ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ


Team Udayavani, Oct 29, 2020, 6:15 AM IST

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸಾಂದರ್ಭಿಕ ಚಿತ್ರ

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅತ್ಯಂತ ವಿಶೇಷ. ಪ್ರಶಸ್ತಿ ಪಡೆದಿದ್ದಕ್ಕಿಂತ, ಪ್ರಶಸ್ತಿಯೇ ತಾನಾಗಿ ಸಾಧಕನನ್ನು ಹುಡುಕಿಕೊಂಡು ಹೋಗಿದೆ! ಯಾವುದೇ ಪ್ರಚಾರ, ಜನಪ್ರಿಯತೆಯ ಭೂತಕನ್ನಡಿಗೂ ಬೀಳದಂಥ, ಎಲೆಮರೆ ಕಾಯಿಗಳು ಸರಕಾರದ ಕಣ್ಣಿಗೆ ಬಿದ್ದಿವೆ. ಯಾವ ಫ‌ಲವನ್ನೂ ಎದುರು ನೋಡದೆ, ಕಾಯಕದಲ್ಲೇ ಜೀವಿತ ಸವೆಸುತ್ತಿರುವ, ನಾಡಸೇವೆಗೆ ಕನಸುಗಳನ್ನು ಮುಡಿಪಾಗಿಟ್ಟ ಕರಾವಳಿ ಯಸಾಧಕರೂ ಇಲ್ಲಿದ್ದಾರೆ.

57 ವರ್ಷಗಳ ಯಕ್ಷಗಾನ ಸೇವೆ
ಕುಂದಾಪುರ: ಪ್ರಸಿದ್ಧ ಸ್ತ್ರೀವೇಷಧಾರಿ, ಪ್ರಸಂಗಕರ್ತ, ತೆಂಕು ಬಡಗು ಉಭಯತಿಟ್ಟಿನ ಕಲಾವಿದ ಎಂ.ಕೆ. ರಮೇಶ್‌ ಆಚಾರ್ಯ ಅವರು 1949ರ ಅ. 30ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. 4ನೇ ವಯಸ್ಸಿನಲ್ಲಿ ಶಾಲೆಗೆ ಸೇರಿ 4ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದರು. ಅಪ್ಪ, ದೊಡ್ಡಪ್ಪ ಆರಂಭಿಸಿದ ಜಗದಂಬಾ ಯಕ್ಷಗಾನ ಮೇಳದಲ್ಲಿ ಕೋಡಂಗಿ ವೇಷಧಾರಿಯಾಗಿ ಪದಾರ್ಪಣೆ ಮಾಡಿದರು. 12ನೇ ವಯಸ್ಸಿಗೆ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾಗಿ ಪರಶುರಾಮ, ಪ್ರಹ್ಲಾದ ಮೊದಲಾದ ವೇಷಗಳನ್ನು ಧರಿಸಿ ಯಕ್ಷ ತಿರುಗಾಟ ಆರಂಭಿಸಿದರು.

ಆರಂಭದ ನಾಟ್ಯಗಾರಿಕೆ ಹಳ್ಳಾಡಿ ಮಂಜಯ್ಯ ಶೆಟ್ಟರಿಂದ ಕಲಿತು ಅನಂತರ ಬಡಗಿನಲ್ಲಿ ಗುರು ವೀರಭದ್ರ ನಾಯ್ಕ, ತೆಂಕಿನಲ್ಲಿ ಗುರು ಕುರಿಯ ವಿಠಲ ಶಾಸ್ತ್ರಿ ಅವರ ಶಿಷ್ಯರಾಗಿ ಯಕ್ಷಗಾನದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ವಾಕ³ಟುತ್ವ ಸಿದ್ಧಿಸಿಕೊಂಡು ಶೇಣಿ, ತೆಕ್ಕಟ್ಟೆ, ಶಿರಿಯಾರ ಮಂಜು ನಾಯ್ಕ, ಹಾರಾಡಿ ರಾಮ ಗಾಣಿಗ ಮೊದಲಾದ ಪ್ರಬುದ್ಧ ಹಿರಿಯ ಕಲಾವಿದರ ಒಡನಾಟದ ಮೂಲಕ ಯಕ್ಷಗಾನದಲ್ಲಿ ಭದ್ರ ನೆಲೆಯೂರಿದರು.

ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್‌, ಸಾಲಿಗ್ರಾಮ, ಪೆರ್ಡೂರು, ನೀಲಾವರ, ಗೋಳಿಗರಡಿ, ಮಂಗಳಾದೇವಿ, ಸುಂಕದಕಟ್ಟೆ, ಹನುಮಗಿರಿ ಮೇಳದಲ್ಲಿ ಒಟ್ಟು 57 ವರ್ಷಗಳ ತಿರುಗಾಟ ನಡೆಸಿದ್ದಾರೆ. ಸುದೀರ್ಘ‌ 24 ವರ್ಷಗಳ ತಿರುಗಾಟ ಸುರತ್ಕಲ್‌ ಮೇಳದಲ್ಲಿ. ಈವರೆಗೆ ಹನುಮಗಿರಿ ಮೇಳದಲ್ಲಿದ್ದು ಮುಂದಿನ ವರ್ಷದ ತಿರುಗಾಟದ ಕುರಿತು ಇನ್ನೂ ಮೇಳ ನಿಶ್ಚಯವಾಗಿಲ್ಲ. ನೂರಕ್ಕೂ ಅಧಿಕ ಪ್ರಸಂಗಗಳಿಗೆ ಪದ್ಯರಚನೆ ಮಾಡಿದ್ದು, ಕ್ಷೇತ್ರ ಮಹಾತೆ¾, ಪೌರಾಣಿಕ, ಕಾಲ್ಪನಿಕ ಮೊದಲಾದ 20ರಷ್ಟು ಪ್ರಸಂಗ ಬರೆದಿದ್ದಾರೆ.
ಕಲಾರಂಗ ಪ್ರಶಸ್ತಿ, ಜಿ. ಶಂಕರ್‌ ಪ್ರಶಸ್ತಿ, ಶೇಣಿ ಜನ್ಮಶತಾಬ್ದ, ಶೇಣಿ ಸಂಸ್ಮರಣ ಪ್ರಶಸ್ತಿ, ಕುರಿಯ ಪ್ರತಿಷ್ಠಾನ, ಪಾತಾಳ, ಜನಪದಶ್ರೀ ಮೊದಲಾದ 35ಕ್ಕೂ ಅಧಿಕ ಪ್ರಶಸ್ತಿಗಳು ಸಂದಿವೆ.

ಸಂತೋಷವಾಗಿದೆ
ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡದ್ದಕ್ಕೆ ಗುರುತಿಸಿ ಪ್ರಶಸ್ತಿ ಬಂದುದಕ್ಕೆ ಸಂತೋಷವಾಗಿದೆ. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಹಿರಿಯ ಕಲಾವಿದರ ಒಡನಾಟವೇ ನನಗೆ ವಿದ್ಯೆ ರೂಪದಲ್ಲಿ ಒಲಿದುದು.
 - ಎಂ.ಕೆ. ರಮೇಶ್‌ ಆಚಾರ್ಯ, ಕುಂದಾಪುರ

ಧರ್ಮೋತ್ಥಾನ ಟ್ರಸ್ಟ್‌
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ಗೆ 2020ನೇ ಸಾಲಿನ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನೆ ಸಂದರ್ಭ ಜನಮಂಗಲ ಕಾರ್ಯ ಗಳಲ್ಲೊಂದಾದ ಪುರಾತನ ದೇವಾಲಯಗಳಿಗೆ ಕಾಯಕಲ್ಪ ನೀಡುವ ಯೋಜ ನೆಯನ್ನು ಸಂಕಲ್ಪಿಸಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಟ್ರಸ್ಟನ್ನು ಪ್ರಾರಂಭಿಸಿದರು.

ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾ ತನ ಸ್ಮಾರಕಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯ ಇದರ ಹಿಂದಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 253 ಸ್ಮಾರಕಗಳು ಈ ಟ್ರಸ್ಟಿನಿಂದ ಜೀರ್ಣೋದ್ಧಾರವಾಗಿವೆ.
ಟ್ರಸ್ಟ್‌ ಸಂರಕ್ಷಣಾ ಕಾರ್ಯದ ಗುಣಮಟ್ಟ ಮತ್ತು ಪ್ರಗತಿಯನ್ನು ಗಮನಿಸಿದ ಕರ್ನಾಟಕ ಸರಕಾರವು ಈ ಟ್ರಸ್ಟನ್ನು ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸರಕಾರದ ಸಹಭಾಗಿತ್ವದ ಸಂಸ್ಥೆಯೆಂದು ಗುರುತಿಸಿ, ವಾರ್ಷಿಕ ಕ್ರಿಯಾಯೋಜನೆಯಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡುತ್ತಾ ಬಂದಿದೆ.

ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಹಷೇìಂದ್ರ ಕುಮಾರ್‌ ಈ ಟ್ರಸ್ಟಿನ ವಿಶ್ವಸ್ತ ಮಂಡಳಿಯಲ್ಲಿದ್ದು, ಈ ಕಾರ್ಯಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಡಿ. ಸುರೇಂದ್ರ ಕುಮಾರ್‌ ಅವರು ಸಲಹಾ ಸಮಿತಿ ಯಲ್ಲಿದ್ದು, ಬೆಂಗಳೂರಿನಲ್ಲಿರುವ ಅವರ ಕಚೇರಿಯಲ್ಲಿ ಇದರ ಆಡಳಿತ ವನ್ನು ನಿರ್ವಹಿಸುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯವು ಸಂಪ್ರದಾ ಯಬದ್ಧವಾಗಿ ನೆರವೇರಲು ಸಲಹಾ ಸಮಿತಿಯನ್ನು ಹೊಂದಿದೆ. ಸಮಿತಿ ಯಲ್ಲಿ ಪುರಾತತ್ವ ಶಾಸ್ತ್ರ, ಶಿಲ್ಪಶಾಸ್ತ್ರ, ಕಲೆ, ಕಾನೂನು ಇತಿಹಾಸ, ಧರ್ಮ ಕ್ಷೇತ್ರಗಳಲ್ಲಿ ಅಪಾರ ಜ್ಞಾನ, ಅನುಭವ ಹೊಂದಿರುವವರಿದ್ದಾರೆ.
ಹಿಂದಿನ ನಿರ್ದೇಶಕರಾದ ಎ.ಎಚ್‌. ಹರಿರಾಮ ಶೆಟ್ಟಿ ಅವರು ಈ ಟ್ರಸ್ಟಿಗೆ ಉತ್ತಮ ಸೇವೆ ನೀಡಿದ್ದಾರೆ.

