ಸುಮಲತಾ ಅಂಬರೀಶ್‌ಗೆ ಊಟ ಕಳುಹಿಸಿದ ಭಾರತಿ

Team Udayavani, Nov 28, 2018, 6:00 AM IST

ಬೆಂಗಳೂರು: ಅಂಬರೀಶ್‌ ನಿಧನದ ನಂತರ ಅವರ ಮನೆ ಕಳೆಗುಂದಿದೆ. ಯಜಮಾನನಿಲ್ಲದೇ ಮನೆ ಬಿಕೋ ಎನ್ನುತ್ತಿದೆ.
ಅಂಬರೀಶ್‌ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್‌ಗೆ ಸಾಂತ್ವನ ಹೇಳಲು ಸಾಕಷ್ಟು ಜನರು ಆಗಮಿಸುತ್ತಿದ್ದ ದೃಶ್ಯ
ಮಂಗಳವಾರ ಕಂಡು ಬಂದಿತು. 

ಮತ್ತೂಂದೆಡೆ, ಕಳೆದ ಮೂರು ದಿನಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಬಳಲಿರುವ ಅಂಬಿ ಪತ್ನಿ ಮತ್ತು ಪುತ್ರನಿಗೆ ಭಾರತಿ ವಿಷ್ಣುವರ್ಧನ್‌ ತಮ್ಮ ಮನೆಯಲ್ಲಿ ಊಟ ತಯಾರು ಮಾಡಿ ಕಳುಹಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ತಾವು ಬರಲಾಗದೇ ಭಾರತಿ ವಿಷ್ಣುವರ್ಧನ್‌, ತಮ್ಮ ಕಾರು ಚಾಲಕನ ಕೈಯಲ್ಲಿ ಊಟ ಕಳುಹಿಸಿದ್ದಾರೆನ್ನಲಾಗಿದೆ. ಇನ್ನು, ಅಭಿಷೇಕ್‌ ಹಾಗೂ ಸುಮಲತಾ ಅವರಿಗೆ ಸಾಂತ್ವನ ಹೇಳಲು ಅನೇಕ ಮಂದಿ ಜೆ.ಪಿ.ನಗರದ ನಿವಾಸಕ್ಕೆ ಧಾವಿಸುತ್ತಿದ್ದಾರೆ. ಮಂಗಳವಾರ “ಅಮರ್‌’ ಚಿತ್ರದ ನಿರ್ದೇಶಕ ನಾಗಶೇಖರ್‌ ಸೇರಿ ಅನೇಕರು ಅಂಬರೀಶ್‌ ಅವರ ಮನೆಗೆ ಭೇಟಿ ನೀಡಿ, ಅಭಿಷೇಕ್‌ ಹಾಗೂ ಸುಮಲತಾ ಅವರಿಗೆ ಸಾಂತ್ವನ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