ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ
Team Udayavani, May 20, 2022, 9:50 PM IST
ಬೆಂಗಳೂರು: ಸಹೋದರಿಗೆ ವಿಚ್ಚೇಧನ ನೀಡಿದ ಭಾವನನ್ನು ಜೈಲಿಗೆ ಕಳುಹಿಸಲು ಭಾಮೈದುನೊಬ್ಬ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಟೈಂಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ವಿಲ್ಸನ್‌ಗಾರ್ಡ್ ನಿವಾಸಿ ಸುಭಾಷಿಸ್ ಕುಮಾರ್ ಗುಪ್ತಾ(35) ಬಂಧಿತ. ಆರೋಪಿ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದು, ಈ ಹಿಂದೆ ಏರ್‌ಪೋರ್ಟ್‌ನ ಕಾರ್ಗೋ ಕೊರಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಕೆಲಸ ಬಿಟ್ಟಿದ್ದಾನೆ.
ಪಿಜಿಯಲ್ಲಿ ವಾಸವಾಗಿದ್ದ ಅರೋಪಿ ಮುಂಜಾನೆ 3.30ರ ಸುಮಾರಿಗೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಂ ಬಾಂಬ್ ಇಟ್ಟಿದ್ದು, ಅರ್ಧಗಂಟೆಯಲ್ಲಿ ಸ್ಫೋಟಗೊಳ್ಳುತ್ತದೆ ಎಂದಿದ್ದಾನೆ. ಅಲ್ಲದೆ, ಈ ಬಾಂಬ್ ಇಟ್ಟಿರುವುದು ದೀಪಕ್ ಸೋಲಾರ್ ಎಂಬಾತ ಎಂದು ಉಲ್ಲೇಖೀಸಿದ್ದಾನೆ. ಅದರಿಂದ ಗಾಬರಿಗೊಂಡ ಸಹಾಯವಾಣಿ ಸಿಬ್ಬಂದಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು, ವಿಮಾನ ನಿಲ್ದಾಣ ಪೊಲೀಸರಿಗೆ ರವಾನಿಸಿದ್ದಾನೆ. ನಂತರ ಇಡೀ ವಿಮಾನ ನಿಲ್ದಾಣವನ್ನು ಶ್ವಾನದಳ, ಬಾಂಬ್ ನಿಷ್ಟ್ರೀಯ ದಳ, ಪೊಲೀಸರು ಹಾಗೂ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ, ಸಿಐಎಸ್‌ಎಪ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾಗ ಬಾಂಬ್ ಪತ್ತೆಯಾಗಿಲ್ಲ. ನಂತರ ಇದು ಹುಸಿಕರೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ : ಸಾಲ ತೀರಿಸಲು ತನ್ನ ಸಹೋದರಿಯ ಮನೆಯಲ್ಲೇ ಬರೋಬ್ಬರಿ 31 ಲಕ್ಷದ ಚಿನ್ನಾಭರಣ ಕದ್ದ ಸಹೋದರ
ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಸಿಡಿಆರ್ ಆಧರಿಸಿ ಬಂಧಿಸಲಾಗಿದೆ. ವಿಚಾರಣೆ ವೇಳೆ ದೀಪಕ್ ಸೋಲಾರ್ ತನ್ನ ಅಕ್ಕನನ್ನು ಮದುವೆಯಾಗಿದ್ದು, ಇದೀಗ ಕೌಟುಂಬಿಕ ವಿಚಾರಕ್ಕೆ ವಿಚ್ಛೇಧನ ನೀಡಿದ್ದಾನೆ. ಹೀಗಾಗಿ ಆತನನ್ನು ಜೈಲಿಗೆ ಕಳುಹಿಸಲು ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ
ಅಂಜನಾದ್ರಿಗೆ ಮೈಸೂರು ಒಡೆಯರ್ ಕುಟುಂಬ ಭೇಟಿ; ದೇವರ ದರ್ಶನ
ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ
ಜು. 1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲೂ ಕಟ್ಟುನಿಟ್ಟಿನ ಜಾರಿಗೆ ಕ್ರಮ
ಶಿರಾಡಿ ಘಾಟಿ: ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಬಂದ್ ಬೇಡಿಕೆ