ ಅಭಿಷೇಕದ ತುಪ್ಪ ವಿತರಿಸಲು ವಿಶೇಷ ವ್ಯವಸ್ಥೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ವೀಕ್‌ಎಂಡ್‌ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ

ನ. 16ರಿಂದ ಪ್ರಾರಂಭ
ಈ ಬಾರಿ ಮಂಡಲ ಪೂಜೆ ದರ್ಶನ ನ. 16ರಿಂದ ಪ್ರಾರಂಭವಾಗಿ ಡಿ. 27ರ ವರೆಗೆ ಇರಲಿದೆ. ಬಳಿಕ 2 ದಿನ ದೇಗುಲ ಮುಚ್ಚಿ ಮಕರಜ್ಯೋತಿ ಪೂಜೆಗೆ ಡಿ. 30ರಿಂದ ಮತ್ತೆ ತೆರೆಯಲಾಗುತ್ತದೆ. ಜ. 20ರ ವರೆಗೆ ದರ್ಶನಕ್ಕೆ ಅವಕಾಶ ಇದೆ. ಅಯ್ಯಪ್ಪ ದರ್ಶನಕ್ಕಾಗಿ ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅ. 17ರಿಂದ 21ರ ವರೆಗೆ ಮತ್ತು ನ. 3ರಿಂದ 31ರ ವರೆಗೆ ಆನ್‌ಲೈನ್‌ ಬುಕಿಂಗ್‌ ಮಾಡಬಹುದಾಗಿದೆ.

ವಂಚನೆಗೆ ಬ್ರೇಕ್‌
ಕಳೆದ ವರ್ಷ ನಕಲಿ ಪಾಸ್‌ ನೀಡಿ ವಂಚಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆಧಾರ್‌ ಕಾರ್ಡ್‌ ಸಹಿತ ಪ್ರತೀ ಭಕ್ತರ ಸಂಪೂರ್ಣ ಮಾಹಿತಿ ಪಡೆದು ಇ-ಟಿಕೆಟ್‌ ನೀಡಲಾಗುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿ ಪಂಪಾ ಪ್ರವೇಶ ಸಂದರ್ಭದಲ್ಲೇ ತೋರಿಸಬೇಕು. ಅಲ್ಲಿ ಮತ್ತೂಂದು ಅಧಿಕೃತ ಪಾಸ್‌ ನೀಡಲಾಗುತ್ತದೆ.

ಟಾಪ್ ನ್ಯೂಸ್

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆ

ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌: ಕೇಂದ್ರದಿಂದ ಅಂತಿಮ ಅನುಮೋದನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಲಸಿಕೆ ಪಡೆಯದವರ ಪತ್ತೆಗೆ ಬಿಎಲ್‌ಒಗಳು

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.