ಅನಿವಾಸಿ ಭಾರತೀಯ ಉದ್ಯಮಿಗೆ ಪ್ರಶಸ್ತಿಯ ಗರಿ
ಬೈಂದೂರು: ಅನಿವಾಸಿ ಭಾರತೀಯ ಉದ್ಯಮಿ, ಬೈಂದೂರು ತಾ|ನ ಶಿರೂರು ಗ್ರಾಮದ ಮಣೆಗಾರ್‌ ಮೀರಾನ್‌ ಸಾಹೇಬ್‌ ಅವರಿಗೆ ಸಮಾಜ ಸೇವೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ. ಬೆಂಗಳೂರಿನ ಸ್ಟೀಲ್‌ ಕಂಪೆನಿಯಲ್ಲಿ 2 ವರ್ಷ ಉದ್ಯೋಗಿಯಾಗಿ, 1974ರಲ್ಲಿ ದುಬಾೖಗೆ ತೆರಳಿ ಸ್ವಪ್ರಯತ್ನದಿಂದ ಬೆಳೆದಿದ್ದಾರೆ. 40 ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಹೊರನಾಡಿನಲ್ಲಿ ಪ್ರತಿ ವರ್ಷ ಕನ್ನಡಿಗರ ಸಂಘಟನೆಗೆ ಮತ್ತು ಅಭಿವೃದ್ಧಿಗಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ಅನುಪಮ ಕೊಡುಗೆ ನೀಡಿದ್ದಾರೆ.

ಜನಪರ ಕಾಳಜಿ
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಗೌರವಾಧ್ಯಕ್ಷರಾಗಿದ್ದು, ಶಿರೂರು ಅಸೋಸಿಯೇಶನ್‌ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಬೆಂಗಳೂರಿನಲ್ಲಿ ದುಶ್ಚಟ ಪೀಡಿತ ನೂರಾರು ಯುವಕರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಊರಲ್ಲಿ ಕಸ ಸಾಗಿಸುವ ವಾಹನ, ಸರಕಾರಿ ಆಸ್ಪತ್ರೆ ಕಟ್ಟಡ, ಕಿಯೋಸ್ಕ್ ಯಂತ್ರ, ಆ್ಯಂಬುಲೆನ್ಸ್‌, ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ, 10ಕ್ಕೂ ಅಧಿಕ ಕುಟುಂಬಗಳ ಮನೆ ದುರಸ್ತಿ, ಅನೇಕ ಶಾಲೆಗಳಿಗೆ ನೆರವು ನೀಡಿದ್ದಾರೆ. ಗ್ರೀನ್‌ ವ್ಯಾಲಿ ಆಂಗ್ಲಮಾಧ್ಯಮ ಶಾಲಾಡಳಿತ ಟ್ರಸ್ಟಿಯಾಗಿದ್ದು, ಈ ಬಾರಿ 300ಕ್ಕೂ ಅಧಿಕ ಕುಟುಂಬಗಳಿಗೆ 10 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಕಿಟ್‌, ಸಿಎಂ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಜವಬ್ದಾರಿ ಹೆಚ್ಚಿಸಿದೆ
ಸಮಾಜ ಸೇವೆ ಆತ್ಮ ಸಂತೃಪ್ತಿಗಾಗಿ ಮಾಡುತ್ತಿದ್ದು, ಯಾವುದೇ ಪ್ರಶಸ್ತಿ ಆಸೆಯಿಂದ ಮಾಡಿಲ್ಲ. ಆದರೂ ಕೂಡ ಸರಕಾರ ಗುರುತಿಸಿರುವುದು ಸಂತೋಷ ತಂದಿದೆ ಮತ್ತು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ.
 -ಮಣೆಗಾರ್‌ ಮೀರಾನ್‌ ಸಾಹೇಬ್‌ , ಶಿರೂರು

52 ವರ್ಷಗಳ ಸುದೀರ್ಘ‌ ಸೇವೆಗೆ ಪುರಸ್ಕಾರ
ಕಾರ್ಕಳ: ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಸಂದರ್ಭ ನೀಡಲಾಗುವ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಯು ನ್ಯಾಯಾಂಗ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ ಕಾರ್ಕಳದ ಹಿರಿಯ ವಕೀಲ ದಾನಶಾಲೆಯ ಎಂ.ಕೆ. ವಿಜಯ ಕುಮಾರ್‌ ಅವರಿಗೆ ಒಲಿದಿದೆ.

