ಬಿಟ್ ಕಾಯಿನ್ ರಾಜಕೀಯ: ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಚಿವ ಆರಗ ಜ್ಞಾನೇಂದ್ರ

Team Udayavani, Nov 2, 2021, 12:39 PM IST

ಆರಗ ಜ್ಞಾನೇಂದ್ರ

ಬೆಂಗಳೂರು: 2018ರಲ್ಲೇ ಯುಬಿ ಸಿಟಿ ಗಲಾಟೆಯಲ್ಲಿ ಈ ಶ್ರೀಕಿ ಸಿಕ್ಕಿದ್ದಾಗ ಸಿದ್ದರಾಮಯ್ಯನವರು ಯಾಕೆ ಆತನನ್ನು ಬಂಧಿಸಿಲ್ಲ? ಇಬ್ಬರು ಕಾಂಗ್ರೇಸ್ ನಾಯಕರ ಮಕ್ಕಳ ಜೊತೆ ಸಿಕ್ಕಿಬಿದ್ದಾಗ ಯಾಕೆ ಅರೆಸ್ಟ್ ಮಾಡಿ ತನಿಖೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಚಿವ ಆರಗ ಜ್ಞಾನೇಂದ್ರ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿಗಳನ್ನ ರಕ್ಷಣೆ ಮಾಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ನಾವೂ ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ಆತನನ್ನು (ಶ್ರೀಕಿ) ಬಂಧಿಸಿದ್ದೆವು. ತನಿಖೆ ಮಾಡಿದಾಗ ಬಿಟ್ ಕಾಯಿನ್ ವಿಚಾರದಲ್ಲೂ ಈತನ ಪಾತ್ರ ಗೊತ್ತಾಗಿದೆ. ಹೀಗಾಗಿ ನಾವೂ ಇಡಿ ಮತ್ತು ಇಂಟರ್ ಪೋಲ್ ಗೆ ಶಿಫಾರಸ್ಸು ಮಾಡಿದ್ದೇವೆ ಎಂದರು.

ನಮ್ಮಲ್ಲಿ ಯಾವ ಘಟಾನುಘಟಿ ನಾಯಕರೂ ಸಂಪರ್ಕದಲ್ಲಿಲ್ಲ. ಆತನ ಜೊತೆಗೆ ಯಾರ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಸಿದ್ದರಾಮಯ್ಯನವರು ಹೇಳಲಿ. ಆತನ ಸಂಪರ್ಕದಲ್ಲಿ ಇರುವುದು ಕಾಂಗ್ರೇಸ್ ನವರೇ. ಯಾರನ್ನು ರಕ್ಷಣೆ ಮಾಡುವ ಕೆಲಸ ನಾವು ಮಾಡುವುದಿಲ್ಲ ಎಂದರು.

ಇದನ್ನೂ ಓದಿ:ಸಿಂದಗಿಯಲ್ಲಿ ಭರ್ಜರಿ ಮುನ್ನಡೆ ಪಡೆದ ಬಿಜೆಪಿಯ ರಮೇಶ ಭೂಸನೂರ: ಗೆಲುವು ಖಚಿತ

ಉಪಚುನಾವಣೆ ಕುರಿತು ಮಾತನಾಡಿದ ಅವರು, ಸಿಂದಗಿ ಹಾಗೂ ಹಾನಗಲ್‌ನಲ್ಲಿ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಹಿನ್ನಡೆ ಇದೆ. ಆದರೆ ಇನ್ನೂ ಮತ ಎಣಿಕೆ ಬಾಕಿ ಇದೆ. ಮುಂದಿನ ಸುತ್ತುಗಳಲ್ಲಿ ನಾವು ಮುನ್ನಡೆಯಾಗುತ್ತದೆ. ನಾನು ಕೂಡ ಹಾನಗಲ್ ಹೋಗಿ ಬಂದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಚಾರ ಮಾಡಿದ್ದಾರೆ. ಉದಾಸಿ ಕುಟುಂಬವೂ ಸಾಕಷ್ಟು ಕೆಲಸ ಮಾಡಿದೆ ಎಂದರು.

ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶದ ಕುರಿತು ಮಾತನಾಡಿದ ಅವರು, ಇಂದು ಪುನಿತ್ ರಾಜಕುಮಾರ್ ಕಾರ್ಯ ಇದೆ. ಕುಟುಂಬದ ಎಲ್ಲ ಕೈಂಕರ್ಯ ಮುಗಿಯಲಿ. ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಅಂತಿಮ ದರ್ಶನಕ್ಕೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25ಲಕ್ಷ ಜನ ದರ್ಶನ ಪಡೆದಿದ್ದಾರೆ. ಸಮಾಧಿ ದರ್ಶನಕ್ಕೂ ನಾವು ವ್ಯವಸ್ಥೆ ಮಾಡುತ್ತೇವೆ ಎಂದರು.

ಟಾಪ್ ನ್ಯೂಸ್

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಗೋಕಳ್ಳತನ ತಡೆಗೆ ನಿರ್ದಾಕ್ಷಿಣ್ಯ ಕ್ರಮ; ಪೊಲೀಸರಿಗೆ ಸಚಿವ ಸುನಿಲ್‌ ಸೂಚನೆ

ಗೋಕಳ್ಳತನ ತಡೆಗೆ ನಿರ್ದಾಕ್ಷಿಣ್ಯ ಕ್ರಮ; ಪೊಲೀಸರಿಗೆ ಸಚಿವ ಸುನಿಲ್‌ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಹರಿಪ್ರಸಾದ್‌ ಪರಿಷತ್‌ ವಿಪಕ್ಷ ನಾಯಕ; ಪ್ರಕಾಶ್‌ ರಾಥೋಡ್‌ ಸಚೇತಕ, ಗೋವಿಂದರಾಜು ಉಪನಾಯಕ

ಹರಿಪ್ರಸಾದ್‌ ಪರಿಷತ್‌ ವಿಪಕ್ಷ ನಾಯಕ; ಪ್ರಕಾಶ್‌ ರಾಥೋಡ್‌ ಸಚೇತಕ, ಗೋವಿಂದರಾಜು ಉಪನಾಯಕ

ವಲಸೆ ಮೂರರಲ್ಲೂ ಸಮಸ್ಯೆ

ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ವಲಸೆ ಮಾತಿನ ಸಮರ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ದಿಲ್ಲಿಯಲ್ಲಿ ಮೆರೆದ ಉಡುಪಿ ವಿದ್ಯಾರ್ಥಿಗಳ ಕಂಗೀಲು ನೃತ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ನಾನಾಗಿಯೇ ಮಾತನಾಡಲ್ಲ, ಅವರಾಗಿ ಬಂದರೆ ಮಾತನಾಡುವೆ: ಸಿದ್ದರಾಮಯ್ಯ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

astrology today

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

3,026 ಗ್ರಾ.ಪಂ.ನಲ್ಲಿ “ಗ್ರಾಮ ಒನ್‌’ ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.