ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರು
Team Udayavani, May 28, 2022, 11:58 PM IST
ಬೆಂಗಳೂರು: ಇತಿಹಾಸ ಇಂದು ಇತಿಹಾಸಕಾರರಿಂದ ಕೈ ತಪ್ಪಿ ಹೋಗುತ್ತಿರುವುದೇ ವರ್ತಮಾನದ ಬಹುದೊಡ್ಡ ಸವಾಲು ಆಗಿದೆ ಎಂದು ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
“ಇತಿಹಾಸ ದರ್ಪಣ’ ಪ್ರಕಾಶನ ಹಾಗೂ ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ವತಿಯಿಂದ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಇತಿಹಾಸ ಮತ್ತು ಸಮಕಾಲಿನ ಸವಾಲುಗಳು’- ವಿಚಾರಗೋಷ್ಠಿ ಮತ್ತು “ಬೆಂಗಳೂರು ಪರಂಪರೆ’ ಪುಸ್ತಕದ ದ್ವಿತೀಯ ಮುದ್ರಣ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ಇಂದು ಇತಿಹಾಸಕಾರರಿಂದ ಕೈ ತಪ್ಪಿ ಹೋಗುತ್ತಿದೆ. ಇತಿಹಾಸದ ಕುರಿತು ಇಂದು ಕಾಣಿಸುವ ಮತ್ತು ಕೇಳಿಸುವ ಚರ್ಚೆಗಳು ಸಭ್ಯತೆಯ ಎಲ್ಲೆ ಮೀರುತ್ತಿವೆ.
ಅಸಭ್ಯತೆಯ ಅಬ್ಬರ ಯಾವತ್ತೂ ಅಪಾಯಕಾರಿ. ಇತಿಹಾಸದ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇತಿಹಾಸದ ಬಗ್ಗೆ ಮಾತನಾಡದಂತೆ ಇ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಪಡಬೇಕಾಗಿಲ್ಲ. ಹೀಗೆ ಆಗಬಾರದು ಎಂದರೆ ಇತಿಹಾಸಕಾರರು ಹೆಚ್ಚೆಚ್ಚು ಮಾತನಾಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಂ.ಸಿ ಸುಧಾಕರ್, ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕೆ.ಹೆಚ್ ಮುನಿಯಪ್ಪ ತೀವ್ರ ಅಸಮಾಧಾನ
ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್
ಉದಯಪುರ ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು: ಸಿಎಂ ಬೊಮ್ಮಾಯಿ
ರಾಷ್ಟ್ರೀಯ ಅಂಕಿಅಂಶ ದಿನ: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!