1944ರಲ್ಲಿ ಜನಿಸಿದ ಅವರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ಮಹಾ ವಿದ್ವಾನ್‌ ದಿ| ಐ.ಎ. ಸುಬ್ಬಯ್ಯ ಮತ್ತು ಲಕ್ಷ್ಮಿಯಮ್ಮ ದಂಪತಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದಿರೆಯ ದಿಗಂಬರ್‌ ಜೈನ್‌ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಶ್ರೀ ಭುವನೇಂದ್ರ ಕಾಲೇಜಿನಲ್ಲಿ, ಪಡೆದ ಬಳಿಕ ಉನ್ನತ ಹಾಗೂ ಕಾನೂನು ಶಿಕ್ಷಣವನ್ನು ಮೈಸೂರು, ಬೆಂಗಳೂರಿನಲ್ಲಿ ಪಡೆದುಕೊಂಡಿರುತ್ತಾರೆ. ಕಳೆದ 52 ವರ್ಷಗಳ ಸುದೀರ್ಘ‌ ಸೇವೆಯನ್ನು ನೀಡುತ್ತ ಬಂದಿರುವರು. ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿ ಅಬ್ದುಲ್‌ ನಜೀರ್‌ ಸಹಿತ ವಕೀಲ ಅವರ 55 ಮಂದಿ ಶಿಷ್ಯರು ವಕೀಲರು ದೇಶದ ವಿವಿದೆಢೆ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವರು. ಕಾರ್ಕಳ ಬಾರ್‌ ಅಸೋಸಿಯೇಶನ್‌ ಮತ್ತು ದ.ಕ. ಜಿಲ್ಲಾ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ರಾಜ್ಯ ಸಮ್ಮೇಳನ, ವಿಚಾರಸಂಕಿರಣ, ಕಾರ್ಯಾಗಾರ ಹಾಗೂ ಕಾನೂನು ಸಂಬಂಧಿತ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.

ಹಾರೈಕೆಗಳು ಪ್ರಶಸ್ತಿಗೂ ಮಿಗಿಲು
ಪ್ರಶಸ್ತಿ ಲಭಿಸಿರುವುದಕ್ಕೆ ಸಂತೋಷವಿದೆ. ನನಗಿಂತ ಹೆಚ್ಚಿನ ಸೇವೆಯನ್ನು ನನ್ನ ಸೇವೆಯನ್ನು ಪಡೆದವರು, ಶಿಷ್ಯ ವರ್ಗ, ಹಿತೈಷಿಗಳು ಪಡುತ್ತಿದ್ದಾರೆ. ಅವರ ಹಾರೈಕೆಗಳು ನನಗೆ ಪ್ರಶಸ್ತಿಗೂ ಮಿಗಿಲಾದುದು.
 -ಎಂ.ಕೆ. ವಿಜಯಕುಮಾರ್‌

ಭವಾನಿ ಫೌಂಡೇಶನ್‌ ಟ್ರಸ್ಟ್‌
ವಿಟ್ಲ: ಬಂಟ್ವಾಳ ತಾಲೂಕು ಕೇಪು ಗ್ರಾಮದ ಚೆಲ್ಲಡ್ಕ ನಿವಾಸಿ ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಅವರು ಮುಂಬಯಿಯ ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ನ ಮಾಲಕ. ಚೆಲ್ಲಡ್ಕಗುತ್ತು ದೇರಣ್ಣ ಶೆಟ್ಟಿ ಹಾಗೂ ಭವಾನಿ ದೇರಣ್ಣ ಶೆಟ್ಟಿ ಅವರ ಪುತ್ರರಾದ ಅವರು ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈಯಲ್ಲಿ ಮುಗಿಸಿ ಮಾಧ್ಯಮಿಕ ಶಿಕ್ಷಣವನ್ನು ಅಡ್ಯನಡ್ಕದಲ್ಲಿ ನಡೆಸಿದ್ದಾರೆ. ಮುಂಬಯಿ ವಿ.ವಿ.ದಿಂದ ವಾಣಿಜ್ಯ ಪದವಿ ಪಡೆದಿದ್ದಾರೆ.

1978ರಲ್ಲಿ ಮೆ| ಮೆಟ್‌ಕಾಪ್‌ ಆ್ಯಂಡ್‌ ಹಾರ್ಡ್‌ಕಿನ್ಸನ್‌ ಶಿಪ್ಪಿಂಗ್‌ ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದು, 12 ವರ್ಷಗಳ ಕಾಲ ಸೇವೆ, ಬಳಿಕ ಹಾರ್ಡ್‌ಕೋರ್‌ ಶಿಪ್ಪಿಂಗ್‌ ಕಂಪೆನಿಯ ಮೆ| ಟ್ರಾನ್ಸ್‌ ವರ್ಲ್ಡ್ ಗ್ರೂಪ್‌ ಆಫ್‌ ಕಂಪೆನಿಯಲ್ಲಿ 16 ವರ್ಷಗಳ ಕಾಲ ಎಕ್ಸಿಕೂಟಿವ್‌ ಜನರಲ್‌ ಮೆನೇಜರ್‌ ಸೇವೆ ಸಲ್ಲಿಸಿದ್ದರು. 2007ರಲ್ಲಿ ತಾಯಿ ಭವಾನಿ ದೇರಣ್ಣ ಶೆಟ್ಟಿ ಹೆಸರಿನಲ್ಲಿ ಶಿಪ್ಪಿಂಗ್‌ ಕಂಪೆನಿ ಪ್ರಾರಂಭಿಸಿದರು. ಸದ್ಯ ವಾಯು ಹಾಗೂ ಜಲ ಪ್ರದೇಶದ ಮೂಲಕ ಭಾರತದ 18 ವಲಯಗಳಲ್ಲಿ ಹಾಗೂ 4 ವಿದೇಶದಲ್ಲಿ ಕಂಪನಿ ಕಚೇರಿಯನ್ನು ವಿಸ್ತರಿಸಿದೆ.

