
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪರನ್ನು ಕಂಡಕೂಡಲೇ ಬೇರೆ ದಾರಿ ಹಿಡಿದ ಯೋಗೇಶ್ವರ್
Team Udayavani, Jul 20, 2021, 1:32 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಂಡ ಕೂಡಲೇ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬೇರೆ ದಾರಿಯಲ್ಲಿ ತೆರಳಿದ ಪ್ರಸಂಗ ಇಂದು ವಿಧಾನಸೌಧದಲ್ಲಿ ನಡೆಯಿತು.
ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಒಳಗೆ ಪ್ರವೇಶಿಸಿದ ಯೋಗೇಶ್ವರ್, ಸಚಿವ ಅಶೋಕ್ ಜೊತೆ ಚರ್ಚೆ ಮಾಡುತ್ತಾ ನಿಂತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಸಿಎಂ ಯಡಿಯೂರಪ್ಪ ಬರುತ್ತಿದ್ದರು. ಸಿಎಂ ಬರುತ್ತಿರುವುದನ್ನು ಕಂಡು ಯೋಗೇಶ್ವರ್ ಬೇರೆ ದಾರಿಯಲ್ಲಿ ಹೊರಟು ಹೋದರು.
ಇದನ್ನೂ ಓದಿ:ಮುರುಗೇಶ್ ನಿರಾಣಿ ಬಳಿ 500 ಸಿಡಿಗಳಿವೆ, ಸಿಎಂ ಆದರೆ 50 ಲಕ್ಷ ಆಗಬಹುದು: ಆಲಂ ಪಾಷ ಆರೋಪ
ಮಾತನಾಡುತ್ತಿದ್ದ ಸಚಿವ ಅಶೋಕ್ ರನ್ನು ಬಿಟ್ಟು ಯೋಗೇಶ್ವರ್ ಬೇರೆ ಮಾರ್ಗದಲ್ಲಿ ತೆರಳಿದರು. ಕೆಲ ದಿನಗಳಿಂದ ಮುಖ್ಯಮಂತ್ರಿಗಳ ವಿರೋಧಿ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿರುವ ಸಚಿವ ಯೋಗೇಶ್ವರ್ ಬಹಿರಂಗ ಹೇಳಿಕೆ ನೀಡುತ್ತಿದ್ದರು. ಇದೀಗ ಪ್ರವಾಸೋದ್ಯಮ ಸಚಿವರ ಈ ನಡೆ ಅಸಮಾಧಾನದ ಬೆಂಕಿಯ ಬಗ್ಗೆ ಮತ್ತೆ ಜಗಜ್ಜಾಹೀರು ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದಾವಣಗೆರೆ: ಮಕ್ಕಳಿಬ್ಬರಿಗೆ ಟಿಕ್ಸೋಟೇಪ್ ಸುತ್ತಿ ಕೊಲೆಗೈದ ತಂದೆ!; ಬಂಧನ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

expose!;ಬಸ್ಸಿನಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿದ ಕಾಮುಕನ ಬಂಧನ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

ಪಣಜಿ: ಮುಂದಿನ ನಾಲ್ಕು ದಿನ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ ಎಚ್ಚರಿಕೆ