ಕೊರೊನಾ ಜಾಗೃತಿಗೆ ಬಿರಿಯಾನಿ ಮೇಳ
Team Udayavani, Mar 2, 2020, 3:04 AM IST
ಬಳ್ಳಾರಿ: ಕೋಳಿ ಮಾಂಸ ಸೇವನೆಯಿಂದ ಕೊರೊನಾ ವೈರಸ್ ಬರಲಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ ಹಿನ್ನೆಲೆ ಯಲ್ಲಿ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಪೌಲ್ಟ್ರಿ ಫಾಮ್ಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಭಾನುವಾರ ಚಿಕನ್ ಬಿರಿಯಾನಿ ಮೇಳ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಚೀನಾವನ್ನು ಮಾರಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ರಾಜ್ಯದಲ್ಲೂ ಆತಂಕ ಸೃಷ್ಟಿ ಸಿದ್ದು, ಕೋಳಿ ಮಾಂಸ ಮತ್ತದರ ಮೊಟ್ಟೆ ತಿಂದರೆ ಕೊರೊನಾ ವೈರಸ್ ಆವರಿಸಲಿದೆ ಎಂಬ ಸುದ್ದಿ ರಾಜ್ಯದೆಲ್ಲೆಡೆ ಹರಡಿತ್ತು. ಪರಿಣಾಮ ಚಿಕನ್ ಬೆಲೆ ಕುಸಿದಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ಮೇಳ ಆಯೋಜಿಸಲಾಗಿತ್ತು.
ಒಂದು ಸಾವಿರ ಕೆ.ಜಿ. ಕೋಳಿ ಮಾಂಸ ಬಳಸಿ ಸುಮಾರು 3 ಸಾವಿರ ಜನರಿಗಾಗುವಷ್ಟು ಚಿಕನ್ ಬಿರಿಯಾನಿ, ಚಿಕನ್ ಪಕೋಡಾ, ಮೊಟ್ಟೆ ಕರ್ರಿ, ಮೊಸರನ್ನ ಸಿದ್ಧಪಡಿಸಲಾಗಿತ್ತು. ಒಬ್ಬರಿಗೆ ಕೇವಲ 149 ರೂ. ಶುಲ್ಕ ವಿಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ
ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು
ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ
ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