ಭವಾನಿ ಫೌಂಡೇಶನ್‌ ಟ್ರಸ್ಟ್‌ ಸ್ಥಾಪಿಸಿ ಈ ಮೂಲಕ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಆದಿವಾಸಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿ ದ್ದಾರೆ. ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಅತಿಬಡ ಯುವತಿಯರಿಗೆ ವಿವಾಹದ ಖರ್ಚು, ಮಂಗಳ ಸೂತ್ರ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಉಳ್ಳಾಲ್ತಿ ಪಂಚಲಿಂಗೇಶ್ವರನ ಅನುಗ್ರಹ
ನನ್ನನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿರುವುದು ಬಹಳ ಸಂತಸವಾಗಿದೆ. ಜನ್ಮಭೂಮಿಯ ಈ ಪ್ರೀತಿಯನ್ನು ನೆನಪಲ್ಲಿಟ್ಟುಕೊಂಡು ಸೇವಾ ಕೈಂಕರ್ಯವನ್ನು ಮುಂದುವರಿ ಸುತ್ತೇನೆ. ಈ ಪ್ರಶಸ್ತಿ ವಿಟ್ಲ ಉಳ್ಳಾಲ್ತಿ ಪಂಚಲಿಂಗೇಶ್ವರನ ಅನುಗ್ರಹ ದಿಂದ ಲಭ್ಯವಾಗಿದೆ. ಇದು ವಿಟ್ಲ ಸೀಮೆಗೆ ಸಂದ ಗೌರವ.
 -ಕುಸುಮೋದರ ಡಿ. ಶೆಟ್ಟಿ , ಚೆಲ್ಲಡ್ಕ

ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ
ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ವಿದ್ವಾನ್‌ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಉಪನಗರದ ಮುಲುಂಡ್‌ನ‌ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ.

ಮಾಧ್ವ ಸಿದ್ಧಾಂತದ ಪ್ರಚಾರಕ್ಕಾಗಿ 1937ರಲ್ಲಿ ಮುಲುಂಡ್‌ನ‌ಲ್ಲಿ ಸ್ಥಾಪಗೊಂಡ ಸತ್ಯಧ್ಯಾನ ವಿದ್ಯಾಪೀಠ ತನ್ನ ಗುರುಕುಲ ಪದ್ಧತಿಯ ಪ್ರಕಾರ ನೂರಾರು ವಿದ್ಯಾರ್ಥಿಗಳಿಗೆ ವೇದ, ಶಾಸ್ತ್ರ, ಜೋತಿಷ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಗಳ ಸಿದ್ಧಾಂತಗಳನ್ನು ಕಲಿಸುವ ಶಿಕ್ಷಣ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ವಿದ್ಯಾಸಿಂಹ ಆಚಾರ್ಯ ಮಾಹುಲಿ ಅವರು ಮುಲುಂಡ್‌ ಶಾಖೆಯ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1960ರಲ್ಲಿ ಜನಿಸಿದ ವಿದ್ಯಾಸಿಂಹಾಚಾರ್ಯರು ಗುರುಗಳಾದ ವೇದಮೂರ್ತಿ ಪಂಡಿತ್‌ ರಾಮಾಚಾರ್ಯ ನಾಗರಹಳ್ಳಿ ಅವರಿಂದ ವೇದಶಾಸ್ತ್ರಗಳ ಅಧ್ಯಯನ ಮಾಡಿ ತಮ್ಮ 19ನೇ ವಯಸ್ಸಿನಲ್ಲಿಯೇ ಸುಧಾಮಂಗಳ ಮಾಡಿಕೊಂಡು ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಚತುರ್‌ಶಾಸ್ತ್ರ ಪರೀಕ್ಷೆ ನೀಡಿ ಶ್ರೀಗಳ ಪ್ರಶಂಸೆಗೆ ಪಾತ್ರರಾಗಿದ್ದರು.

ಮಾಹುಲಿ ಮನೆತನದವರಾದ ವೇದಮೂರ್ತಿ ಪಂಡಿತ್‌ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು, 1984 ರಿಂದ ಮಾಟುಂಗಾದ ವಾಣಿವಿಹಾರ ಹಾಗೂ ಮುಲುಂಡ್‌ನ‌ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ನೂರಾರು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೂ ವಿಶೇಷ ಯೋಗದಾನ ನೀಡಿರುವ ಅವರು ಶ್ರೀ ವಿಷ್ಣುತೀರ್ಥರ ಅಧ್ಯಾತ್ಮ ರಸರಂಜನಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಧಾ ವಿಶಾರದ, ವಿಧ್ಯಮಾನ ಪ್ರಶಸ್ತಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರಿಂದ ಶ್ರೀ ಪೂರ್ಣಪ್ರಜ್ಞ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಗೌರವ-ಸಮ್ಮಾನಗಳನ್ನು ಪಡೆದಿದ್ದಾರೆ.

