ದಾವಣಗೆರೆ: ಬ್ಯಾಂಕ್ ಸಾಲಕ್ಕೆ ಸೆಕ್ಸ್ ಫೇವರ್; ಮ್ಯಾನೇಜರ್ಗೆ ಥಳಿತ
Team Udayavani, Oct 16, 2018, 4:23 PM IST
ದಾವಣಗೆರೆ : ಬ್ಯಾಂಕ್ ಸಾಲ ಮಂಜೂರು ಮಾಡುವುದಕ್ಕೆ ಪ್ರತಿಯಾಗಿ ಸೆಕ್ಸ್ ಫೇವರ್ ಕೇಳಿದ ಡಿಎಚ್ಎಫ್ಎಲ್ ಬ್ಯಾಂಕಿನ ದಾವಣಗೆರೆ ಶಾಖೆಯ ಮ್ಯಾನೇಜರ್ ನನ್ನು ಮಹಿಳೆಯೊಬ್ಬಳು ಚಪ್ಪಲಿ ಮತ್ತು ಕೋಲಿನಿಂದ ಹೊಡೆದುದಲ್ಲದೆ ಹಲವು ಬಾರಿ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
ಬ್ಯಾಂಕ್ ಸಾಲ ಮಂಜೂರು ಮಾಡಲು ಸೆಕ್ಸ್ ಫೇವರ್ ಕೇಳಿದ ಬ್ಯಾಂಕ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಸೆಕ್ಸ್ ಫೇವರ್ ಕೇಳಿದ್ದಕ್ಕೆ ಕೋಪೋದ್ರಿಕ್ತಳಾದ ಮಹಿಳೆಯು ಆತನನ್ನು ಹಿಗ್ಗಾ ಮುಗ್ಗಾ ಹೊಡೆದು ಹಲ್ಲೆ ಮಾಡಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲ ವೈರಲ್ ಆಗಿದೆ.
ಈ ಘಟನೆ ನಡೆದದ್ದು ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ. ಬ್ಯಾಂಕ್ ಸಾಲ ಪಡೆಯಲು ತನ್ನ ಮನೆಗೆ ಬರುವಂತೆ ಮ್ಯಾನೇಜರನು ಮಹಿಳೆಯನ್ನು ಕೇಳಿದ್ದ ಎನ್ನಲಾಗಿದೆ. ಆಕೆ ಅಲ್ಲಿಗೆ ಹೋಗಿದ್ದಾಗ ಬ್ಯಾಂಕ್ ಮ್ಯಾನೇಜರ್ ಆಕೆಯಿಂದ ಸೆಕ್ಸ್ ಫೇವರ್ ಕೇಳಿದ. ನಖಶಿಖಾಂತ ಸಿಟ್ಟಿಗೆದ್ದ ಆಕೆ ಮ್ಯಾನೇಜರನನ್ನು ಆತನ ಮನೆಯಿಂದ ಹೊರಗೆಳೆದು ಹಿಗ್ಗಾಮುಗ್ಗಾ ಹೊಡೆದು ಕಪಾಳಮೋಕ್ಷ ಮಾಡಿದಳು.
ಬಳಿಕ ಅ ಮಹಿಳೆಯೇ ಆತನನ್ನು ಪೊಲೀಸರಿಗೆ ಒಪ್ಪಿಸಿದಳು. ಮಹಿಳೆ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