ದತ್ತನ ಕ್ಷೇತ್ರದಲ್ಲಿ 20 ರೂ.ಗೆ ಪುಣ್ಯಸ್ನಾನ!

Team Udayavani, May 20, 2019, 3:06 AM IST

ಅಫಜಲಪುರ: ಪ್ರಸಿದ್ಧ ಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ಸನ್ನಿ ಧಿಗೆ ಬಂದ ಭಕ್ತರು ಭೀಮಾ ನದಿ ಖಾಲಿಯಾಗಿರುವುದನ್ನು ಕಂಡು 1972ರ ಬರಗಾಲ ನೆನಪಿಸಿಕೊಳ್ಳುತ್ತಿದ್ದಾರೆ.

ಭೀಕರ ಬರಕ್ಕೆ ಭೀಮಾ ಹಾಗೂ ಅಮರ್ಜಾ ನದಿಗಳು ಬತ್ತಿ ಹೋಗಿವೆ. ಇಲ್ಲಿಗೆ ಬರುವ ಭಕ್ತರಿಗೆ ನದಿಯಲ್ಲಿ 20 ರೂ.ಗೆ ಒಂದು ಬಕೆಟ್‌ನಂತೆ ನೀರು ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಕೇರಳ ರಾಜ್ಯಗಳಿಂದ ಬರುವ ಭಕ್ತರು 20 ರೂ.ಗೆ ಬಕೆಟ್‌ ನೀರು ಪಡೆದು ನದಿಯಲ್ಲಿರುವ ಕಲ್ಲು ಬಂಡೆಗಳ ಪಕ್ಕದಲ್ಲಿ ಕುಳಿತು ಪುಣ್ಯಸ್ನಾನ ಮಾಡುವಂತಾಗಿದೆ.

ನದಿಯಲ್ಲಿ ನೀರು ಮಾರುವವರ ವ್ಯಾಪಾರ ಬಲು ಜೋರಾಗಿ ನಡೆದಿದೆ. ಭೀಮಾ, ಅಮರ್ಜಾ ನದಿ ಖಾಲಿಯಾಗಿದ್ದರಿಂದ ಗಾಣಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ನದಿಯಲ್ಲಿ ಎಷ್ಟು ಆಳಕ್ಕೆ ಅಗೆದರೂ ನೀರು ಬರುತ್ತಿಲ್ಲ. ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ.

ಹೀಗಾಗಿ, ಕುಡಿಯುವ ನೀರಿಗಾಗಿ ದನ ಕರುಗಳು ನದಿಯಲ್ಲಿ ಸುಡು ಬಿಸಿಲಲ್ಲಿ ತಿರುಗುತ್ತಿವೆ. ನದಿಗೆ ಮರು ಜೀವ ಬರಬೇಕಾದರೆ ರಾಜ್ಯ ಸರ್ಕಾರ ಕೃಷ್ಣಾ ಅಥವಾ ಉಜನಿ ಜಲಾಶಯಗಳಿಂದ ನೀರು ತರುವ ಕೆಲಸ ಮಾಡಬೇಕು. ದತ್ತನ ದರ್ಶನಕ್ಕೆ ಬಂದಿದ್ದ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ.

ಪರಿಶೀಲಿಸಿ ಕ್ರಮ: ನದಿಯಲ್ಲಿ ನೀರು ಮಾರುತ್ತಿರುವ ವಿಷಯ ಗ್ರಾಪಂಗೆ, ಇಲ್ಲವೇ ದೇವಸ್ಥನಾದ ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲ. ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

ನೀರು ಮಾರಾಟ ಮಾಡುತ್ತಿರುವ ವ್ಯಕ್ತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೇವಲ ಗಾಣಗಾಪುರ ಗ್ರಾಪಂ ಅಧ್ಯಕ್ಷ ಮಹೇಶ ಗುತ್ತೇದಾರ, ದೇವಲಗಾಣಗಾಪುರ ಪಿಡಿಒ ಶಂಕರ ದ್ಯಾಮಣ್ಣವರ, ದತ್ತ ದೇವಸ್ಥಾನ ಗಾಣಗಾಪುರ ದೇವಸ್ಥಾನದ ಮುಖ್ಯಾಧಿ ಕಾರಿ ಕೆ.ಜಿ.ಬಿರಾದಾರ ತಿಳಿಸಿದ್ದಾರೆ.

* ಮಲ್ಲಿಕಾರ್ಜುನ ಹಿರೇಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಉಡುಪಿಯಲ್ಲಿ ವಿದ್ಯಾರ್ಥಿಗಳಿಗಾಗಿ...

  • ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿಧಾನಸಭೆ ಸದಸ್ಯತ್ವ...

  • ಬೆಂಗಳೂರು: ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ...

  • ಬೆಂಗಳೂರು: ಕನ್ನಡ ಸಿನಿಮಾರಂಗದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಚಿತ್ರಗಳು ಮೂಡಿ ಬರಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು....

  • ಕೊಪ್ಪಳ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಲಂ ಬೋರ್ಡ್‌ನ್ನು ರಾಜೀವ್‌ ಗಾಂಧಿ  ವಸತಿ ನಿಗಮದಲ್ಲಿ ವಿಲೀನ ಮಾಡುವ ಚಿಂತನೆ ನಡೆದಿದೆ. ಅದಕ್ಕೆ 2 ವರ್ಷ...

ಹೊಸ ಸೇರ್ಪಡೆ