ಸಮಾಜ ಸೇವೆ ಮುಂದುವರಿಯಲಿದೆ
ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿರುವ ವಿಷಯ ಕೇಳಿ ತುಂಬಾ ಸಂತೋಷವಾಯಿತು. ಇದು ನನಗೆ ಸಿಕ್ಕಿದ ಗೌರವವಲ್ಲ; ಸನಾತನ ಸಂಸ್ಕೃತಿಗೆ, ಭಾರತೀಯ ಧರ್ಮಕ್ಕೆ ಸಿಕ್ಕ ಗೌರವವಾಗಿದೆ. ನನ್ನ ಶಿಕ್ಷಣ ಸೇವೆ, ಸಾಮಾಜಿಕ ಸೇವೆ ಇದೇ ರೀತಿ ಮುಂದುವರಿಯಲಿದೆ.
-ವಿದ್ವಾನ್‌ ವಿದ್ಯಾಸಿಂಹಾಚಾರ್ಯ ಮಾಹುಲಿ

ಅಂಬರೀಷ್‌ ಅವರ ಅತಿಹೆಚ್ಚು ಸಿನೆಮಾ ನಿರ್ದೇಶಕ
ಮಡಿಕೇರಿ: ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕೊಡಗಿನ ಆಪಾಡಂಡ ತಿಮ್ಮಯ್ಯ ರಘು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿರಿಯ ನಿರ್ದೇಶಕ ಎ.ಟಿ. ರಘು ಅವರು ನಟರಾಗಿ ಮತ್ತು ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವ ಅವರು ಉತ್ಸಾಹಿ ಕಲಾರಾಧಕರಾಗಿ 40ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಅತಿಹೆಚ್ಚು ಸಿನೆಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಹೆಗ್ಗಳಿಕೆ ರಘು ಅವರದ್ದು.

ಚಂದನವಾಹಿನಲ್ಲಿ ಪ್ರಸಾರವಾದ ಗೆಜ್ಜೆತಂಡ್‌, ಐನ್ಮನೆ, ನಂಗ ಕೊಡವ ಸೇರಿದಂತೆ ಕೊಡವ ಭಾಷೆಯ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿರುವ ರಘು ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

56 ವರ್ಷಗಳ ಸಾಹಿತ್ಯ ಕೃಷಿ
ಪುಂಜಾಲಕಟ್ಟೆ,: ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ವಲೇರಿಯನ್‌ ಡಿ’ಸೋಜಾ (ವಲ್ಲಿ ವಗ್ಗ) ಅವರಿಗೆ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ವಲೇರಿಯನ್‌ ಅವರು ಮೂಲತಃ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾಗಿದ್ದು, ಕಳೆದ 50 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ.

ತನ್ನ 17ನೇ ವಯಸ್ಸಿನಲ್ಲಿ ಸಣ್ಣ ಕಥೆ ಬರೆಯಲು ಆರಂಭಿಸಿದ ಅವರು 56 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ನೂರಾರು ಕೊಂಕಣಿ ಸಣ್ಣಕಥೆ, ಕವನ, ಲೇಖನ, ಅಂಕಣ ಬರಹ ಗಳು ಪ್ರಕಟವಾಗಿದ್ದು, ಆಯ್ದ ಸಣ್ಣ ಕಥೆಗಳು ಹಿಂದಿ, ತೆಲುಗು, ಇಂಗ್ಲಿಷ್‌ ಭಾಷೆಗೆ ಅನುವಾದಗೊಂಡಿವೆ. ಅವರೇ ಅನುವಾದಿಸಿದ ಅವರ ಕಥೆಗಳು ಹಲವಾರು ಕನ್ನಡದ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಪ್ರಕಟ ವಾಗಿವೆ. ಕಥಾ ಸಂಕಲನ, ಕವನ ಸಂಕಲನಗಳು ಪ್ರಕಟವಾಗಿವೆ. ವಿವಿಧ ಕವಿ ಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯಿj ದುಬಾೖ-2019 ಪ್ರಶಸ್ತಿ, ಕೊಂಕಣಿ ಕುಟಾಮ್‌ ಬಹ್ರೈನ್‌, ಮಂಗಳೂರು ಸಂದೇಶ ಪ್ರತಿಷ್ಠಾನದವರು ಸಾಹಿತ್ಯ ಗೌರವ ಪ್ರಶಸ್ತಿ ನೀಡಿದ್ದಾರೆ. ರಾಜ್ಯ ವಾರ್ತಾ ಇಲಾಖೆ ಇವರ ಬಗ್ಗೆ ಸಾಕ್ಷé ಚಿತ್ರ ತಯಾರಿಸಿದೆ.

