ಬರ್ತ್‌ ಡೇ ಹಣವನ್ನು ಹುತಾತ್ಮ ಯೋಧರಿಗೆ ನೀಡಿದ ಬಾಲಕಿ 

Team Udayavani, Feb 16, 2019, 12:30 AM IST

ಬಳ್ಳಾರಿ: ನಗರದ ಖಾಸಗಿ ಶಾಲೆ ಬಾಲಕಿಯೊಬ್ಬಳು ತನ್ನ ಜನ್ಮದಿನಕ್ಕೆಂದು ವ್ಯಯಿಸುವ ಹಣವನ್ನು ಸಿಆರ್‌ಪಿಎಫ್‌ ಯೋಧರ ಕಲ್ಯಾಣ ನಿ ಧಿಗೆ ಸಲ್ಲಿಸುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾಳೆ.

ಗುರುಕುಲ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿ ತನುಶ್ರೀ ಫೆ.15ರಂದು ತನ್ನ 10ನೇ ವರ್ಷಕ್ಕೆ ಹೊಸಬಟ್ಟೆ, ಕೇಕ್‌ಗೆ ಖರ್ಚಾಗುವ 2600 ರೂ. ಹಣವನ್ನು ಪಾಲಕರಿಂದ ಕ್ರೋಢೀಕರಿಸಿ ಜಿಲ್ಲಾಧಿಕಾರಿ ರಾಮ್‌ ಪ್ರಸಾತ್‌ ಮನೋಹರ್‌ ಬಳಿ ತೆರಳಿ ಸಿಆರ್‌ಪಿಎಫ್‌ ಕಲ್ಯಾಣ ನಿ ಧಿಗೆ ಸಲ್ಲಿಸಿದ್ದಾರೆ. 9ನೇ ವರ್ಷದ ಹುಟ್ಟು ಹಬ್ಬದಂದು 960 ರೂ. ಯೋಧರ ನಿಧಿ ಗೆ ಕಳುಹಿಸಿದ್ದಳು. ಈ ಕುರಿತು ಬಾಲಕಿ ತನುಶ್ರೀ ಮಾತನಾಡಿ, ದೇಶದಲ್ಲಿ ಸೈನಿಕರು ನಮಗಾಗಿ ಕಷ್ಟ ಪಡುತ್ತಿದ್ದಾರೆ.

ನಮಗಾಗಿ ಪ್ರಾಣ ತ್ಯಜಿಸುತ್ತಿದ್ದಾರೆ. ಮೃತ ಸೈನಿಕ ಮಕ್ಕಳು ತಮ್ಮ ಅಪ್ಪನ ಫೋಟೋ ಇಟ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಅವರಿಗೆ ನಮ್ಮಿಂದ ಸ್ವಲ್ಪ ಸಹಾಯವಾಗಲೆಂದು ಹುಟ್ಟುಹಬ್ಬದ ದಿನದಂದು ದುಡ್ಡು ಕೊಟ್ಟು ಚಾಕೋಲೇಟ್‌, ಕೇಕ್‌ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಇನ್ನೊಬ್ಬರಿಗೆ ಸಹಾಯವಾಗಲೆಂದು ನನ್ನ ಹುಟ್ಟುಹಬ್ಬದ ಹಣವನ್ನು ಯೋಧರಿಗೆ ನೀಡುತ್ತಿದ್ದೇನೆ ಎಂದಳು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