ಋಣಿಯಾಗಿದ್ದೇನೆ
ಕಳೆದ 56 ವರ್ಷಗಳಿಂದ ಕೊಂಕಣಿ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಸರಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿರುವ ಬಹಳಷ್ಟು ಸಾಹಿತಿಗಳಲ್ಲಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ
ಋಣಿಯಾಗಿದ್ದೇನೆ.
-ವಲೇರಿಯನ್‌ ಡಿಸೋಜಾ (ವಲ್ಲಿ ವಗ್ಗ)

ನಾಗಸ್ವರ ವಾದಕ ಲಿಂಗಪ್ಪ ಸೇರಿಗಾರ
ಕಟೀಲು: ಲಿಂಗಪ್ಪ ಶೇರಿಗಾರ ಕಟೀಲು ಅವರು ಕಟೀಲು ಶ್ರೀ ದುರ್ಗಾರಪಮೇಶ್ವರೀ ದೇವಸ್ಥಾನದಲ್ಲಿ ಆಸ್ಥಾನ ನಾಗಸ್ವರ ವಾದಕರಾಗಿದ್ದಾರೆ.
40 ವರ್ಷಗಳಿಂದ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಉತ್ಸವ, ನವರಾತ್ರಿ ಮತ್ತಿತರ ಸಂದರ್ಭಗಳಲ್ಲಿ ಮಾತ್ರವಲ್ಲದೆ ಕೊಲ್ಲೂರು ಸುಬ್ರಹ್ಮಣ್ಯ ಧರ್ಮಸ್ಥಳ, ವಿಶಾಖಪಟ್ಟಣದ ಅಂಜನೇಯ ದೇವಸ್ಥಾನ, ತಮಿಳುನಾಡಿನ ಮಧುರೈ ಮತ್ತಿತರ ಕಡೆಗಳಲ್ಲಿ ನಾಗಸ್ವರ ಕಛೇರಿ ನೀಡಿರುತ್ತಾರೆ.
ಪಿಯುಸಿ ವರೆಗೆ ಶಿಕ್ಷಣ ಪಡೆದಿರುವ ಅವರು ನಾಗಸ್ವರ ವಾದಕರಾದ ವಾಸು ಸೇರಿಗಾರ ಹಾಗೂ ಎಂ.ಪಿ.ಆರ್‌. ಆಯ್ನಾ ಸ್ವಾಮೀ ಮಧುರೈ ಹಾಗೂ ಕೊಳಲು ವಾದಕ ಕೃಷ್ಣ ಭಟ್‌ ಅವರಿಂದ ನಾಗಸ್ವರ ಕಲಿತು ಮತ್ತೆ ಕಟೀಲು ದೇವಸ್ಥಾನಲ್ಲಿ ನಾಗಸ್ವರ ವಾದಕರಾಗಿ ಕಾಯಕ ಆರಂಭಿಸಿದರು. 2007ರ ಕಟೀಲಿನ ಬ್ರಹ್ಮಕಲಶೋಶೋತ್ಸವದಲ್ಲಿ ಸಾರ್ವಜನಿಕ ಸಮ್ಮಾನ, ಪಲಿಮಾರು ಸ್ವಾಮಿಗಳಿಂದ ನಾಗಸ್ವರ ವಿಶಾರದ ಪ್ರಶಸ್ತಿ, ಆಕಾಶವಾಣಿಯ ಬಿ ಗ್ರೇಡ್ ‌ ಕಲಾವಿದರಾಗಿದ್ದು ದೂರದರ್ಶನದಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.

ಶ್ರೀ ದುರ್ಗಾಮಾತೆಯ ಆಶೀರ್ವಾದ
ಕಟೀಲಿನ ಶ್ರೀ ದುರ್ಗಾಮಾತೆಯ ಕೃಪಾಕಟಾಕ್ಷದಿಂದ ನಾನು ಈ ಎತ್ತರದ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿನ ಆಸ್ರಣ್ಣ ಬಂಧುಗಳು, ಆಡಳಿತ ಮೊಕ್ತೆಸರರ ಆಶೀರ್ವಾದ ಹಾಗೂ ಸ್ಥಳೀಯ ಸಂಸದರ ಪೋತ್ಸಾಹವೂ ನನ್ನ ಸಾಧನೆಯ ಹಿಂದಿದೆ.
 - ಲಿಂಗಪ್ಪ ಸೇರಿಗಾರ, ನಾಗಸ್ವರವಾದಕ, ಕಟೀಲು

ಹೊಂಗೆ ಎಣ್ಣೆಯ ಬಳಕೆಗೆ ಕಾರಣ
ಉಡುಪಿ: ಕೈಗಾರಿಕಾ ಸಲಹೆಗಳನ್ನು ನೀಡುತ್ತಿರುವ ಜತೆಗೆ ಪರಿಸರ ಪೂರಕವಾದ ಹೊಂಗೆ ಎಣ್ಣೆಯ ಬಳಕೆಯನ್ನು ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಚಾಲ್ತಿಗೆ ತರುವಲ್ಲಿ ಪರಿಶ್ರಮ ಪಟ್ಟ ಪ್ರತಿಷ್ಠಿತ ಸಂಸ್ಥೆ ಬೆಂಗಳೂರು ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ)ದ ನಿವೃತ್ತ ಪ್ರಾಧ್ಯಾಪಕ ಪ್ರೊ| ಉಡುಪಿ ಶ್ರೀನಿವಾಸ್‌ ಅವರು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಉಡುಪಿ ಚಿಟ್ಪಾಡಿ ಬೈಲೂರು ಮೂಲದ ಶ್ರೀನಿವಾಸ್‌ ಅವರು “ಉಡುಪಿ ಶ್ರೀನಿವಾಸ್‌’ ಎಂದೇ ಐಐಎಸ್ಸಿಯಲ್ಲಿ ಪರಿಚಿತರು. 1969ರಲ್ಲಿ ಬಿಟೆಕ್‌, 1971ರಲ್ಲಿ ಎಂಟೆಕ್‌ ಪದವಿಯನ್ನು ಪ್ರತಿಷ್ಠಿತ ಐಐಟಿ ಮದ್ರಾಸ್‌ನಲ್ಲಿ ಪಡೆದರು. 1976ರಲ್ಲಿ ಪಿಎಚ್‌ಡಿಯನ್ನು ಐಐಎಸ್ಸಿಯಲ್ಲಿ ಗಳಿಸಿದರು. 1982ರಿಂದ 2012ರ ವರೆಗೆ ಐಐಎಸ್ಸಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಾಧ್ಯಾಪಕರು, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಸ್ತುತ 73ರ ಹರೆಯದ ಶ್ರೀನಿವಾಸ್‌ ಅವರು ಬೆಂಗಳೂರು ಜಿಆರ್‌ಡಿ ಟಾಟಾ ನಗರದಲ್ಲಿ ನೆಲೆಸಿದ್ದಾರೆ.

ಸುಮಾರು 35 ಪ್ರಬಂಧಗಳು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಸುಮಾರು 50 ಪ್ರಬಂಧಗಳನ್ನು ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿ ದ್ದಾರೆ. ವೈಬ್ರೇಶನ್‌ ಅನಾಲಿಸಿಸ್‌ ಮತ್ತು ಮೆಶಿನ್‌ ಡೈನಾಮಿಕ್ಸ್‌ನಲ್ಲಿ ವಿಶೇಷ ಪರಿಣತಿ ಹೊಂದಿ ಕಾರ್ಯನಿರ್ವಹಿಸಿದ್ದಾರೆ. ಹೊಂಗೆ ಎಣ್ಣೆಯ ಬಳಕೆಯನ್ನು ಚಾಲ್ತಿಗೆ ತರುವಲ್ಲಿ ಶ್ರೀನಿವಾಸರ ಕೊಡುಗೆ ಅಪಾರವಾದುದು. ಹೊಂಗೆ ಎಣ್ಣೆಯನ್ನು ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಮಿಶ್ರಣ ಮಾಡಿ ಬಳಸಲಾಗುತ್ತಿದೆ. 2008ರಿಂದ ಕರ್ನಾಟಕ ಜೈವಿಕ ಇಂಧನ ಮಂಡಳಿಯ ಜೈವಿಕ ಇಂಧನ ಕಾರ್ಯ ಪಡೆಯ ಕಾರ್ಯನಿರ್ವಹಣ ಸಮಿತಿಯ ಸದಸ್ಯರಾಗಿರುವ ಶ್ರೀನಿವಾಸ್‌ ಇದು ವರೆಗೂ ಮುಂದುವರಿಯುತ್ತಿದ್ದಾರೆ.

ಸಂತೋಷವಾಗಿದೆ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ನನ್ನಿಂದಾದ ಸೇವೆಯನ್ನು ಸಲ್ಲಿಸಿದ್ದೇನೆ.
 - ಪ್ರೊ| ಉಡುಪಿ ಶ್ರೀನಿವಾಸ್‌,

ನ್ಯಾಯಾಂಗ ಸೇವೆಗೆ ಸಂದ ಗೌರವ
ಕಾಸರಗೋಡಿನ ಎಣ್ಮಕಜೆ ಗ್ರಾಮದ ಖಂಡಿಗೆ ಎಂಬಲ್ಲಿ ಕೆ.ಎನ್‌. ಭಟ್‌ ಅವರ ಜನನ. 1962ರಲ್ಲಿ ಕಾನೂನು ಪದವಿ ಪೂರೈಸಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ಶುರು ಮಾಡಿದ್ದರು. 1986ರಲ್ಲಿ ಅವರು ಸುಪ್ರೀಂ ಕೋರ್ಟ್‌ ವಕೀಲರಾದರು.  1996ರಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು. 2010ರಲ್ಲಿ ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ರಾಮನ ಪರ ವಾದಿಸಲು ಅಲಹಾಬಾದ್‌ ಹೈಕೋರ್ಟ್‌ ಕೋರಿತ್ತು. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದನ್ನು ಪೂರ್ಣಪ್ರಮಾಣದಲ್ಲಿ ಪ್ರತಿಪಾದಿಸಿದ್ದರು. ಈ ಸಂಬಂಧ ಅಗತ್ಯ ದಾಖಲೆ ಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹಲವು ಅಪರೂಪದ ದಾಖಲೆಗಳನ್ನು ಸಂಗ್ರಹಿಸಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದವರು.

ಟಾಪ್ ನ್ಯೂಸ್

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಲಪ್ಪ ಸೂಚನೆ

ಮಳೆಗಾಲದಲ್ಲಿ ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಸಭೆಯಲ್ಲಿ ಹಾಲಪ್ಪ ಸೂಚನೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

21school

ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

20fever

ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.